Ayushman Bharat: ಆಯುಷ್ಮಾನ್ ಕಾರ್ಡ್ ಮಾಡುವವರಿಗೆ ಹೊಸ ನಿಯಮ, ಈ ದಾಖಲೆ ಇಲ್ಲದಿದ್ದರೆ ನಿಮಗೆ ಸಿಗಲ್ಲ ಕಾರ್ಡ್.

ಆಯುಷ್ಮಾನ್ ಕಾರ್ಡ್ ಪಡೆಯಬೇಕಿದ್ದರೆ ಈ ದಾಖಲೆಗಳನ್ನು ನೀಡುವುದು ಅಗತ್ಯವಾಗಿದೆ.

Documents For Ayushman Card: ದೇಶದ ಬಡ ನಾಗರೀಕರಿಗಾಗಿ ಹಾಗೂ ನಿರ್ಗತಿಕರಿಗಾಗಿ ಕೇಂದ್ರ ಸರ್ಕಾರ (Central Govt) ಕಲ್ಯಾಣ ಯೋಜನೆಯನ್ನು ಪರಿಚಯಿಸುತ್ತಿವೆ. ಬಡವರು ಹಾಗೂ ನಿರ್ಗತಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚ್ಯಿಸುತ್ತ ದೇಶದ ಜನತೆಗೆ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತಿದೆ.

ಇನ್ನು ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ Ayushman Bharat ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಅರ್ಹರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ ನೀಡಿದೆ. ಸದ್ಯ ನೀವು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಬೇಕಾಗಿರುವ ದಾಖಲೆಯ ಬಗ್ಗೆ ಮಾಹಿತಿ ಲಭಿಸಿದೆ. ಆಯುಷ್ಮಾನ್ ಕಾರ್ಡ್ ಪಡೆಯಬೇಕಿದ್ದರೆ ಈ ದಾಖಲೆಗಳನ್ನು ನೀಡುವುದು ಅಗತ್ಯವಾಗಿದೆ.

Pradhan Mantri Ayushman Bharat Yojana Eligibility
Image Credit: Other Source

Pradhan Mantri Ayushman Bharat
Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

ಎಪಿಎಲ್ ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ. ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು ಆಯುಷ್ಮಾನ್ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.

Pradhan Mantri Ayushman Bharat
Image Credit: Amarujala

ಆಯುಷ್ಮಾನ್ ಕಾರ್ಡ್ ಪಡೆಯಲು ಈ ದಾಖಲೆ ಅಗತ್ಯ
*Aadhaar card
*Ration card
*Mobile number
*Address proof
*ಈ ಮೇಲಿನ ಎಲ್ಲ ದಾಖಲೆಗಳು ಇದ್ದರೆ ಮಾತ್ರ ನೀವು Ayushman Card ಅನ್ನು ಪಡೆಯಬಹುದಾಗಿದೆ.
*ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ನೀವು ಈ ಯೋಜನೆಗೆ Online ಅಥವಾ Offline ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group