Crop Compensation: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಖಾತೆಗೆ ಬರ ಪರಿಹಾರದ ಇನ್ನೊಂದು ಕಂತು ಬಿಡುಗಡೆ

ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ಬರ ಪರಿಹಾರ ಮೊತ್ತ ಜಮಾ.

Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ . ಬೆಳೆ ನಷ್ಟದಿಂದ ಸಮಸ್ಯೆಗೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತ ನೆರವಾಗುತ್ತಿದೆ.

ಸದ್ಯ ರಾಜ್ಯ ಸರ್ಕಾರ ಬರ ಪೀಡಿತ ರಾಜ್ಯದ ಮಳೆಯಾಶ್ರಿತ/ ಒಣ ಭೂಮಿಯಲ್ಲಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಸಿಹಿ ಸುದ್ದಿ ನೀಡಿದೆ. ರೈತರ ಜೀವನ ನಿರ್ವಹಣೆಗಾಗಿ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದೆ.

Farmers Crop Compensation
Image Credit: Deccanherald

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಿಹಿ ಸುದ್ದಿ
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬರ ಪೀಡಿತ ರಾಜ್ಯದ ಮಳೆಯಾಶ್ರಿತ/ ಒಣ ಭೂಮಿಯಲ್ಲಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಗರಿಷ್ಠ ರೂ. 2784 ಜೀವನೋಪಾಯ ಪರಿಹಾರ ವಿತರಿಸಲಾಗಿದೆ. ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರು ಸೇರಿದಂತೆ 17,84,398 ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನಾಧಾರ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಶೀಘ್ರವೇ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.

ರೈತರ ಖಾತೆಗೆ ಬರ ಪರಿಹಾರ ಮೊತ್ತ ಜಮಾ
ಕಳೆದ ವರ್ಷ ತೀವ್ರ ಬರದಿಂದಾಗಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಬರಗಾಲದಿಂದ ಆರ್ಥಿಕವಾಗಿ ಹಿಂದುಳಿದಿದ್ದ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದವು. ಆ ಕುಟುಂಬದ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅನುಕಂಪ ತೋರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜೀವನೋಪಾಯ ನಷ್ಟ ಪರಿಹಾರ ವಿತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ಇದೀಗ ಮತ್ತೊಮ್ಮೆ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ನೆರವಾಗಲು ಮುಂದಾಗಿದೆ.

Farmers Crop Compensation Money
Image Credit: Karnataka Times

ನಿಮ್ಮ ಖಾತೆಗೆ ಬಂದಿದೆಯಾ ಈ ರೀತಿ ಚೆಕ್ ಮಾಡಿ
ರೈತರು  ಬೆಳೆ ಪರಿಹಾರ ಮೊತ್ತವನ್ನು ಪಡೆಯಲು ಮುಖ್ಯವಾಗಿ FRUITS ಸಾಫ್ಟ್‌ ವೇರ್‌ ನಲ್ಲಿ ಹೆಸರನ್ನು ನವೀಕರಿಸಬೇಕು. ರೈತರು ಬ್ಯಾಂಕ್‌ ಗೆ ಹೋಗಿ ಎನ್‌ಪಿಸಿಐ ಮಾಡಬೇಕು. ಖಾತೆಯನ್ನು ನಿರ್ಬಂಧಿಸಿದರೆ ಅಥವಾ ಮುಚ್ಚಿದ್ದರೆ, ಅದನ್ನು ಮರು-ತೆರೆಯಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ IFSC, N.P.C.I ಅನ್ನು ನವೀಕರಿಸಬೇಕು.

Join Nadunudi News WhatsApp Group

ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗುತ್ತದೆ. ಈ ಕೆಲಸಗಳನ್ನು ನೀವು ಮಾಡುವಲ್ಲಿ ವಿಫಲವಾದರೆ ನೀವು ಪರಿಹಾರ ಮೊತ್ತದಿಂದ ವಂಚಿತಾಗಾರಬೇಕಾಗುತ್ತದೆ.  ರೈತರು https://parihara.karnataka.gov.in/service92/ ಈ ವೆಬ್‌ ಸೈಟ್‌ ನಲ್ಲಿ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Farmers Crop Compensation Latest Update
Image Credit: Devdiscourse

Join Nadunudi News WhatsApp Group