Darshan Case: ದರ್ಶನ್ ಗೆ ಮರಣದಂಡನೆ ಆಗುತ್ತಾ…? ಇನ್ನಷ್ಟು ಬಿಗಿಯಾದ ಪ್ರಕರಣ.

ನಟ ದರ್ಶನ್ ಗೆ ಆಗುತ್ತಾ ಮರಣದಂಡನೆ...? ಇನ್ನಷ್ಟು ಬಿಗಿಯಾದ ಕೇಸ್

Darshan Case Latest Update: ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿಯಾಗಿವೆ.

ದೇಶದಲ್ಲಿ ಜಾರಿಯಾಗಿರುವ ಈ ಹೊಸ ಮೂರು ಕ್ರಿಮಿನಲ್ ಕಾನೂನುಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟವನ್ನು ನೀಡಲಿದೆ. ದರ್ಶನ್ ಅಪರಾಧಿ ಎಂದು ಸಾಭೀತಾದರೆ ಹೊಸ ಕ್ರಿಮಿನಲ್ ಕಾನೂನಿನ ಪ್ರಕಾರ ದರ್ಶನ್ ಮರಣ ದಂಡನೆಗೆ ಗುರಿಯಾಗುತ್ತಾರಾ…? ಎನ್ನುವ ಆತಂಕ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

darshan and renuka swamy case update
Image Credit: Original Source

ದರ್ಶನ್ ಗೆ ಮರಣದಂಡನೆ ಆಗುತ್ತಾ…?
ಕಳೆದ ವರ್ಷ ಡಿಸೆಂಬರ್‌ ನಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಯಿತು. ಈಗಿರುವ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಬದಲಿಗೆ ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಭಾರತೀಯ ದಂಡ ಸಂಹಿತೆ, ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಮೂರು ಹೊಸ ಕ್ರಿಮಿನಲ್ ಕಾನೂನುಗಳಾಗಿವೆ.

ಫೆಬ್ರವರಿ 2024 ರಲ್ಲಿ ಈ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಇದರ ಪ್ರಕಾರ, ಜುಲೈ 1 ರಿಂದ ಜಾರಿಯೋಗೆ ತರಲಾಗಿದೆ. ದರ್ಶನ್ ಮೇಲಿನ ಆರೋಪ ಸಾಬೀತಾದರೆ ಮತ್ತಷ್ಟು ಸಂಕಷ್ಟ ಗ್ಯಾರಂಟಿ. ಏಕೆಂದರೆ, ಹೊಸ ಕ್ರಿಮಿನಲ್ ಕಾನೂನು ಈಗಿರುವದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ತಂದಿದೆ.

darshan and renuka swamy case latest update
Image Credit: Original Source

ಇನ್ನಷ್ಟು ಬಿಗಿಯಾದ ಪ್ರಕರಣ, ಆತಂಕದಲ್ಲಿ ಡಿ ಬಾಸ್ ಅಭಿಮಾನಿಗಳು
ಹೊಸ ಕ್ರಿಮಿನಲ್ ಕಾನೂನು ಭಯೋತ್ಪಾದಕರ ಆಸ್ತಿ ಮುಟ್ಟುಗೋಲು, ಅತ್ಯಾಚಾರ ಮಾಡಿದವರಿಗೆ ಮರಣದಂಡನೆ, ದೇಶದ್ರೋಹ, ವಿಧ್ವಂಸಕ ಕೃತ್ಯ, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಸಾಮೂಹಿಕ ಹತ್ಯೆಗಳಿಗೆ ಶಿಕ್ಷೆಯನ್ನು ಒಳಗೊಂಡಿರುತ್ತದೆ. ಇನ್ನು ಗುಂಪು ಹತ್ಯೆಯ ಶಿಕ್ಷೆಯ ಪ್ರಮಾಣ ಬೇರೆಯಾಗಲಿದೆ. ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಮತ್ತವರ ಗ್ಯಾಂಗ್ ಆರೋಪಿಗಳು.

Join Nadunudi News WhatsApp Group

ಹೀಗಾಗಿ ಪೊಲೀಸರು ಇದೊಂದು ಗುಂಪು ಹತ್ಯೆ ಎಂದು ಪರಿಗಣಿಸಿದರೆ ದರ್ಶನ್‌ ಗೆ ಸಂಕಷ್ಟ ಎದುರಾಗಬಹುದು. ಉದಾಹರಣೆಗೆ, ಹೊಸ ಕ್ರಿಮಿನಲ್ ಕಾನೂನಿನಲ್ಲಿ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳಾಗಿ ವಿಂಗಡಿಸಲಾಗಿದೆ.ಈ ಕಾಯಿದೆಯ ಪ್ರಕಾರ, ಗುಂಪು ಹತ್ಯೆಯಂತಹ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತದೆ.

ಈ ನಿಟ್ಟಿನಲ್ಲಿ ದರ್ಶನ್ ಅಪರಾಧಿ ಎಂದು ಸಾಬೀತಾದರೆ ಮರಣದಂಡನೆ ವಿಧಿಸುವುದಂತೂ ಖಚಿತ ಎನ್ನಲಾಗುತ್ತಿದೆ. ಹೊಸದಾಗಿ ಜಾರಿಗೆ ತರಲಾದ ಕಾನೂನಿನ ಪ್ರಕಾರ, ತನಿಖಾಧಿಕಾರಿಗಳು ಅಪರಾಧದ ದೃಶ್ಯವನ್ನು ವೀಡಿಯೊ ಮಾಡಬೇಕು. ಅಲ್ಲದೆ, ಪ್ರಕರಣದ ವಿಚಾರಣೆ ಮುಗಿದ ನಂತರ 45 ದಿನಗಳಲ್ಲಿ ತೀರ್ಪು ನೀಡಬೇಕು. ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ ಮತ್ತು ದರೋಡೆಯಂತಹ ಪ್ರಕರಣಗಳನ್ನು ದಾಖಲಿಸಲು ಇದುವರೆಗೆ ಯಾವುದೇ ನಿರ್ದಿಷ್ಟ ವಿಭಾಗ ಇರಲಿಲ್ಲ. ಈ ಹೊಸ ವ್ಯವಸ್ಥೆಯಲ್ಲಿ ಇರಲಿದೆ ಎಂದು ಕೇಂದ್ರ ತಿಳಿಸಿದೆ. ಈ ವೇಳೆ ಕೊಲೆ ಪ್ರಕರಣದಲ್ಲೂ ಗರಿಷ್ಠ ಗಲ್ಲು ಶಿಕ್ಷೆ ನೀಡಲು ಅವಕಾಶವಿದೆ ಎನ್ನಲಾಗಿದೆ.

darshan and renuka swamy case latest update
Image Credit: Original Source

Join Nadunudi News WhatsApp Group