New Rule: ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ಸರ್ಕಾರದಿಂದ ಹೊಸ ರೂಲ್ಸ್, ಇನ್ಮುಂದೆ ಕಟ್ಟಬೇಕು ದುಬಾರಿ ದಂಡ.

ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ಸರ್ಕಾರದಿಂದ ಹೊಸ ರೂಲ್ಸ್

New Rule For Contractors: ಸದ್ಯ ರಾಜ್ಯದಲ್ಲಿ ಸರ್ಕಾರ ಹೊಸ ಹೊಸ ನಿಯಮಗಳನ್ನು ರೂಪಿಸುತ್ತಿದೆ. ಜನಸಾಮಾನ್ಯರು ಸರ್ಕಾರದ ಪ್ರತಿ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ. ಸದ್ಯ ರಾಜ್ಯ ಸರ್ಕಾರ ಗುತ್ತಿಗೆ ಕಾಮಗಾರಿ ಮಾಡುತ್ತಿರುವವರಿಗೆ ಹೊಸ ನಿಯಮವನ್ನು ರೂಪಿಸಿದೆ. ಗುತ್ತಿಗೆ ಕಾಮಗಾರಿಯಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಈ ಹೊಸ ನಿಯಮ ಜಾರಿಗೆ ಮುಂದಾಗಿದೆ.

Contract Labour Latest News
Image Credit: nlsgroup

ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ಸರ್ಕಾರದಿಂದ ಹೊಸ ರೂಲ್ಸ್
ರಾಜ್ಯ ಸರಕಾರದಿಂದ ಗುತ್ತಿಗೆ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ತಡೆಯಲು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದುವರೆಗಿನ ಒಪ್ಪಂದದ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಿಗ್ ಶಾಕ್ ನೀಡಿದೆ. ನಿಯಮ ಪಾಲಿಸದಿದ್ದಲ್ಲಿ ಡಿಬಾರ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಲೋಕೋಪಯೋಗಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯಕುಮಾರಿ ಕೆ.ಸಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ನಿಯಮಗಳು, 2000 ರ ನಿಯಮ 26(ಎ) ಅನುಸಾರವಾಗಿ ಟೆಂಡರ್ದಾರರು ಅಥವಾ ಗುತ್ತಿಗೆದಾರರು ಅಥವಾ ಸರಬರಾಜುದಾರರು ಅಥವಾ ಅವರ ಯಾವುದೇ ಉತ್ತರಾಧಿಕಾರಿಯನ್ನು ಡಿಬಾರ್ ಮಾಡಲು ಸಂಗ್ರಹಣಾ ಏಜೆನ್ಸಿಯ ಮಟ್ಟದಲ್ಲಿ ಡಿಬಾರ್ಮೆಂಟ್ ಸಮಿತಿಯನ್ನು ರಚಿಸುವ ಕುರಿತು ದಿನಾಂಕ: 27.07.2022 ರ ಸುತ್ತೋಲೆಯಲ್ಲಿ ಸೂಚನೆಗಳನ್ನು ನೀಡಲಾಗಿದೆ.

ಇನ್ಮುಂದೆ ಕಟ್ಟಬೇಕು ದುಬಾರಿ ದಂಡ
ಸಂಗ್ರಹಣಾ ಪ್ರಾಧಿಕಾರಿಗಳು ಹಣಕಾಸು ಇಲಾಖೆಯ ಅಧಿಸೂಚನೆ ಸಂಖ್ಯೆ: FD 884 Exp-12/2019, ದಿನಾಂಕ: 07.05.2020 ರಲ್ಲಿ ಹೊರಡಿಸಲಾದ KTPP ಯ ನಿಯಮ 26A ಅಡಿಯಲ್ಲಿ ಡಿಬಾರ್ಮೆಂಟ್ ಸಮಿತಿಯನ್ನು ರಚಿಸಲು ಮತ್ತು ಅದರಲ್ಲಿ ತಿಳಿಸಲಾದ ಕಾರ್ಯವಿಧಾನವನ್ನು ಅನುಸರಿಸಲು ಮತ್ತು ಡಿಬಾರ್ಮೆಂಟ್ ನಂತರ ನಿಯಮ 260 ಅಡಿಯಲ್ಲಿ ಕ್ರಮ ಕೈಗೊಳ್ಳಲು ವಸೂಲಾತಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ, ಗುತ್ತಿಗೆದಾರರನ್ನು ಯಾವ ಸಂದರ್ಭಗಳಲ್ಲಿ ಡಿಬಾರ್ ಮಾಡಬೇಕು ಎಂಬುದರ ಕುರಿತು ಸಂಗ್ರಹಣಾ ಅಧಿಕಾರಿಗಳ ಮಟ್ಟದಲ್ಲಿ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಹೇಳಲಾಗಿದೆ.

New Rule For Contractors
Image Credit: Ijpiel

Join Nadunudi News WhatsApp Group

Join Nadunudi News WhatsApp Group