Deepika Das Movie: ಪಾಯಲ್ ಆಗಿ ಬರುತ್ತಿದ್ದಾರೆ ನಟಿ ದೀಪಿಕಾ ದಾಸ್, ಬಿಗ್ ಬಾಸ್ ಚೆಲುವೆಯ ಹೊಸ ಸಿನಿಮಾ.
Deepika Das Payal Movie: ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ (Deepika das) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ದೀಪಿಕಾ ದಾಸ್ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ನಟಿ ದೀಪಿಕಾ ದಾಸ್ ತಮ್ಮ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾ ಇದ್ದಾರೆ. ಇದೀಗ ನಟಿ ದೀಪಿಕಾ ದಾಸ್ ತಮ್ಮ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಹೊಸ ಸಿನಿಮಾದ ಪೋಸ್ಟ್ ಹಂಚಿಕೊಂಡ ನಟಿ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ ತಮ್ಮ ಹೊಸ ಸಿನಿಮಾದ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದರ ಸಲುವಾಗಿ ಹೊಸ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ.
ಇದರಲ್ಲಿ ದೀಪಿಕಾ ದಾಸ್ ಅವರು ಪಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾವೆಲ್ ಗರ್ಲ್ ಲುಕ್ ನಲ್ಲಿರುವ ದೀಪಿಕಾ ದಾಸ್ ಅವರನ್ನು ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ದೀಪಿಕಾ ದಾಸ್ ಸಿನಿಮಾಗೆ ಶುಭ ಹಾರೈಸಿದ ಅಭಿಮಾನಿಗಳು
ದೀಪಿಕಾ ದಾಸ್ ಜಾಕೆಟ್ ಧರಿಸಿ, ಕೈಗೆ ಗ್ಲೌಸ್ ಗಳನ್ನೂ ಹಾಕಿ ಕ್ಯಾಪ್ ಧರಿಸಿ ಟ್ರಾವೆಲ್ ಬ್ಯಾಗ್ ಹೊತ್ತುಕೊಂಡು ಪೋಸ್ ನೀಡಿದ್ದಾರೆ. ನಟಿಯ ಈ ಹೊಸ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.
ಆದರೆ ಸಿನಿಮಾದ ಟೈಟಲ್ ಲಾಂಚ್ ಇನ್ನಷ್ಟೇ ನಡೆಯಬೇಕಿದೆ. ನಟಿ ದೀಪಿಕಾ ದಾಸ್ ಪಾತ್ರವನ್ನು ಮಾತ್ರ ಪರಿಚಯಿಸಲಾಗಿದೆ. ನಟಿ ದೀಪಿಕಾ ದಾಸ್ ಫಾಯಲ್ ಚಿತ್ರದ ಲುಕ್ ನೋಡಿ ಅಭಿಮಾನಿಗಳು ಕಮೆಂಟ್ ಮೂಲಕ ನಟಿ ದೀಪಿಕಾ ಅವರಿಗೆ ಶುಭ ಹಾರೈಸಿದ್ದಾರೆ.