Sanju Basayya: ಪ್ರೀತಿಸಿದ ಹುಡುಗಿಯನ್ನ ಮದುವೆಯಾದ ಸಂಜು ಬಸಯ್ಯ, ಇಬ್ಬರ ಫೋಟೋಸ್ ವೈರಲ್.

ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಅವರು ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಿಕೊಂಡಿದ್ದಾರೆ.

Comedy Khiladigalu Sanju Basayya Marriage: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ತಮ್ಮ ಹಾಸ್ಯ ನಟನೆಯ ಮೂಲಕ ಸಂಜು ಬಸಯ್ಯ ಅವರು ಕೋಟ್ಯಾಂತರ ಅಭಿಮಾನಿಗಳ ಗಮನ ಸೆಳೆದಿದ್ದರು. ಅಲ್ಲದೆ ತಮ್ಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇದೀಗ ಸಂಜು ಬಸಯ್ಯ (Sanju Basayya) ಅವರ ಮದುವೆ ವಿಚಾರ ಸುದ್ದಿಯಾಗುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು ಬಸಯ್ಯ
ಹಾಸ್ಯ ಕಲಾವಿದ ಸಂಜು ಬಸಯ್ಯ ಅವರು ತಾವು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮದುವೆಯಾಗಿದ್ದಾರೆ. ಹಲವು ದಿನಗಳಿಂದ ಅವರು ಪಲ್ಲವಿ ಬಳ್ಳಾರಿ ಎನ್ನುವವರನ್ನು ಪ್ರೀತಿಸುತ್ತಿದ್ದರು.

Sanju Basaiya and Pallavi registered marriage
Image Credit: hindustantimes

ಇವರು ಪ್ರೀತಿಸುತ್ತಿದ್ದ ವಿಷಯ ಗಾಸಿಪ್ ಕಾಲಂ ನಲ್ಲಿ ಕೂಡ ಕಾಣಿಸಿಕೊಂಡಿತ್ತು. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಚಾರವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಸಂಜು ಬಸಯ್ಯ
ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಸಂಜು ಬಸಯ್ಯ ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು ಎಂದು ಶುರು ಮಾಡಿ, ತಮ್ಮ ಲವ್ ಸ್ಟೋರಿಯನ್ನು ಕೂಡ ಬಹಿರಂಗಗೊಳಿಸಿದ್ದಾರೆ.

Sanju Basaiya and Pallavi registered marriage
Image credit: hindustantimes

ರಿಜಿಸ್ಟರ್ ಮ್ಯಾರೇಜ್ ಆದ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿ
ಇಲ್ಲಿಯವರೆಗೆ ನನ್ನ ಹಾಗು ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತ್ತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ಈಗ ನಾವಿಬ್ಬರು ಕಾನೂನುಬದ್ಧವಾಗಿ, ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ.

Join Nadunudi News WhatsApp Group

ನಮ್ಮ ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ. ನಿಜವಾದ ಪ್ರೀತಿಗೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ ಎಂದು ಸಂಜು ಮತ್ತು ಪಲ್ಲವಿ ಬರೆದುಕೊಂಡಿದ್ದಾರೆ.

Join Nadunudi News WhatsApp Group