Rules Changes: ಇಂದಿನಿಂದ ಬದಲಾಗಲಿದೆ ಈ 5 ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ಡಿಸೇಂಬರ್ ನಲ್ಲಿ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ.

December New Rule: ಸದ್ಯ 2023 ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಇನ್ನೇನು ಒಂದು ತಿಂಗಳು ಮುಗಿದರೆ ಹೊಸ ವರ್ಷ ಆರಂಭವಾಗಲಿದೆ. ಇನ್ನು 2023 ರ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಪ್ರತಿ ತಿಂಗಳು ಸಾಕಷ್ಟು ಹಣಕಾಸಿನ ನಿಯಮಗಳು ಕೂಡ ಬದಲಾಗಿದೆ.

ಎಲ್ಲ ಹೊಸ ನಿಯಮಗಳ ಗ್ರಹಕಾರ ಹಣಕಾಸಿನ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎನ್ನಬಹುದು. ಗ್ರಾಹಕರಿಗೆ ಕೇಂದ್ರದಿಂದ ಡಿಸೇಂಬರ್ ನಲ್ಲಿ ಸಾಕಷ್ಟು ಗಡುವು ಬದಲು ನಿಯಮಗಳ ಬದಲಾವಣೆ ಸೂಚಿಸಲಾಗಿದೆ. ನೀವು ವ್ಯವಹಾರ ಮಾಡುವ ಮುನ್ನ ಡಿಸೇಂಬರ್ ನಲ್ಲಿ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ತಿಳಿಯಿರಿ.

December New Rule
Image Credit: Hosa Kannada

 

ಡಿಸೇಂಬರ್ ನಲ್ಲಿ ಬದಲಾಗಲಿದೆ ಈ ಐದು ಹಣಕಾಸಿನ ನಿಯಮಗಳು
*ಆಸ್ತಿ ದಾಖಲೆ ಮರುಪಾವತಿಗೆ  RBI ನಿಯಮ
ಇನ್ನು RBI ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಬ್ಯಾಂಕ್ ನಲ್ಲಿ ಸಾಲ ಪಡೆದವರು ಸಾಲ ಮರುಪಾವತಿ ಮಾಡಿದ ಒಂದು ತಿಂಗಳೊಳಗೆ ಸಾಲವನ್ನು ನೀಡುವ ಸಲುವಾಗಿ ಸಲ್ಲಿಸಿದ್ದ ಪ್ರಾಪರ್ಟಿ ಡಾಕ್ಯುಮೆಂಟ್ ಗಳನ್ನೂ ಕಡ್ಡಾಯವಾಗಿ ಸಲ್ಲಿಸಬೇಕಿದೆ. ಬ್ಯಾಂಕ್ ಈ 30 ದಿನದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಾಲ ಪಡೆದವರಿಗೆ 5000 ರೂ. ದಂಡ ನೀಡಬೇಕಾಗುತ್ತದೆ.

*LPG Gas ಸಿಲಿಂಡರ್ ದರ
ಕಳೆದ ತಿಂಗಳು ಏರಿಕೆ ಕಂಡಿದ್ದ 19kg ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ December ತಿಂಗಳ ಮೊದಲ ದಿನವೇ ಬರೋಬ್ಬರಿ 21 ರೂ. ಏರಿಕೆ ಕಂಡಿದೆ. December 1 ರಿಂದ ಹೊಸ LPG ದರ ಜಾರಿಗೆ ಬರಲಿದೆ. ಇನ್ನು ದೆಹಲಿ 1796 ರೂ., ಕೋಲ್ಕತ್ತಾ 1908 ರೂ., ಮುಂಬೈ 1749 ರೂ., ಚೆನ್ನೈ 1968 ರೂ. ತಲುಪಿದೆ. ಕಳೆದ ಮೂರು ತಿಂಗಳಿನಿಂದ LPG Gas Cylinder ದರ ಏರಿಕೆ ಕಾಣುತ್ತಲೇ ಇದೆ. LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ಜನಸಾಮಾನ್ಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ.

Join Nadunudi News WhatsApp Group

LPG Cylinder Price Change
Image Credit: The Times Of India

*Life Certificate ಸಲ್ಲಿಕೆಗೆ ಗಡುವು
ಸದ್ಯ ಕೇಂದ್ರ ಸರ್ಕಾರ ಪ್ರತಿ ತಿಂಗಳು ಪಿಂಚಣಿ ಪಡೆಯುವವರಿಗೆ ಮಹತ್ವದ ನಿಯಮವನ್ನು ಪರಿಚಯಿಸಿದ್ದಾರೆ. ಪ್ರತಿ ಪಿಂಚಣಿದಾರವು ಕೂಡ ಜೀವನ್ ಪ್ರಮಾಣ ಪತ್ರವನ್ನು (Life Certificate) ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. November 30 ರೊಳಗೆ ಪಿಂಚಣಿದಾರರು Life Certificate ಸಲ್ಲಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯದೊಳಗೆ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸದಿದ್ದರೆ ಅಂತವರ ಪಿಂಚಣಿ December 1 ರಿಂದ ರದ್ದಾಗಲಿದೆ. ಜೀವನ್ ಪ್ರಮಾಣ ಪತ್ರ ಸಲ್ಲಿಕೆಯಾಗದವರ ಪಿಂಚಣಿ ಇಂದಿನಿಂದ ರದ್ದಾಗಲಿದೆ.

*ಮುಂಗಡ ತೆರಿಗೆ ಪಾವತಿ ಗಡುವು
ಒಂದು ಹಣಕಾಸು ವರ್ಷದಲ್ಲಿ 10,000 ರೂ. ಗಿಂತ ಹೆಚ್ಚಿನ ನಿವ್ವಳ ಆದಾಯ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಮೂರನೇ ತಮ್ಮ ಮೂರನೇ ತ್ರೈಮಾಸಿಕ ಕಂತಿನ ಮುಂಗಡ ತೆರಿಗೆಯನ್ನು December 15 ರೊಳಗೆ ಪಾವತಿಸಬೇಕು. ನಿಗದಿತ ಸಮಯದೊಳಗೆ ತೆರಿಗೆ ಮುಂಗಡ ಪಾವತಿ ಸಾಧ್ಯವಾಗದಿದ್ದರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ.

Advance Tax Payment Deadline
Image Credit: Cleartax

*ಡಿಮ್ಯಾಟ್ ಖಾತೆಗೆ ನಾಮನಿರ್ದೇಶನ ಸಲ್ಲಿಕೆಗೆ ಗಡುವು
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನ ವಿವರಗಳನ್ನು ಒದಗಿಸಲು December 31 2923 ರವರೆಗೆ SEBI ಗಡುವನ್ನು ನೀಡಿದೆ. ಭೌತಿಕ ಭದ್ರತಾ ಹೊಂದಿರುವವರು ತಮ್ಮ ಪಾನ್, ನಾಮನಿರ್ದೇಶನ, ಸಂಪರ್ಕ ವಿವರ ಎಲ್ಲವನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು.

Join Nadunudi News WhatsApp Group