Tips For Credit Score Increase: ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಬಹಳ ಮುಖ್ಯವಾಗಿದೆ. ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಎಲ್ಲದಕ್ಕೂ ಕೂಡ ಸಿಬಿಲ್ ಸ್ಕೋರ್ ಅತಿ ಅಗತ್ಯವಾಗಿದೆ. 750 + ಸಿಬಿಲ್ ಸ್ಕೋರ್ ಇಲ್ಲದಿದ್ದರೆ ಬ್ಯಾಂಕುಗಳು ಅತೀ ಹೆಚ್ಚು ಬಡ್ಡಿಯನ್ನು ಸಾಲದ ಮೇಲೆ ವಿಧಿಸುತ್ತದೆ. ಸಿಬಿಲ್ ಸ್ಕೊರ್ ಹಲವು ಕಾರಣಗಳಿಂದ ಕಡಿಮೆ ಆಗುತ್ತದೆ ಮತ್ತು ಹಣಕಾಸು ವಹಿವಾಟಿನಲ್ಲಿ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ ಹೆಚ್ಚಿನ ಸಿಬಿಲ್ ಸ್ಕೊರ್ ಕಾಪಾಡಿಕೊಳ್ಳಬಹುದು. ಹಾಗಾದರೆ ಕಡಿಮೆಯಾಗಿರುವ ಸಿಬಿಲ್ ಸ್ಕೊರ್ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಯಾವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
CBIL SCORE ಎಂದರೇನು..?
CIBIL ಸ್ಕೋರ್ ಎನ್ನುವುದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ 3 ಅಂಕಿಯ ಸಂಖ್ಯೆಯಾಗಿದೆ. ಇದು ಸಾಲದಾತರಿಗೆ ನೀವು ಸಾಲ ಮರುಪಾವತಿ ಮಾಡುವಲ್ಲಿ ಎಷ್ಟು ಸಕ್ರಿಯರಾಗಿದ್ದೀರಿ ಮತ್ತು ನಿಮ್ಮ ಮರುಪಾವತಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಆಧರಿಸಿ CIBIL ಸ್ಕೋರ್ ಅನ್ನು ಲೆಕ್ಕಹಾಕಲಾಗುತ್ತದೆ. ಸಿಬಿಲ್ ಸ್ಕೋರ್ 300 ರಿಂದ 900 ಪಾಯಿಂಟ್‌ಗಳ ನಡುವೆ ಇರುತ್ತದೆ,
750+ – ಉತ್ತಮ (ಕಡಿಮೆ ಬಡ್ಡಿ ಸಾಲ)
700 ರಿಂದ 749 – ಸಾಧಾರಣ
699 ಕ್ಕಿಂತ ಕಡಿಮೆ – ಸಾಲ ಸಿಗುವುದು ಕಷ್ಟ
https://www.cibil.com/ ಅಥವಾ Umang ಆಪ್ ನಲ್ಲಿ ಉಚಿತ ಸಿಬಿಲ್ ರಿಪೋರ್ಟ್ ಪ್ರತಿಯನ್ನು ತಿಂಗಳಿಗೆ ಒಮ್ಮೆ ಪಡೆದುಕೊಳ್ಳಬಹುದು.
2025 ರಲ್ಲಿ CIBIL SCORE ಹೆಚ್ಚಿಸಲು ಟಿಪ್ಸ್
* ಪೇಮೆಂಟ್ ಹಿಸ್ಟರಿ (35%) – ಒಂದೇ ಒಂದು ತಡವಾದ ಪೇಮೆಂಟ್ ಬೇಡ
* Credit Utilization (30%) – ಕ್ರೆಡಿಟ್ ಕಾರ್ಡುಗಳನ್ನು 10 ರಿಂದ 20% ಮಾತ್ರ ಬಳಕೆ ಮಾಡಿ
* ಕ್ರೆಡಿಟ್ ಹಿಸ್ಟರಿ (15%) – ಹಳೆಯ ಕಾರ್ಡ್ ಮುಚ್ಚಬೇಡಿ
* ಹೊಸ ಕ್ರೆಡಿಟ್ (10%) – 12 ತಿಂಗಳಲ್ಲಿ 2 ಕ್ಕಿಂತ ಹೆಚ್ಚು ಹಾರ್ಡ್ inquiry ಬೇಡ
* ಕ್ರೆಡಿಟ್ ಮಿಕ್ಸ್ (10%) – Secured (Gold loan) + Unsecured (Credit card)
600 ಕ್ಕಿಂತ ಕಡಿಮೆ Cibil Score ಇದ್ದವರು 90 ದಿನಗಳಲ್ಲಿ 80-150 ಪಾಯಿಂಟ್ ಏರಿಕೆ ಮಾಡಿಕೊಳ್ಳಿ
2. 1 ರಿಂದ 30 ದಿನಗಳ ಒಳಗೆ
* ಸಿಬಿಲ್ ರಿಪೋರ್ಟ್ ಪಡೆದುಕೊಳ್ಳಿ
* ಬಾಕಿ ಬಿಲ್ ಗಳನ್ನ ಕ್ಲಿಯರ್ ಮಾಡಿಕೊಳ್ಳಿ
* ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.
1. 31 ರಿಂದ 90 ದಿನಗಳ ಒಳಗೆ
* ಕಾರ್ಡ್ ಬಂದ ತಕ್ಷಣ 500 ರಿಂದ 1000 ಖರ್ಚು ಮಾಡಿ
* CUR 10% ಉಳಿಸಿ
* ಯಾವುದೇ ಹೊಸ ಅರ್ಜಿ ಸಲ್ಲಿಸಬೇಡಿ
ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
* ಎಲ್ಲ ಕ್ರೆಡಿಟ್ ಕಾರ್ಡ್ ಒಮ್ಮೆಲೇ ಮುಚ್ಚುವುದು
* ಗ್ಯಾರಂಟರ್ ಆಗಿ ಸಹಿ ಹಾಕುವುದು
* ಕ್ರೆಡಿಟ್ ರಿಪೇರ್ ಕಂಪನಿಗಳಿಗೆ 20,000 ದಿಂದ 50,000 ರೂ ಕೊಟ್ಟು ಮೋಸ ಹೋಗುವುದು
Disclaimer: This information is provided for awareness purposes only. For personalised legal advice, consult a qualified professional and refer to official government notifications.

