Compensation Amount: ಬೆಳೆ ಪರಿಹಾರ ಮೊತ್ತ ಪಡೆಯಲು ತಕ್ಷಣ ಈ ಕೆಲಸಗಳನ್ನು ಮುಗಿಸಿ.

ಬೆಳೆ ಪರಿಹಾರದ ಮೊತ್ತ ಖಾತೆಗೆ ಜಮಾ ಆಗಿದೆಯೇ ಎಂದು ಈ ರೀತಿ ಪರಿಶೀಲಿಸಿಕೊಳ್ಳಿ.

Crop Compensation Amount Status Check: ಪ್ರಸ್ತುತ ರಾಜ್ಯದಲ್ಲಿ ಬೆಳೆ ಪರಿಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದರಿಂದಾಗಿ ರೈತರು ಖುಷಿಯಲ್ಲಿದ್ದಾರೆ ಎನ್ನಬಹುದು. 2023-24ರ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಗಾಗಿ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿದೆ.

ಈಗಾಗಲೇ ಮೊದಲ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಠ ರೂ. 2000 ವರೆಗೆ ಅರ್ಹವಾಗಿ ಪಾವತಿಸಿದ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಪರಿಗಣಿಸಿ, ಉಳಿದ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಅರ್ಹರಿಗೆ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ರೈತರು ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲ್ಲವೇ ಎನ್ನುವುದನ್ನು ಪರಿಶೀಲಿಸ್ಕೊಳ್ಳಿ.

Crop Compensation Amount Status Check
Image Credit: Bansalnews

ಬೆಳೆ ಪರಿಹಾರ ಮೊತ್ತ ಪಡೆಯಲು ತಕ್ಷಣ ಈ ಕೆಲಸಗಳನ್ನು ಮುಗಿಸಿ
ಇನ್ನು ಸರ್ಕಾರದಿಂದ ಬೆಳೆ ಪರಿಹಾರ ಮೊತ್ತ ಬಿಡುಗಡೆ ಆಗಿದ್ದರು ಕೂಡ ಕೆಲ ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ನಿಮ್ಮ ಹೆಸರು ಆಧಾರ್ ಮತ್ತು ಫ್ರೂಟ್ಸ್ ಐಡಿಯೊಂದಿಗೆ ಹೊಂದಿಕೆಯಾಗದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಬ್ಯಾಂಕ್‌ ನ IFSC ಕೋಡ್ ತಪ್ಪಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವ ಕಾರಣ ಹಾಗೂ ಇತರೆ ಕಾರಣಗಳಿಂದ ಪರಿಹಾರವನ್ನು ಜಮಾ ಮಾಡಲಾಗುವುದಿಲ್ಲ.

ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿ ಪರಿಶೀಲಿಸಿಕೊಳ್ಳಿ
ರೈತರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. FRUITS ಸಾಫ್ಟ್‌ ವೇರ್‌ ನಲ್ಲಿ ಹೆಸರನ್ನು ನವೀಕರಿಸಬೇಕು. ರೈತರು ಬ್ಯಾಂಕ್‌ ಗೆ ಹೋಗಿ ಎನ್‌ಪಿಸಿಐ ಮಾಡಬೇಕು. ಖಾತೆಯನ್ನು ನಿರ್ಬಂಧಿಸಿದರೆ ಅಥವಾ ಮುಚ್ಚಿದ್ದರೆ, ಅದನ್ನು ಮರು-ತೆರೆಯಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ IFSC, N.P.C.I ಅನ್ನು ನವೀಕರಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗವುತ್ತದೆ. ರೈತರು https://parihara.karnataka.gov.in/service92/ ಈ ವೆಬ್‌ ಸೈಟ್‌ ನಲ್ಲಿ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Crop Compensation Money Credit
Image Credit: Agriculturepost

Join Nadunudi News WhatsApp Group

Join Nadunudi News WhatsApp Group