Budget 2024: ಎಲೆಕ್ಟ್ರಿಕ್ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್, ಬಜೆಟ್ ನಲ್ಲಿ ದೊಡ್ಡ ಘೋಷಣೆ ಸಾಧ್ಯತೆ

ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಯಾಗುತ್ತ...? ಏರಿಕೆಯಾಗುತ್ತ...?

Electric Vehicle Price: ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಹೊಸ ಅವಧಿಯ ಮೊದಲ ಸಾಮಾನ್ಯ ಬಜೆಟ್ ಮಂಡಿಸಲು ಹೊರಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 23 ಜೂನ್ 2024 ರಂದು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ ನಿಂದ ಎಲ್ಲ ವರ್ಗದವರೂ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರೈತರು, ಮಧ್ಯಮ ವರ್ಗದವರು, ಕಾರ್ಮಿಕರು ಮತ್ತು ಕೇಂದ್ರ ಉದ್ಯೋಗಿಗಳಿಗೆ ಸರ್ಕಾರವು ಕೆಲವು ಘೋಷಣೆಗಳನ್ನು ಮಾಡಬಹುದು. ಜನಸಾಮಾನ್ಯರು ಕೂಡ ಈ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಜೆಟ್ ನಲ್ಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬೆಲೆಯ ಬಗ್ಗೆ ಕೂಡ ಚರ್ಚಿಸಲಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದಲ್ಲಿದೆ.

Electric Vehicle Price
Image Credit: Financial Express

ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಯಾಗುತ್ತ…? ಏರಿಕೆಯಾಗುತ್ತ…?
ನರೇಂದ್ರ ಮೋದಿ ಸರ್ಕಾರವು 2030 ರ ವೇಳೆಗೆ ಒಟ್ಟು ವಾಹನಗಳ ಮಾರಾಟದಲ್ಲಿ 30% ರಷ್ಟು ಎಲೆಕ್ಟ್ರಿಕ್ ವಾಹನಗಳು (EV) ಆಗಬೇಕೆಂದು ಬಯಸಿದ್ದಾರೆ. ಇದರಿಂದಾಗಿ, ಈ ಬಜೆಟ್‌ ನಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಹೆಚ್ಚಿನ ಕೊಡುಗೆ ಸಿಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈಗಾಗಲೇ, ಹೈಬ್ರಿಡ್-ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಬೆಂಬಲಿಸಲು ಫಾಸ್ಟರ್ ಅಡಾಪ್ಷನ್ ಮತ್ತು ಉತ್ಪಾದನೆ (FAME) ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗಿದೆ.

ಮೂರನೇ ಹಂತದಲ್ಲಿ ಅನುಷ್ಠಾನಕ್ಕೆ ಹೆಚ್ಚಿನ ಹಣವನ್ನು ಮೀಸಲಿಡಬಹುದು. ಸರಿ ಸುಮಾರು ರೂ.10 ಸಾವಿರ ಕೋಟಿಯನ್ನು ಬಜೆಟ್ ನಲ್ಲಿ ಮೀಸಲಿಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಈ ಬಾರಿ ಬಜೆಟ್ ನಲ್ಲಿ ಸರ್ಕಾರ ಪರಿಷ್ಕರಿಸಲಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಇಳಿಕೆ ಮಾಡುತ್ತದೆಯೋ…? ಅಥವಾ ಏರಿಕೆ ಮಾಡುತ್ತದೆಯೋ…? ಎನ್ನುವ ಬಗ್ಗೆ ಸರ್ಕಾರದ ನಿರ್ಧಾರವೇನು ಎನ್ನುವುದನ್ನು ತಿಳಿಯಬೇಕಿದೆ.

Electric Vehicle Price In 2024
Image Credit: Oneindia

Join Nadunudi News WhatsApp Group

Join Nadunudi News WhatsApp Group