7th Pay: ಸರ್ಕಾರೀ ನೌಕರರ 18 ತಿಂಗಳ DA ಕುರಿತಂತೆ ಬಿಗ್ ಅಪ್ಡೇಟ್, ಸಂಬಳದಲ್ಲಿ ದೊಡ್ಡ ಬದಲಾವಣೆ

ಸರ್ಕಾರೀ ನೌಕರರ 7 ನೇ ವೇತನದ ಬಗ್ಗೆ ಇನ್ನೊಂದು ಬಿಗ್ ಅಪ್ಡೇಟ್

DA For Employees: ಸದ್ಯ ಕೇಂದ್ರ ನೌಕರರ ಪಿಂಚಣಿ ಮತ್ತು ಡಿಎ ಹೆಚ್ಚಳದ ಬಗ್ಗೆ ಸರ್ಕಾರ ಸಾಕಷ್ಟು ಚರ್ಚೆ ನಡೆಸುತ್ತಿದೆ. ನೌಕರರು ಆದಷ್ಟು ಬೇಗ ಹೆಚ್ಚಿನ ವೇತನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಈ ತಿಂಗಳಿನಲ್ಲಿಯೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸಲಿದೆ. ಸರ್ಕಾರ ಅಧಿಕೃತ ಘೋಷಣೆಗಾಗಿ ನೌಕರರು ಕಾಯುತ್ತಿದ್ದಾರೆ.

ಸದ್ಯ 7 ನೇ ವೇತನದ ಆಯೋಗದ 18 ತಿಂಗಳ ಬಾಕಿ ಇರುವ ವೇತನದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು 7 ನೇ ವೇತನ ಆಯೋಧದ ಬಗ್ಗೆ ಇನ್ನೊಂದು ಬಿಗ್ ಅಪ್ಡೇಟ್ ಬಂದಿದ್ದು ಇದು ಸರ್ಕಾರೀ ನೌಕರರ ಸಂತಸಕ್ಕೆ ಕಾರಣವಾಗಿದೆ.

7th Pay Commission Latest Update
Image Credit: Live Mint

ಸರ್ಕಾರೀ ನೌಕರರ 18 ತಿಂಗಳ DA ಕುರಿತಂತೆ ಬಿಗ್ ಅಪ್ಡೇಟ್
ಕೇಂದ್ರ ನೌಕರರು ಮತ್ತು ಪಿಂಚಣಿದಾರರ 18 ತಿಂಗಳ ಡಿಎ ಬಾಕಿಗೆ ಸಂಬಂಧಿಸಿದಂತೆ ಹೊಸ ನವೀಕರಣ ಹೊರಬಿದ್ದಿದೆ. ಈ ಬಾಕಿಯನ್ನು ನೌಕರರಿಗೆ ಬಿಡುಗಡೆ ಮಾಡಬಹುದು. ಈ ಡಿಎ ಬಾಕಿಯು ಜನವರಿ 2020 ರಿಂದ ಜೂನ್ 2021 ರವರೆಗೆ ಇದೆ. ಸಚಿವಾಲಯವು ಇದನ್ನು ಹೆಚ್ಚಿಸಿದರೆ, ಉದ್ಯೋಗಿಗಳ ಸಂಬಳದಲ್ಲಿ ದೊಡ್ಡ ಹೆಚ್ಚಳವನ್ನು ಕಾಣಬಹುದು.

ಭಾರತೀಯ ಇಮ್ಯುನಿಟಿ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ 18 ತಿಂಗಳ DA ಪಾವತಿ ಕುರಿತಂತೆ ಪತ್ರ ಬರೆದಿದ್ದಾರೆ. ಜನವರಿ 25 ರಂದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಬಾಕಿ ಇರುವ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಬರೆಯಲಾಗಿದೆ. ಈ ಬಾಕಿಗಳು 18-ತಿಂಗಳ ಅವಧಿಗೆ ಸಂಬಂಧಿಸಿವೆ. ಈ ಅವಧಿಯಲ್ಲಿ DA ಮತ್ತು DR ಪಾವತಿಗಳನ್ನು ಸಾಂಕ್ರಾಮಿಕ ರೋಗದಲ್ಲಿನ ಆರ್ಥಿಕ ಒತ್ತಡದಿಂದಾಗಿ ಅಮಾನತುಗೊಳಿಸಲಾಗಿದೆ.

DA For Employees
Image Credit: The Economic Times

ಸಂಬಳದಲ್ಲಿ ದೊಡ್ಡ ಬದಲಾವಣೆ
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.

Join Nadunudi News WhatsApp Group

ಸದ್ಯ 7 ನೇ ವೇತನದ ಅಡಿಯಲ್ಲಿ ನೌಕರರ ವೇತನ ಹೆಚ್ಚಳದ ಜನವರಿ 30 ರೊಳಗೆ ಘೋಷಣೆ ಮಾಡಲಾಗುತ್ತದೆ. December AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಇನ್ನು ನೌಕರ DA ಹೆಚ್ಚಳದ ಜೊತೆಗೆ ಜನವರಿಯಲ್ಲಿ TA ಹಾಗೂ HRA ಕೊಡ ಹೆಚ್ಚಾಗುವ ಸಾಧ್ಯತೆ ಇದೆ.

Join Nadunudi News WhatsApp Group