Ration Card: ಹೊಸ ರೇಷನ್ ಕಾರ್ಡ್ ಮಾಡಿಸುವವರಿಗೆ ಬಿಗ್ ಅಪ್ಡೇಟ್, ಈ ದಾಖಲೆ ಇಲ್ಲದಿದ್ದರೆ ಕಾರ್ಡ್ ಸಿಗಲ್ಲ.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅತೀ ಅಗತ್ಯ

Documents For New Ration Card Application: ರಾಜ್ಯದಲ್ಲಿ ಪಡಿತರ ಚೀಟಿಗೆ ಹೆಚ್ಚಿನ ಮಹತ್ವವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ Card ಮುಖ್ಯ ದಾಖಾಲೆಯಾಗಿದೆ. ಈ ಒಂದು ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಯಾಗುತ್ತಿದೆ.

ಅದರಲ್ಲೂ ಹೆಚ್ಚಾಗಿ BPL Ration Card ಗೆ ಅರ್ಜಿ ಸಲ್ಲಿಕೆ ಹೆಚ್ಚುತ್ತಿದೆ. ಸದ್ಯ ಇದೀಗ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಮಾಡಲಾಗಿದು, ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆ ಮತ್ತು ದಾಖಲೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Ration Card Latest Updates
Image Credit: Business League

ಹೊಸ ರೇಷನ್ ಕಾರ್ಡ್ ಮಾಡಿಸುವವರಿಗೆ ಬಿಗ್ ಅಪ್ಡೇಟ್
ಹೊಸ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಪಡಿತರ ಚೀಟಿ ವಿಲೇವಾರಿ ಪ್ರಗತಿಯಲ್ಲಿದೆ. ಅವುಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡಲಿದ್ದು, ಏಪ್ರಿಲ್ 1 ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇನ್ನು ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ನೀಡುವ ಅಗತ್ಯವಿದೆ. ಈ ದಾಖಲೆಗಳು ಇಲ್ಲವಾದರೆ ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

Ration Card Application
Image Credit: Original Source

ಈ ದಾಖಲೆ ಇಲ್ಲದಿದ್ದರೆ ರೇಷನ್ ಕಾರ್ಡ್ ಸಿಗಲ್ಲ
*ಮತದಾರರ ಗುರುತಿನ ಚೀಟಿ

Join Nadunudi News WhatsApp Group

*ಆಧಾರ್ ಕಾರ್ಡ್

*ವಯಸ್ಸಿನ ಪ್ರಮಾಣಪತ್ರ

*ಚಾಲನಾ ಪರವಾನಿಗೆ

*ಸ್ವಯಂ ಘೋಷಿತ ಪ್ರಮಾಣಪತ್ರ

*ಇತ್ತೀಚಿನ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ

*ಮೊಬೈಲ್ ನಂ.

*ಮನೆಯ ಸದಸ್ಯರ ಬಗ್ಗೆ ಮಾಹಿತಿ

Documents Required For Ration Card Application
Image Credit: Gulfhindi

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಯಾರು ಅರ್ಹರು
•ಕರ್ನಾಟಕದ ಖಾಯಂ ನಿವಾಸಿ ಆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

•ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

•ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು.

•ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

•ನೀವು https://ahara.kar.nic.in ನ ಅಧಿಕೃತ Website ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group