Darshan Case: ದರ್ಶನ್ ಊಟದ ವಿಷಯವಾಗಿ ಇನ್ನೊಂದು ಕೋರ್ಟ್ ಮಹತ್ವದ ತೀರ್ಪು, ಬೇಸರದಲ್ಲಿ ದರ್ಶನ್

ಸದ್ಯ ದರ್ಶನ್ ಗೆ ಜೈಲೂಟವೇ ಗತಿ, ಕೋರ್ಟ್ ಆದೇಶ

Darshan Case New Update: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸೆರೆವಾಸದಿಂದ ದರ್ಶನ್ ಗೆ ಇನ್ನು ಮುಕ್ತಿ ಸಿಕ್ಕಿಲ್ಲ. ಪೊಲೀಸರು ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಮುಖ್ಯ ಸಾಕ್ಷ್ಯವನ್ನು ಕಲೆ ಹಾಕುತ್ತಿದ್ದಾರೆ.

ಇನ್ನು ಜೈಲಿನಲ್ಲಿ ಇರುವುದ ಕಷ್ಟವಾಗುತ್ತಿದೆ. ಸರಿಯಾದ ಊಟ ನಿದ್ದೆಯಿಲ್ಲದೆ ದರ್ಶನ್ ಅನಾರೋಗ್ಯಕ್ಕೆ ಕೂಡ ತುತ್ತಾಗಿದ್ದರು. ಅನಾರೋಗ್ಯಕ್ಕೆ ತುತ್ತಾದ ಕಾರಣ ದರ್ಶನ್ ಮನೆಯೂಟಕ್ಕಾಗಿ ಕೋರ್ಟ್ ನ ಮೊರೆಹೋಗಿದ್ದಾರೆ. ಸದ್ಯ ದರ್ಶನ್ ಮನೆಯೂಟದ ಮನವಿಯ ಬಗ್ಗೆ ಆದೇಶ ಹೊರಡಿಸಿದೆ.

Darshan Case New Updates
Image Credit: The Economic Times

ದರ್ಶನ್ ಮನೆಯೂಟದ ಆದೇಶ ಪ್ರಕಟ
ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆ ಊಟ ಬೇಕು ಎಂದು ದರ್ಶನ್ ಕೇಳಿದ್ದರು. ಅಲ್ಲದೆ, ಮನೆಯಿಂದ ಬಟ್ಟೆ, ಹಾಸಿಗೆ ತರಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಜುಲೈ 22ರಂದು ಅರ್ಜಿ ವಿಚಾರಣೆ ನಡೆದಿದ್ದು, ಜುಲೈ 26 ರಂದು ಆದೇಶ ಪ್ರಕಟವಾಗಿದೆ. ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಸಂಬಂಧ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 26 ರಂದು ಆದೇಶ ನೀಡಿದೆ. ಜೈಲು ಊಟದಿಂದಾಗಿ ಅಜೀರ್ಣ ಮತ್ತು ಭೇದಿ ಎಂದು ಹೇಳಿ ಮನೆಯಿಂದ ಊಟ ತರಲು ದರ್ಶನ್ ಅನುಮತಿ ಕೇಳಿದ್ದರು. ಜೈಲು ಕಾಯಿದೆಯನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ದರ್ಶನ್ ಇನ್ನು ಹಲವು ದಿನ ಜೈಲು ಒಟ್ಟ ತಿನ್ನುವುದೇ ಅನಿವಾರ್ಯವಾಗಿದೆ.

Renukaswamy murder case
Image Credit: Indianexpress

ಸದ್ಯ ದರ್ಶನ್ ಗೆ ಜೈಲೂಟವೇ ಗತಿ
ಜೈಲು ಊಟದಿಂದ ದರ್ಶನ್ ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಉಂಟಾದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲು ನಿಯಮಗಳಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್ ಈಗ ಆದೇಶ ಹೊರಡಿಸಿದ್ದಾರೆ. ಕೊಲೆ ಆರೋಪಿಗಳಿಗೆ ಮನೆ ಊಟ, ಬಟ್ಟೆ, ಹಾಸಿಗೆ ಸಿಗುವುದಿಲ್ಲ.

ಜೈಲು ನಿಯಮ 728 ಮನೆ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ನೀಡುವುದಿಲ್ಲ. ಹಾಗಾಗಿ ದರ್ಶನ್ ಕೊಲೆ ಆರೋಪ ಹೊತ್ತಿರುವ ಕಾರಣ ಈ ಸೌಲಭ್ಯ ನೀಡಲು ಸಾಧ್ಯವಿಲ್ಲ. ದರ್ಶನ್‌ ಗೆ ಈಗ ಇರುವ ಏಕೈಕ ಆಯ್ಕೆ ಎಂದರೆ ಹೈಕೋರ್ಟ್‌ ಮೆಟ್ಟಿಲೇರುವುದು. ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜುಲೈ 29 ಕ್ಕೆ ನಿಗದಿಯಾಗಿದೆ. ಹೈಕೋರ್ಟ್ ಈ ಬಗ್ಗೆ ಯಾವ ಆದೇಶ ಹೊರಡಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Darshan Latest News
Image Credit: Hindustantimes

Join Nadunudi News WhatsApp Group