Yuva Nidhi: ಇನ್ಮುಂದೆ ಪ್ರತಿ ತಿಂಗಳು ಈ ದಾಖಲೆ ಕೊಟ್ಟರೆ ಮಾತ್ರ ಯುವ ನಿಧಿ ಹಣ ಸಿಗಲಿದೆ, ಹೊಸ ಬದಲಾವಣೆ

ಯುವ ನಿಧಿ ಯೋಜನೆಯ ಹಣ ಪಡೆಯಲು ಪ್ರತಿ ತಿಂಗಳು ಈ ದಾಖಲೆ ಕೊಡುವುದು ಕಡ್ಡಾಯ

Yuva Nidhi Rule Change: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿ ಕೊನೆಯದಾಗಿ ಅನುಷ್ಠಾನಗೊಂಡಿದೆ. ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ.

ಈಗಾಗಲೇ ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಒಂದು ತಿಂಗಳ ಭತ್ಯೆ ಹಣ ಜಮಾ ಆಗಿದೆ. ಫಲಾನುಭವಿಗಳು ಮಾಸಿಕ ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಕಂತಿನ ಭತ್ಯೆ ಪಡೆಯುವ ಸಮಯ ಬಂದಿದೆ. ಸರ್ಕಾರ ಎರಡನೇ ಕಂತಿನ ನಿರುದ್ಯೋಗ ಭತ್ಯೆಯನ್ನು ಬಿಡುಗಡೆ ಮಾಡಲಿದೆ. ಆದರೆ ಫಲಾನುಭವಿಗಳು ಎರಡನೇ ಕಂತಿನ ಹಣವನ್ನು ಪಡೆಯಲು ಈ ಕೆಲಸ ಮಾಡುವುದು ಕಾಡ್ಡಾಯವಾಗಿದೆ.

Karnataka Yuva Nidhi Latest Update
Image Credit: News Next Kannada

ಯುವ ನಿಧಿ ಯೋಜನೆಯಲ್ಲಿ ಹೊಸ ಬದಲಾವಣೆ
ಸದ್ಯ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ಪಡೆಯುತ್ತಿರುವವರಿಗೆ ಹೊಸ ರೂಲ್ಸ್ ಜಾರಿ ಮಾಡಿದೆ. ಯುವ ನಿಧಿ ಯೋಜನೆಗೆ ಸರ್ಕಾರ ವಿಧಿಸಿರುವ ನಿಯಮಗಳ ಉಲ್ಲಂಘನೆ ಆಗಬಾರದು ಎನ್ನುವ ಕಾರಣದಿಂದ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಿರುದ್ಯೋಗ ಭತ್ಯೆ ಪಡೆಯಬೇಕಿದ್ದರೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ನೀವು ಯುವ ನಿಧಿ ಯೋಜನೆಯ ಹಣವನ್ನು ಮುಂದಿನ ತಿಂಗಳು ಪಡೆಯಬೇಕಿದ್ದರೆ ಈ ದಾಖಲೆ ನೀಡುವುದು ಕಡ್ಡಾಯವಾಗಿದೆ. ಈ ದಾಖಲೇ ನೀಡುವಲ್ಲಿ ವಿಫಲವಾದರೆ ನಿಮಗೆ ಈ ತಿಂಗಳ ಭತ್ಯೆಯ ಹಣ ಜಮಾ ಆಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

ಇನ್ಮುಂದೆ ಪ್ರತಿ ತಿಂಗಳು ಈ ದಾಖಲೆ ಕೊಟ್ಟರೆ ಮಾತ್ರ ಯುವ ನಿಧಿ ಹಣ ಸಿಗಲಿದೆ
ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್‌ ಲೋಡ್ ಮಾಡಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. NAD (National Academy Depository) ಬಳಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣಪತ್ರಗಳಿವೆ.

Yuva Nidhi launched in Shivamogga
Image Credit: The Hindu

ಅಲ್ಲಿಂದ ಮಾಹಿತಿ ಪಡೆಯಲಾಗುತ್ತಿದೆ. ದಾಖಲೆಗಳು ತಾಳೆಯಾಗಿದ್ದು, ಫಲಿತಾಂಶ ಬಂದ ಆರು ತಿಂಗಳ ನಂತರ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ಅಭ್ಯರ್ಥಿಗಳು ತಾವು ಉದ್ಯೋಗ ಪಡೆದಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್‌ ಲೋಡ್ ಮಾಡಬೇಕು. ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್‌ ಲೋಡ್ ಮಾಡಿದರೆ ಮಾತ್ರ ಫಲಾನುಭವಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group