Ration Card Rule: ಇನ್ಮುಂದೆ ಇವರು ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು, ಹೊಸ ನಿಯಮ ಜಾರಿ.

ಇನ್ಮುಂದೆ ಈ ದಾಖಲೆ ಇದ್ದವರು ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು

Ration Card Latest Update: ರಾಜ್ಯದಲ್ಲಿ ರೇಷನ್ ಕಾರ್ಡ್ ಸಂಭಂದಿತ ಅನೇಕ ಅಪ್ಡೇಟ್ ಗಳು ಹೊರಬೀಳುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೇಷನ್ ಕಾರ್ಡ್ ದಾರರಿಗೆ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿರುವ ಕಾರಣ ಜನರು ಹೊಸ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ.

ಇನ್ನು ರಾಜ್ಯದ ಜನತೆ ಯಾವುದೇ ಯೋಜನೆಗಳಿಂದ ವಂಚಿತರಾಗಬಾರದು ಎನ್ನವ ಉದ್ದೇಶದಿಂದ ರಾಜ್ಯ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ಅರ್ಜಿ ಸಲ್ಲಕೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಯಾರು ಅರ್ಹರು ಎನ್ನುವ ಬಗ್ಗೆ ಕೂಡ ಮಾಹಿತಿ ನೀಡಿದೆ. ಇವರು ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

Ration Card Latest Update
Image Credit: News Next

ಹೊಸ ಪಡಿತರ ಚೀಟಿಗಾಗಿ ಕಾಯುತ್ತಿದ್ದವರಿಗೆ ಬಿಗ್ ಅಪ್ಡೇಟ್
ಹೊಸ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಪಡಿತರ ಚೀಟಿ ವಿಲೇವಾರಿ ಪ್ರಗತಿಯಲ್ಲಿದೆ. ಅವುಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡಲಿದ್ದು, ಏಪ್ರಿಲ್ 1 ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇನ್ನು ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ನೀಡುವ ಅಗತ್ಯವಿದೆ. ಈ ದಾಖಲೆಗಳು ಇಲ್ಲವಾದರೆ ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

New Ration Card Application
Image Credit: Samayam

ಇನ್ಮುಂದೆ ಇವರು ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು
•ಕರ್ನಾಟಕದ ಖಾಯಂ ನಿವಾಸಿ ಆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Join Nadunudi News WhatsApp Group

•ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

•ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು.

•ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

•ನೀವು https://ahara.kar.nic.in ನ ಅಧಿಕೃತ Website ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Ration Card Apply
Image Credit: The Hindu Business Line

ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಯಾವ ದಾಖಾಲಾಗಳು ಅಗತ್ಯ
*ಮತದಾರರ ಗುರುತಿನ ಚೀಟಿ

*ಆಧಾರ್ ಕಾರ್ಡ್

*ಮೊಬೈಲ್ ನಂ.

*ಮನೆಯ ಸದಸ್ಯರ ಬಗ್ಗೆ ಮಾಹಿತಿ

*ವಯಸ್ಸಿನ ಪ್ರಮಾಣಪತ್ರ

*ಚಾಲನಾ ಪರವಾನಿಗೆ

*ಸ್ವಯಂ ಘೋಷಿತ ಪ್ರಮಾಣಪತ್ರ

*ಇತ್ತೀಚಿನ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ

New Ration Card Apply
Image Credit: DNA India

Join Nadunudi News WhatsApp Group