Yuva Nidhi Scheme : ಯುವ ನಿಧಿ ಗ್ಯಾರಂಟಿ ಯೋಜನೆ ಯಾವಾಗ ಜಾರಿಗೆ? ಹಣಕ್ಕಾಗಿ ಕಾಯುತ್ತಿದ್ದವರಿಗೆ ಗೂಡ್ ನ್ಯೂಸ್

ಯುವ ನಿಧಿ ಯೋಜನೆಗೆ ಅಗತ್ಯವಿರುವ ದಾಖಲೆಗಳು ಇಲ್ಲಿದೆ ಮಾಹಿತಿ

Congress Yuva Nidhi Scheme Updates: ಕಾಂಗ್ರೆಸ್ (Congress) ಸರಕಾರದ ಮುಖ್ಯ ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಜಾರಿಗೆ ಬಂದಿದ್ದು, ಇದರಲ್ಲಿ ಯುವ ನಿಧಿ ಯೋಜನೆ ಒಂದೇ ಜಾರಿಗೆ ಬರಲು ಬಾಕಿ ಇದೆ.ಇದರಲ್ಲಿ ಗೃಹ ಜ್ಯೋತಿ (Gruha Jyothi), ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯೋಜನೆ ಈಗಾಗಲೇ ಆರಂಭ ವಾಗಿದೆ.ಕರ್ನಾಟಕ ನಿರುದ್ಯೋಗಿ ಯುವಕ ಯುವತಿಯರ ಅಭಿವೃದ್ಧಿ ಗಾಗಿ ಸರ್ಕಾರ ಈ ಯೋಜನೆ ಜಾರಿಮಾಡಿದ್ದು, ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.

ಆರ್ಹತೆ ಏನು

ಈ ಯೋಜನೆಗೆ ಅರ್ಜಿ ಹಾಕುವವರು ಕರ್ನಾಟಕದ ಖಾಯ ನಿವಾಸಿಯಾಗಿರಬೇಕೆಂದು,ಮತ್ತು ನಿರುದ್ಯೊಗಿ ಯಾಗಿರಬೇಕು. ಅರ್ಜಿದಾರರು ಪದವೀಧರ ರಾಗಿರಬೇಕು ಅಥವಾ ಡಿಪ್ಲೊಮಾ (Diploma)ಪದವಿ ಪಡೆದಿರಬೇಕು.ಮತ್ತು ಅರ್ಜಿ ಹಾಕುವವರು 2022-2023 ರಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.ಉದ್ಯೋಗ ದೊರೆತ ನಂತರ ಅಭ್ಯರ್ಥಿಗಳು ಕಡ್ಡಾಯ ವಾಗಿ ಮಾಹಿತಿ ನೀಡಬೇಕು.

Karnataka Yuva Nidhi Scheme 2023
Image Credit: Pmmodiyojana

ಎಷ್ಟು ಹಣ

ಈ ಯೋಜನೆಯ ಮೂಲಕ ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ ಸಿಗಲಿದ್ದು, ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಹಣ ನೀಡಲಾಗುತ್ತದೆ.

Join Nadunudi News WhatsApp Group

ಯುವನಿಧಿ ಯೋಜನೆ ಜಾರಿ ಯಾವಾಗ?

ಈ ಯುವನಿಧಿ ಯೋಜನೆಯು ಜನವರಿಯಲ್ಲಿ ಆರಂಭ ವಾಗಲಿದ್ದು, ಯಾವಾಗ ಅರ್ಜಿ ಹಾಕಬೇಕು, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಯನ್ನು ಡಿಸೆಂಬರ್ ನಲ್ಲಿ ನೀಡಲಾಗುತ್ತದೆ. ಈ ಸೌಲಭ್ಯವು 2 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗಲಿದ್ದು 2 ವರ್ಷದೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ.

C M Siddaramaiah About Yuva Nidhi Scheme
Image Credit: News18

ಅಗತ್ಯವಿರುವ ದಾಖಲೆಗಳು

ಅರ್ಜಿ ಹಾಕುವವರ ಆಧಾರ್ ಕಾರ್ಡ್.
ಮೊಬೈಲ್ ನಂಬರ್
ಫೋಟೋ
ಆದಾಯ ಪ್ರಮಾಣಪತ್ರ.
ಕಾಲೇಜು ನೋಂದಣಿಪತ್ರ
ಪದವಿ ಅಂಕ ಪಟ್ಟಿ
ಡಿಪ್ಲೊಮಾ ಅಂಕಪಟ್ಟಿ, ಇತ್ಯಾದಿ ಬೇಕು.

Join Nadunudi News WhatsApp Group