iPhone Offer: ಐಫೋನ್ ಪ್ರಿಯರಿಗೆ ಗಣೇಶನ ಹಬ್ಬದ ಉಡುಗೊರೆ, ಭರ್ಜರಿ 40 ಸಾವಿರ ಡಿಸ್ಕೌಂಟ್ ಘೋಷಣೆ.

ಐಫೋನ್ 13 ಮೇಲೆ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

Flipkart And Amazon iPhone 13 Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಮತ್ತು Amazon ಐಫೋನ್ ಖರೀದಿಗೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.

ಮಾರುಕಟ್ಟೆಯಲ್ಲಿ iPhone 15 Launch ಆಗುತ್ತಿರುವ ಕಾರಣ iPhone ನ ಇನ್ನಿತರ ಮಾದರಿಗಳಿಗೆ ಕಂಪನಿ ಭರ್ಜರಿ ಆಫರ್ ಘೋಷಿಸುತ್ತಿದೆ. ಸದ್ಯ Flipkart ಮತ್ತು Amazon ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ iPhone 13 ಅನ್ನು ಖರೀದಿಸಬಹುದಾಗಿದೆ. ನಿಮಗೆ iPhone ಖರೀದಿಸಬೇಕು ಎನ್ನುವ ಆಸೆ ಇದ್ದರೆ ಇದೀಗ ಜನಪ್ರಿಯ ಇ – ಕಾಮರ್ಸ್ ಅಪ್ಲಿಕೇಶನ್ ಗಳ ಆಫರ್ ಅನ್ನು ಬಳಸಿಕೊಳ್ಳಬಹುದು.

iphone 13 flipkart offer
Image Credit: Indianexpress

iPhone 13 Flipkart ಆಫರ್
iPhone 13 ನ ಮೂಲ ರೂಪಾಂತರದ ಬೆಲೆ 56,999 ರೂ. ಆಗಿದೆ. Flipkart ಮತ್ತು Amazon ಇದೀಗ iPhone 13 ಖರೀದಿಗೆ 18 % ರಿಯಾಯಿತಿಯನ್ನು ನೀಡುತ್ತಿದೆ. ಇದರ ಜೊತೆಗೆ Flipkart ನಲ್ಲಿ HDFC Credit Card ಬಳಕೆದಾರರು 2000 ರೂ. ರಿಯಾಯಿತಿಯನ್ನು ಹೆಚ್ಚುವರಿಯಾಗಿ ಪಡೆಯಬಹುದು. ಇನ್ನು Flipkart ನಲ್ಲಿ Exchange Offer ಕೂಡ ಲಭ್ಯವಿದೆ. Flipkart ನ ವಿನಿಮಯ ಕೊಡುಗೆಯ ಮೂಲಕ ನೀವು ನಿಮ್ಮ ಹಳೆಯ iPhone ಮಾದರಿಯನ್ನು 39,100 ಗೆ ಮಾರಾಟಮಾಡಬಹುದು.

iPhone 13 Amazon ಆಫರ್
ಇನ್ನು Amazon ಕೂಡ iPhone 13 ಖರೀದಿಗೆ Exchange Offer ಅನ್ನು ನೀಡಿದೆ. ಈ Exchange Offer ನ ಮೂಲಕ ನೀವು 24,950 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಇನ್ನು iPhone 13 ನಿಮಗೆ 128GB , 256GB , 512GB ವೇರಿಯೆಂಟ್ ನಲ್ಲಿ ಲಭ್ಯವಿದ್ದು, ಆರು ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ನೀವು iPhone 13 ಖರೀದಿಸಬಹುದಾಗಿದೆ.

iPhone 13 Amazon offer
Image Credit: India

iPhone 13 Feature
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. iPhone 13 ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್‌ ಸೆಟ್‌ನ ಪ್ರೊಸೆಸರ್ ಅನ್ನು ಪಡೆಯಬಹುದು. ಹೆಚ್ಚಿನ ಫೀಚರ್ ಇರುವ iPhone 13 ಅನ್ನು ನೀವು Flipkart ಮತ್ತು Amazon ನ ರಿಯಾಯಿತಿಯಲ್ಲಿ ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group