Compensation Amt: ರಾಜ್ಯದ ಈ ರೈತರ ಖಾತೆಗೆ 2000 ರೂ ಜಮಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆ

ಬೆಳೆ ಪರಿಹಾರದ ಮೊದಲ ಕಂತಿನ ಹಣ ರೈತರ ಖಾತೆಗೆ ಜಮಾ, ಈ ರೈತರ ಖಾತೆಗೆ ಹಣ ಜಮಾ

Compensation Amount Released In Karnataka: ಸರ್ಕಾರ ರೈತರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ. ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾದ ಕಾರಣ ರೈತರ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.  ರೈತರಿಗೆ ಸರ್ಕಾರ ಬೆಳೆ ಪರಿಹಾರ ಘೋಷಣೆ ಮಾಡಿದ್ದು, ಇದೀಗ ಬೆಳೆ ಪರಿಹಾರದ ಮೊದಲ ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದೆ ಎನ್ನುವ ಬಗ್ಗೆ ವರದಿಯಾಗಿದೆ.

Compensation Amount Release
Image Credit: Siasat

ರೈತರ ಖಾತೆಗೆ ಜಮಾ ಆಗಿದೆ 2000 ರೂ.
ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಬರದಿಂದಾಗಿ ರೈತರು ತಮ್ಮ ಬೆಳೆಯನ್ನು ಕಳೆದುಕೊಂಡು ನಷ್ಟವನ್ನು ಎದುರಿಸುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ರೈತರು ತಮ್ಮ ಬೆಳೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಚಿಂತಿಸುವಂತಾಗಿದೆ. ರಾಜ್ಯದ 236 ತಾಲೂಕುಗಳ ಪೈಕಿ 223 ರಾಜ್ಯಗಳು ಬರದಿಂದ ತತ್ತರಿಸಿ ಹೋಗಿವೆ. ಈ ಬೆಳೆ ಹಾನಿಯಿಂದಾಗಿ 35 ಸಾವಿರ ಕೋಟಿ ನಷ್ಟ ಉಂಟಾಗಿದೆ. ಈ ಹಿನ್ನಲೆ ಕೇಂದ್ರಕ್ಕೆ 18 ಸಾವಿರ ಕೋಟಿ ಬೆಳೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ.

ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ರಾಜ್ಯ ಸರ್ಕರ ಬರ ಪೀಡಿತ ರೈತರಿಗೆ 2000 ರೂ. ಬೆಳೆ ಪರಿಹಾರ ಮೊತ್ತವನ್ನು ಜಮಾ ಮಾಡುವುದಾಗಿ ಘೋಷಿಸಿದೆ. ಮೊದಲೇ ಕಂತಿನಲ್ಲಿ ರೂ. 2000 ಬೆಳೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

Crop Compensation Amount For Farmers
Image Credit: Krishijagran

ರಾಜ್ಯ ಸರ್ಕಾರದಿಂದ 105 ಕೋಟಿ ರೂ. ಬಿಡುಗಡೆ
ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2000 ರೂ. ಬೆಳೆ ಪರಿಹಾರ ರಾಷ್ಟ್ರೀಯ ರೈತರ ದಿನದಂದು ಜಮಾ ಆಗಿದೆ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ತಕ್ಷಣ ಈ ಕೆಲಸವನ್ನು ಪೂರ್ಣಗೊಳಿಸಿದೆ. 2023 -24 ನೇ ಸಾಲಿನಲ್ಲಿ ಬರದಿಂದ ಶೇ. 33 ರಷ್ಟು ಬೆಳೆಯನ್ನು ಕಳೆದುಕೊಂಡ ಮಳೆಯಾಶ್ರಿತ ರೈತರಿಗೆ ಬೆಳೆ ಪರಿಹಾರ ಸಿಗಲಿದೆ. ಈ ಹಿನ್ನಲೆ ಸರ್ಕಾರ 105 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.

Join Nadunudi News WhatsApp Group

Join Nadunudi News WhatsApp Group