Crop Compensation: ರಾಜ್ಯ ಸರ್ಕಾರದ ಬರ ಪರಿಹಾರ ಮೊತ್ತ ನಿಮ್ಮ ಖಾತೆಗೆ ಬಂದಿದೆಯಾ..? ಈ ರೀತಿಯಾಗಿ ಚೆಕ್ ಮಾಡಿ.

ನಿಮ್ಮ ಖಾತೆಗೆ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಪರಿಶೀಲಿಸಿಕೊಳ್ಳಲು ಈ ಹಂತವನ್ನು ಅನುಸರಿಸಿ

Crop Compensation Amount Checking Process: ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲರಿಗು ತಿಳಿದೇ ಇದೆ. ಮಳೆಯ ಅಭಾವದಿಂದ ಸಾಕಷ್ಟು ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಬೆಳೆ ಹಾನಿಯಾದ ಕಾರಣ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಬರ ಪರಿಹಾರದ ರೂಪದಲ್ಲಿ ನೆರವಾಗಲು ಮುಂದಾಗಿತ್ತು. ರೈತರಿಗೆ ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ರಾಜ್ಯ ಸರ್ಕಾರ ಮೊದಲ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.

Crop Compensation Amount Checking Process
Image Credit: Thehansindia

ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಹಣ ಜಮಾ
ಈಗಾಗಲೇ ರಾಜ್ಯ ಸರ್ಕಾರ ಬರಪೀಡಿತ ರೈತರಿಗೆ ಮೊದಲ ಕಂತಿನ 2000 ರೂ. ಹಣವನ್ನು ಅರ್ಹರ ಖಾತೆಗೆ ಜಮಾ ಮಾಡಿದೆ. ಅರ್ಹ ಫಲಾನುಭವಿಗಳು ತಮ್ಮಾ ಖಾತೆಗೆ ಹಣ ಬಂದಿದೆಯೋ..? ಅಥವಾ ಇಲ್ಲವೋ..? ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು. ಖಾತೆಯನ್ನು ಪರಿಶೀಲಿಸಿಕೊಳ್ಳಲು ಸಂಪೂರ್ಣ ವಿಧಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಲಿದ್ದೇವೆ. ನಿಮ್ಮ ಖಾತೆಗೆ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಪರಿಶೀಲಿಸಿಕೊಳ್ಳಲು ಈ ಹಂತವನ್ನು ಅನುಸರಿಸಿ.

ರಾಜ್ಯ ಸರ್ಕಾರದ ಬರ ಪರಿಹಾರ ಮೊತ್ತ ನಿಮ್ಮ ಖಾತೆಗೆ ಬಂದಿದೆಯಾ..? ಈ ರೀತಿಯಾಗಿ ಚೆಕ್ ಮಾಡಿ
•Google Play Store ನಿಂದ ನಿಮ್ಮ ಫೋನ್‌ ನಲ್ಲಿ DBT Karnataka App ಅನ್ನು ಡೌನ್‌ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

•ಅಪ್ಲಿಕೇಶನ್ ತೆರೆಯಿರಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಪಡೆಯಿರಿ ಆಯ್ಕೆಯನ್ನು ಆರಿಸಿ.

Join Nadunudi News WhatsApp Group

•ಈಗ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ, ಅದನ್ನು ನಮೂದಿಸಿ ಮತ್ತು ವೆರಿಫೈ OTP ಆಯ್ಕೆಯನ್ನು ಆರಿಸಿ.

•ಈಗ ನೀವು ಯೋಜನೆಗಳ ಫಲಾನುಭವಿಯ ಸಂಪೂರ್ಣ ಮಾಹಿತಿಯನ್ನು ನೋಡುತ್ತೀರಿ. ಫೋನ್ ಸಂಖ್ಯೆಯನ್ನು ನಮೂದಿಸಲು ಒಂದು ಆಯ್ಕೆ ಇದೆ, ಆ ಸ್ಥಳದಲ್ಲಿ ನಿಮ್ಮ ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ನಮೂದಿಸಿ. ಸರಿ ಆಯ್ಕೆಯನ್ನು ಆರಿಸಿ.

•ಈಗ ನೀವು mPIN ಅನ್ನು ರಚಿಸಬೇಕಾಗಿದೆ. 4-ಅಂಕಿಯ PIN ಸಂಖ್ಯೆಯನ್ನು ರಚಿಸಿ ನಂತರ ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Crop Compensation Amount
Image Credit: Swarajyamag

•ನಂತರ ನೀವು ಫಲಾನುಭವಿ ಆಯ್ಕೆಯನ್ನು ನೋಡುತ್ತೀರಿ, ಇಲ್ಲಿ ನೀವು ಸೇರಿಸಿದ ಫಲಾನುಭವಿಯ ಹೆಸರನ್ನು ಆಯ್ಕೆ ಮಾಡಿ.

•ಆಯ್ಕೆ ಮಾಡಿದ ನಂತರ, mPIN ಅನ್ನು ನಮೂದಿಸಿ ಮತ್ತು ಅಪ್ಲಿಕೇಶನ್‌ ಗೆ ಲಾಗಿನ್ ಮಾಡಿ.

•ಇಲ್ಲಿ ನೀವು Payment Status ಎಂಬ ಆಯ್ಕೆಯನ್ನು ಕಾಣಬಹುದು. ಅದನ್ನು ಆಯ್ಕೆ ಮಾಡಿ.

•ಈ ಎಲ್ಲ ಪ್ರಕ್ರಿಯೆಯ ನಂತರ ನೀವು ಯಾವ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯುತ್ತೀರಿ ಎಂಬ ವಿವರಗಳನ್ನು ನೋಡುತ್ತೀರಿ. ಅಲ್ಲಿ Input Subsidy for Crop Loss ಆಯ್ಕೆಯನ್ನು ಆರಿಸಿ.

•ನಿಮ್ಮ ಬ್ಯಾಂಕ್ ಖಾತೆಗೆ ಪರಿಹಾರ ಹಣ ಬಂದಿದೆಯೇ..? ಎನ್ನುವ ಬಗ್ಗೆ ಈ ಪೇಜ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Join Nadunudi News WhatsApp Group