Dhananjay spoke about Rashmika Mandanna: ರಶ್ಮಿಕಾ ಮಂದಣ್ಣ ಅವರನ್ನ ಯಾಕೆ ಬ್ಯಾನ್ ಮಾಡಬೇಕು, ರಶ್ಮಿಕಾ ಅವರನ್ನ ವಹಿಸಿಕೊಂಡ ಡಾಲಿ ಧನಂಜಯ್.

Dhananjay spoke about Rashmika Mandanna: ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna). ನಟ ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೆ ನಟಿಸಿ ತಮ್ಮ ಮೊದಲ ಚಿತ್ರದಲ್ಲಿ ಖ್ಯಾತಿ ಪಡೆದಿದ್ದರು.

ಅನಂತರ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಕನ್ನಡದ ಚಿತ್ರ ರಂಗದ ಮೂಲಕ ಪರಿಚಿತರಾದ ನಟಿ ನಂತರ ಕನ್ನಡದವರ ಟೀಕೆಗೆ ಒಳಗಾದರು. ಇದರಿಂದ ಇವರಿಗೆ ಕನ್ನಡ ಚಿತ್ರ ರಂಗದಿಂದ ಬ್ಯಾನ್ ಮಾಡಬೇಕು ಎಂಬ ಸುದ್ದಿ ಕೇಳಿ ಬರುತಿತ್ತು. ಇದಕ್ಕೆ ನಟ ಡಾಲಿ ಧನಂಜಯ್ (Daali Dhananjay) ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

Rashmika is a Kannada girl, why should she be banned? Dhananjay spoke on behalf of Rashmika.
Image Credit: siasat

ನಟಿ ರಶ್ಮಿಕಾ ಪರವಾಗಿ ಡಾಲಿ ಧನಂಜಯ್
ನಟಿ ರಶ್ಮಿಕಾ ಅವರನ್ನ ಕುರಿತು ನಟ ಧನಂಜಯ್ ಮಾತಾಡಿದ್ದಾರೆ. ರಶ್ಮಿಕಾ ಅವರನ್ನ ಕನ್ನಡದಿಂದ ಬ್ಯಾನ್ ಮಾಡಬೇಕು ಎಂದು ಹೇಳಿದ್ದಕ್ಕೆ ನಟ ಧನಂಜಯ್ ರಿಯಾಕ್ಷನ್ ಕೊಟ್ಟಿದ್ದಾರೆ.

ರಶ್ಮಿಕಾ ಕನ್ನಡದ ಹುಡುಗಿ ಯಾಕೆ ಬ್ಯಾನ್ ಮಾಡಬೇಕು ಎಂಬ ಪ್ರಶ್ನೆಯನ್ನು ಡಾಲಿ ಧನಂಜಯ್ ಕೇಳಿದ್ದಾರೆ. ಕಿರಿಕ್ ಹುಡುಗಿ ರಶ್ಮಿಕಾ ಸದ್ಯ ಸೌತ್ ಮತ್ತು ಬಾಲಿವುಡ್ ನಲ್ಲಿ ಬೆಳಗುತ್ತಿರುವ ನಟಿ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ ಸಂಸ್ಥೆಯ ಬಗ್ಗೆ ಹೇಳಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು.

Actor Dolly Dhananjay spoke after Rashmika Mandanna
Image credit: indianexpress

ರಶ್ಮಿಕಾ ಅವರನ್ನ ಕನ್ನಡ ಚಿತ್ರ ರಂಗದಿಂದ ಬ್ಯಾನ್ ಮಾಡಲೇಬೇಕು ಎಂಬ ಕೂಗು ಕೇಳಿಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯಾನ್ ಅಭಿಯಾನ ಕೂಡ ಆಗಿತ್ತು. ಇದೀಗ ಈ ವಿಚಾರದ ಬಗ್ಗೆ ಡಾಲಿ ಧನಂಜಯ್ ಸಂದರ್ಶವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

ಚಿತ್ರ ರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಸಿನಿರಂಗ ಎಲ್ಲರಿಗೂ ಓಪನ್ ಆಗಿದೆ. ಯಾರು ಯಾರನ್ನು ಇಲ್ಲಿ ಬರಬೇಡಿ ಎಂದು ಹೇಳೋಕ್ಕೆ ಆಗಲ್ಲ.

Actor Dolly Dhananjay took charge of Rashmika Mandanna and said why she should be banned from the film industry.
Image credit: thesouthfirst

 

ಸಣ್ಣ ಪುಟ್ಟ ತಪ್ಪಾಯ್ತು ಅಂದ ತಕ್ಷಣ ಮನೆ ಮಕ್ಕಳನ್ನ ಮನೆ ಯಿಂದ ಹೊರ ಹಾಕ್ತಿರಾ? ಇಲ್ಲವಲ್ಲಾ, ಆ ಜೀವನು ಅಷ್ಟೇ ಅವರು ಎಲ್ಲಿದ್ದರು ಕನ್ನಡದ ಹುಡುಗಿ ಎಂದು ನಟ ಧನಂಜಯ್ ರಶ್ಮಿಕಾ ಪರ ಖಡಕ್ ಉತ್ತರ ನೀಡಿದ್ದಾರೆ. ಇದಲ್ಲದೆ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿರುವ ಬಗ್ಗೆ ಧನಂಜಯ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Join Nadunudi News WhatsApp Group