Electricity: ಯಾಕೆ ಪ್ರತಿಯೊಬ್ಬರ ಮನೆಯ ಕರೆಂಟ್ ಬಿಲ್ ದುಪ್ಪಟ್ಟು ಬರುತ್ತಿದೆ, ಸ್ಪಷ್ಟನೆ ನೀಡಿದ ಸರ್ಕಾರ.

ವಿದ್ಯುತ್ ದರ ಹೆಚ್ಚಳದ ಬಗ್ಗೆ ಸ್ಫಷ್ಟನೆ ನೀಡಿದ ಸರ್ಕಾರ, ಈ ಕಾರಣಕ್ಕೆ ಬಿಲ್ ಹೆಚ್ಚಳ ಬರುತ್ತಿದೆ ಅಂದ ಸರ್ಕಾರ.

Electricity Bill Hike Reason: ಆಗಸ್ಟ್ ತಿಂಗಳಿನಲ್ಲಿ ರಾಜ್ಯದ ಜನತೆಗೆ ಉಚಿತ ವಿದ್ಯುತ್ (Free Electricity) ಪೂರೈಕೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 12 ತಿಂಗಳ ಸರಾಸರಿ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಆದರೆ ಇನ್ನು 200 ಯೂನಿಟ್ ಫ್ರೀ ವಿದ್ಯುತ್ ಜಾರಿಯಾದ ಹಿನ್ನೆಲೆಯಲ್ಲಿಯೇ ಸರ್ಕಾರ ರಾಜ್ಯದ ಜನತೆಗೆ ಶಾಕ್ ಕೊಟ್ಟಿದೆ. ಈಗಾಗಲೇ ಕಾಂಗ್ರೆಸ್ ಐದು ಯೋಜನೆಗಳ ಅನುಷ್ಠಾನಕ್ಕಾಗಿ ವಾರ್ಷಿಕವಾಗಿ 50 ರಿಂದ 60 ಸಾವಿರ ಕೋಟಿ ಖರ್ಚಾಗುವ ಬಗ್ಗೆ ಹಣಕಾಸು ಇಲಾಖೆ ಲೆಕ್ಕಾಚಾರ ಹಾಕಿದೆ.

Electricity rates are increasing in Karnataka
Image Credit: economictimes

ಕರ್ನಾಟಕದಲ್ಲಿ ಹೆಚ್ಚುತ್ತಿದೆ ವಿದ್ಯುತ್ ದರ
ಯೋಜನೆಗಳ ಅನುಷ್ಠಾನಕ್ಕಾಗಿ ವಸ್ತುಗಳ ದರದ ಹೆಚ್ಚಳ ಮಾಡುವ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೆ ಈ ತಿಂಗಳಿನಿಂದಲೇ ಪ್ರತಿಯೊಬ್ಬರ ಮನೆಯ ತಿಂಗಳ ವಿದ್ಯುತ್ ದರದಲ್ಲಿ ಬಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

ಜನಸಾಮಾನ್ಯರು ವಿದ್ಯುತ್ ದರ ಹೆಚ್ಚಳದ ಕುರಿತು ಚಿಂತಿಸುತ್ತಿದ್ದಾರೆ. ವಿದ್ಯುತ್ ಬಿಲ್ ಹೆಚ್ಚಳದ ಕುರಿತು ಸರ್ಕಾರ ಸ್ಪಷ್ಟನೆ ನೀಡಿದೆ. ಯಾವ ಕಾರಣಕ್ಕೆ ವಿದ್ಯುತ್ ಬಿಲ್ ದರವನ್ನು ಹೆಚ್ಚಿಸಲಾಗುತ್ತಿದೆ ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟ ಕಾರಣವನ್ನು ತಿಳಿಸಿದೆ.

Electricity rates are increasing in Karnataka
Image Credit: nairametrics

ವಿದ್ಯುತ್ ದರ ಹೆಚ್ಚಳದ ಬಗ್ಗೆ ಸರ್ಕಾರದ ಸ್ಪಷ್ಟನೆ
ಕರ್ನಾಟಕ ವಿದ್ಯತ್ಚಕ್ತಿ ನಿಯಂತ್ರಣ ಆಯೋಗ (Karnataka Electricity Regulatory Commission – KERC) ಪ್ರತಿ ಯುನಿಟ್ ಗೆ 70 ಪೈಸೆ ಏರಿಕೆ ಮಾಡಿದೆ. ಬೆಸ್ಕಾಂ,ಜೂನ್ ತಿನಗಳಿನಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ಬಿಲ್ ನಲ್ಲಿ ಪರಿಷ್ಕ್ರತ ವಿದ್ಯುತ್ ಶುಲ್ಕವನ್ನು ನಮೂದಿಸಲಾಗಿದೆ.

Join Nadunudi News WhatsApp Group

ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್ ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್ ಗೆ ಪ್ರತಿ ಯುನಿಟ್ ದರ 4 .75 ರೂ. ವಿಧಿಸಲಾಗಿದೆ.

Electricity rates are increasing in Karnataka
Image Credit: whatshot

100 ಯುನಿಟ್ ಮೀರಿದರೆ ಬಳಸಿದ ಅಷ್ಟು ಯುನಿಟ್ ಗೆ ಎರಡನೇ ಶ್ರೇಣಿ ದರ ಪ್ರತಿ ಯುನಿಟ್ ಗೆ ರೂ. ಅನ್ವಯವಾಗಲಿದೆ. ಈ ಹಿಂದೆ ಮೂರು ಶ್ರೇಣಿ ದರಗಳಲ್ಲಿ (Telescopic) ಸಂಗ್ರಹಿಲಾಗುತ್ತಿತ್ತು. (ಮೊದಲ 50 ಯೂನಿಟ್ ಗೆ 4.15 ರೂ., ನಂತರದ 50 ಯೂನಿಟ್ ಗೆ 5.6 ರೂ ಹಾಗೂ 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು)

ಇದೀಗ ಎರಡು ಶ್ರೇಣಿ ದರಗಳಲ್ಲಿ (Non-Telescopic) ಸಂಗ್ರಹಿಸಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Join Nadunudi News WhatsApp Group