ಚಿತ್ರರಂಗದ ಇನ್ನೊಬ್ಬ ಗಾಯಕನ ದಾರುಣ ಸಾವು, ಇಡೀ ಚಿತ್ರರಂಗವೇ ಕಣ್ಣೀರಿನಲ್ಲಿ ಮುಳುಗಿದೆ.

ಯಾಕೋ ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶದ ಇತರೆ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ, ಹೌದು ಒಬ್ಬರಾದ ಮೇಲೆ ಒಬ್ಬರು ಟಾಪ್ ನಟರು ಮತ್ತು ನಟಿಯರು ಸೇರಿದಂತೆ ಚಿತ್ರರಂಗದ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸುತ್ತಿದ್ದು ಸಿಡಿ ಚಿತ್ರರಂಗವೇ ಕಣ್ಣೀರಿನಲ್ಲಿ ಮುಳುಗುವಂತೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು 2020 ರಲ್ಲಿ ಕನ್ನಡದ ಟಾಪ್ ನಟ ಎನಿಸಿಕೊಂಡಿದ್ದ ಚಿರಂಜೀವಿ ಸರ್ಜಾ ಮತ್ತು ಬಾಲಿವುಡ್ ಚಿತ್ರರಂಗದ ಟಾಪ್ ನಟ ಎನಿಸಿಕೊಂಡಿದ್ದ ಸುಂಶಾಂತ್ ಸಿಂಗ್ ಮತ್ತು ಕನ್ನಡ ಸೇರಿದಂತೆ ದೇಶದ ಎಲ್ಲಾ ಭಾಷೆಗಳಲ್ಲಿ ಹಾಡನ್ನ ಹಾಡಿದ್ದ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಹೀಗೆ ಹಲವು ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದರು.

ಇನ್ನು ಇವರ ಸಾವಿನ ನೋವನ್ನ ಮರೆಯುವ ಮುಂಚೆನೇ ಈಗ ಇನ್ನೊಬ್ಬ ಟಾಪ್ ಗಾಯಕ ಇಹಲೋಕವನ್ನ ತ್ಯಜಿಸಿದ್ದು ಮತ್ತೆ ಚಿತ್ರರಂಗ ಕನೀರಿನಲ್ಲಿ ಮುಳುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆ ಟಾಪ್ ಗಾಯಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿಯೆಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Diljan singer

ಹೌದು ಸ್ನೇಹಿತರೆ ಪಂಜಾಬಿ ಭಾಷೆಯಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡು ಈಗ ದೇಶದಲ್ಲಿ ಟಾಪ್ ಗಾಯಕನಾಗಿ ಮುನ್ನುಗ್ಗುತ್ತಿದ್ದ ಪಂಜಾಬಿ ಭಾಷೆಯ ಟಾಪ್ ಗಾಯಕ ಎನಿಸಿಕೊಂಡಿದ್ದ ದಿಲ್ ಜಾನ್ ಅವರು ಕಾರ್ ಅಪಘಾತದಲ್ಲಿ ಇಹಲೋಕವನ್ನ ತ್ಯಜಿಸಿದ್ದಾರೆ. 31 ವರ್ಷ ವಯಸ್ಸಿನ ಈ ಗಾಯಕ ದಿಲ್ ಜಾನ್ ಮೊನ್ನೆ ವಾರಾಣಸಿ ಅಮೃತಸರ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣವನ್ನ ಮಾಡುತ್ತಿದ್ದ ಸಮಯದಲ್ಲಿ ಒಂದು ಒಂದು ಟ್ರಕ್ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಬಲವಾದ ಗಾಯಗಳು ಆಗಿದ್ದವು, ತಕ್ಷಣ ಇವರನ್ನ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಇವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಾಧನೆಯನ್ನ ಮಾಡಿದ್ದ ಈ ಗಾಯಕನ ಈ ಅಗಲಿಕೆ ಅಭಿಮಾನಿಗಳ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಸದ್ಯ ಇಡೀ ಭಾರತದ ಚಿತ್ರರಂಗವೇ ಈ ಗಾಯಕನ ಅಗಲಿಕೆಗೆ ಸಂತಾಪವನ್ನ ಸೂಚಿಸಿದೆ ಎಂದು ಹೇಳಬಹುದು. 2020 ಚಿತ್ರರಂಗದ ಪಾಲಿಗೆ ಕರಾಳ ವರ್ಷವಾಗಿತ್ತು ಮತ್ತೆ ಅದೇ ರೀತಿಯಲ್ಲಿ 2021 ಕೂಡ ಚಿತ್ರರಂಗದ ಪಾಲಿಗೆ ಕರಾಳ ವರ್ಷವಾಗುವ ಸಾಧ್ಯತೆ ಇದೆ ಎಂದು ಹೇಳಬಹುದು. ದೇವರ ಆಟದ ಮುಂದೆ ಮಾನವ ಯಾವ ಲೆಕ್ಕ ಅಲ್ಲ ಅನ್ನುವುದು ಇನ್ನೊಬ್ಬ ಸಾಭೀತಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನೀವು ಕೂಡ ಈ ಗಾಯಕ ದಿಲ್ ಜಾನ್ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ಪ್ರಾರ್ಥಿಸಿಕೊಳ್ಳಿ.

Join Nadunudi News WhatsApp Group

Diljan singer

Join Nadunudi News WhatsApp Group