Electricity Update: ಫ್ರೀ ಕರೆಂಟ್ ಬೆನ್ನಲ್ಲೇ ಇನ್ನೊಂದು ಬೇಸರದ ಸುದ್ದಿ ನೀಡಿದ ಸರ್ಕಾರ, ದಿಡೀರ್ ಇನ್ನೊಂದು ಘೋಷಣೆ.

ಫ್ರೀ ಕರೆಂಟ್ ಬೆನ್ನಲ್ಲೇ ಇನ್ನೊಂದು ಇನ್ನೊಂದು ಘೋಷಣೆ ಮಾಡಿದ ಸರ್ಕಾರ

Electricity Updated IN karnataka: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗಳ ಸುರಿಮಳೆಯೇ ರಾಜ್ಯದಲ್ಲಿ ಸುರಿಯುತ್ತಿದೆ. 5 ಗ್ಯಾರೆಂಟಿ ಯೋಜನೆಗಳನ್ನೂ ನೀಡುವುದಾಗಿ ಭರವಸೆ ನೀಡಿದ ಕಾಂಗ್ರಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ತನ್ನ ಮಾತನ್ನು ಉಳಿಸಿಕೊಂಡಿದೆ. 5 ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಒಂದಾಗಿದ್ದು, ಈ ಯೋಜನೆಯಡಿ 200 ಯುನಿಟ್ ಕ್ಕಿಂತ ಕಡಿಮೆ ವಿದ್ಯುತ್ ಬಳಸುವ ಪ್ರತಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಕೆಲವು ಹಲವರಿಗೆ ಈ ಯೋಜನೆಗಳು ಸಹಕಾರಿಯಾಗಿದ್ದು, ಇನ್ನು ಕೆಲವರಿಗೆ ಬಹಳ ತೊಂದರೆ ಉಂಟು ಮಾಡಿದೆ. ಸದ್ಯ ಉಚಿತ ವಿದ್ಯುತ್ ನೀಡಿದ ರಾಜ್ಯ ಸರ್ಕಾರ ಈಗ ಇನ್ನೊಂದು ಘೋಷಣೆಯನ್ನ ಮಾಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಸರ್ಕಾರದ ಈ ನಿರ್ಧಾರ ಅಂಗಡಿ ಮುಂಗಟ್ಟು ಇಟ್ಟುಕೊಂಡವರಿಗೆ ಮತ್ತು ವ್ಯವಹಾರ ಮಾಡುವವರ ಸಂಕಷ್ಟಕ್ಕೆ ಕಾರಣವಾಗಿದೆ.

electricity bill hike 2023
Image Credit: currentaffairs

ವಿದ್ಯುತ್ ದರದಲ್ಲಿ ಬಾರಿ ಏರಿಕೆ
ಗೃಹಜ್ಯೋತಿ ಯೋಜನೆಯಡಿಯಲ್ಲಿ ಜನ ಸಾಮಾನ್ಯರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಈ ಯೋಜನೆಯು ವಿದ್ಯುತ್ ಬಿಲ್ ಕಟ್ಟುವವರ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ಯೋಜನೆಯಿಂದ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಹೆಸರಲ್ಲಿ ಪ್ರತಿ ಯೂನಿಟ್ ಗೆ 1.01 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಕಳೆದ ಜೂನ್ ತಿಂಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ 50 ಪೈಸೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಿಗೆ ಸೀಮಿತವಾಗಿ ಮತ್ತೆ 51 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರತಿ ಯೂನಿಟ್ ಗೆ 1.01 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಅಕ್ಟೋಬರ್ ತಿಂಗಳಿಗೂ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಏರಿಕೆ ಮುಂದುವರಿಸಲಾಗಿದೆ.

karnataka govt hike electricity bill
Image Credit: informalnewz

ಹಲವರು ಯೋಜನೆಯ ಪರಿಣಾಮವಾಗಿ ನಷ್ಟ ಅನುಭವಿಸಬೇಕಾಗಿದೆ
ಸರಕಾರವು ಒಂದರ ಮೇಲೊಂದು ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದು, ಹಲವರ ಮೇಲೆ ಪರಿಣಾಮ ಬೀರುತ್ತಿದೆ. ಈ ಯೋಜನೆಗಳಿಂದ ನಷ್ಟ ಅನುಭವಿಸುವವರ ಸಂಖ್ಯೆ ಹೆಚ್ಚಾಗಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿ ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯವಿದ್ದು, ಯೋಜನೆಯ ಫಲಾನುಭವಿಗಳಲ್ಲದ ಬಳಕೆದಾರರು ವಾಣಿಜ್ಯ ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಈ ರೀತಿಯಾದ ಹೆಚ್ಚುವರಿ ಶುಲ್ಕದಿಂದ ಹಲವರಿಗೆ ತುಂಬಲಾರದ ನಷ್ಟವಾಗುತ್ತಿದೆ.

Join Nadunudi News WhatsApp Group

ಬೇಸರ ಹೊರಹಾಕಿದ ಜನರು
ಸದ್ಯ ಸರ್ಕಾರ ವಿದ್ಯುತ್ ದರವನ್ನ ಏರಿಕೆ ಮಾಡಿದ್ದು ಇದು ಯೋಜನೆಯ ಫಲಾನುಭವಿಗಳಲ್ಲದ ಜನರ ಬೇಸರಕ್ಕೆ ಕಾರಣವಾಗಿದೆ. ಬಡವರು ಯೋಜನೆಯ ಅಡಿಯಲ್ಲಿ ಉಚಿತ ಕರೆಂಟ್ ಪಡೆದುಕೊಳ್ಳುತ್ತಾರೆ, ಆದರೆ ಯೋಜನೆಗೆ ಅರ್ಹರಲ್ಲದವರು ಏನು ಮಾಡಬೇಕು ಎಂದು ಜನರು ಬೇಸರ ಹೊರಹಾಕುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯ ವೆಚ್ಚವನ್ನ ಭರಿಸಲು ಸರ್ಕಾರ ಬೆಲೆಯನ್ನ ಏರಿಕೆ ಮಾಡುತ್ತಿದೆ ಎಂದು ಹೇಳಬಹುದು.

Join Nadunudi News WhatsApp Group