Bus Ticket: ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಕೊಡುವ ಟಿಕೆಟ್ ಹೇಗಿರುತ್ತದೆ, ಅದರಲ್ಲಿ ಏನಿರಲಿದೆ.

ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಟಿಕೆಟ್ ಬಿಡುಗಡೆ ಮಾಡಿದ ಸರ್ಕಾರ.ಕಡ್ಡಾಯವಾಗಿ ಟಿಕೆಟ್ ಪಡೆಯಲೇಬೇಕು.

Free Bus Ticket For Women’s: ರಾಜ್ಯದಲ್ಲಿ ಜೂನ್ 11 ರಿಂದ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಲಭ್ಯವಾಗಲಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಬಸ್ ಪ್ರಯಾಣದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ಉಚಿತ ಪ್ರಯಾಣಕ್ಕಾಗಿ ಸರ್ಕಾರ ಒಂದಿಷ್ಟು ಷರತ್ತುಗಳ್ನು ಹಾಕಿದೆ. ಇನ್ನು ಸರ್ಕಾರದ ಈ ಉಚಿತ ಬಸ್ ಪ್ರಯಾಣದ ಕುರಿತು ಒಂದಿಷ್ಟು ವಿವರಗಳನ್ನು ತಿಳಿಯೋಣ.

Tickets for free travel
Image Credit: vijayavani

ಉಚಿತ ಪ್ರಯಾಣ ಮಾಡುವ ಮಹಿಳೆಯರು ಕಡ್ಡಾಯವಾಗಿ ಟಿಕೆಟ್ ಪಡೆಯಬೇಕು
ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ವರ್ಗಗಳ ಮಹಿಳೆಯರಿಗೆ ರಾಜ್ಯದಲ್ಲಿ ಜೂನ್ 11 ರಿಂದ ಎಸಿ ಹಾಗೂ ಐಷಾರಾಮಿ ಬಸ್ ಗಳನ್ನೂ ಹೊರತುಪಡಿಸಿ ಇತರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡಲಾಗಿದೆ.

ಇನ್ನು ಉಚಿತ ಬಸ್ ಪ್ರಯಾಣದ ವೇಳೆ ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ. ಶಕ್ತಿ ಯೋಜನೆಗಾಗಿ ಟಿಕೆಟ್ ರಚನೆಯಾಗಿದ್ದು ಒಂದಿಷ್ಟು ವಿಶೇಷತೆಯನ್ನು ಹೊಂದಿದೆ. ಟಿಕೆಟ್ ನ ಮೇಲೆ ‘ಮಹಿಳಾ ಪ್ರಯಾಣಿಕರ ಉಚಿತ ಶಕ್ತಿ ಚೀಟಿ’ ಎಂದು ಬರೆಯಲಾಗುತ್ತದೆ. ಈ ಹಿಂದೆ ಬಸ್ ಪ್ರಯಾಣದ ವೇಳೆ ಕಂಡಕ್ಟರ್ ಬಳಿ ಟಿಕೆಟ್ ಪಡೆಯುವ ವಿಧಾನದಲ್ಲೇ ಟಿಕೆಟ್ ಪಡೆಯಬೇಕು. ಆದರೆ ಟಿಕೆಟ್ ಗೆ ಪಡೆಯುವಾಗ ಹಣ ನೀಡುವ ಅಗತ್ಯ ಇರುವುದಿಲ್ಲ.

Tickets for free travel
Image Credit: edairynews

ಉಚಿತ ಬಸ್ ಪ್ರಯಾಣದ ಷರತ್ತುಗಳು
*ಮಹಿಳೆಯರು ತಮ್ಮ ಫೋಟೋ ಜೊತೆಗೆ ವಿಳಾಸ ಧ್ರಡೀಕರಿಸಲಾದ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ನ ಮೂಲಕ ಪ್ರಯಾಣ ಮಾಡಬಹುದು. ಉಚಿತ ಪ್ರಯಾಣಕ್ಕೆ ಪ್ರತ್ಯೇಕ ಬಸ್ ಪಾಸ್ ನೀಡಲಾಗುವುದಿಲ್ಲ.
*ಎಸಿ ಹಾಗೂ ಐಷಾರಾಮಿ ಬಸ್ ಗಳನ್ನೂ ಹೊರತುಪಡಿಸಿ ಇತರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸರಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು.

Women traveling free must get tickets
Image Credit: statenews

*ಬೆಂಗಳೂರು ನಗರದಲ್ಲಿಯುವ ಮಹಿಳೆಯರು BMTC ವೋಲ್ಟ್ ಬಸ್ ಗಳನ್ನೂ ಹೊರತುಪಡಿಸಿ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಸಂಚರಿಸಬಹುದು.
*ಕರ್ನಾಟಕದಲ್ಲಿ ಮಾತ್ರ ಈ ಉಚಿತ ಪ್ರಯಾಣ ಲಭ್ಯವಿದೆ. ಹೊರ ರಾಜ್ಯಗಳ ಪ್ರಯಾಣಕ್ಕೆ ಉಚಿತ ಪ್ರಯಾಣ ನೀಡಲಾಗುವುದಿಲ್ಲ.
*ಸರ್ಕಾರದ ನಾಲ್ಕು ನಿಗಮಗಳ ಬಸ್ ಗಳಲ್ಲೂ ಉಚಿತ ಪ್ರಯಾಣವನ್ನು ನೀಡಲಾಗುವುದು.

Join Nadunudi News WhatsApp Group

Join Nadunudi News WhatsApp Group