ಕರೋನ ಆತಂಕದ ನಡುವೆ ಬಿಪಿಎಲ್ ಕಾರ್ಡ್ ಇರುವವರಿಗೆ ಬಂಪರ್ ಕೊಡುಗೆ ನೀಡಿದ ಕೇಂದ್ರ ಸರ್ಕಾರ, ಎಲ್ಲಾನೂ ಉಚಿತ ನೋಡಿ.

ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ಯಾವ ರೀತಿಯಲ್ಲಿ ಇದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ದೇಶವನ್ನ ಕರೋನ ಮಹಾಮಾರಿಯಿಂದ ಕಾಪಾಡಲು ಸರ್ಕಾರ ಎಷ್ಟೇ ಕ್ರಮವನ್ನ ಜಾರಿಗೆ ತರುತ್ತಿದ್ದರು ಕೂಡ ಕರೋನ ಮಹಾಮಾರಿಯ ಆರ್ಭಟವನ್ನ ತಡೆಗಟ್ಟಲು ಜನರಿಂದ ಮತ್ತು ಸರ್ಕಾರದಿಂದ ಸದ್ಯ ಆಗುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಕರೋನ ಮಹಾಮಾರಿಯ ಸಮಯದಲ್ಲಿ ಕೂಡ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ದೇಶದಲ್ಲಿ ರೇಷನ್ ಕಾರ್ಡುಗಳನ್ನ ಹೊಂದಿರುವ ಜನರಿಗೆ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಿದ್ದು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಬಹುದು.

ಇನ್ನು ಕರೋನ ಮಹಾಮಾರಿಯ ಆತಂಕದ ನಡುವೆಯೂ ಕೇಂದ್ರ ಸರ್ಕಾರ ಮತ್ತೆ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಜನರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದು ಇದು ಜನರ ಖುಷಿಗೆ ಕೂಡ ಕಾರಣವಾಗಿದೆ. ಹಾಗಾದರೆ ಏನದು ಬಂಪರ್ ಕೊಡುಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ದೇಶದಲ್ಲಿ ಕರೋನ ಮಹಾಮಾರಿ ಆರ್ಭಟ ಮತ್ತೆ ಜಾಸ್ತಿಯಾಗಿ ದೇಶದಲ್ಲಿ ಬಿಕ್ಕಟ್ಟು ತಲೆದೂಗಿದ ಸಮಾಯದಲ್ಲಿ ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಡಿಯಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ದಾನ್ಯಗಳನ್ನ ನೀಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಘೋಷಣೆಯನ್ನ ಮಾಡಿದೆ.

Free ration news

ಮೇ ತಿಂಗಳ ಅಂತ್ಯದಲ್ಲಿ ಮತ್ತು ಜೂನ್ ತಿಂಗಳಲ್ಲಿ ಬಡವರಿಗೆ ಉಚಿತವಾಗಿ ಐದು ಕೆಜಿ ಆಹಾರ ದಾನ್ಯವನ್ನ ನೀಡಲಾಗುವುದು ಕೇಂದ್ರ ಸರ್ಕಾರ ಘೋಷಣೆಯನ್ನ ಮಾಡಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಸುಮಾರು 80 ಕೋಟಿ ಜನರು ಆಹಾರ ದಾನ್ಯಗಳನ್ನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದೇಶದಲ್ಲಿ ಕರೋನ ಮಹಾಮಾರಿಯ ಎರಡನೆಯ ಅಲೆ ಆರಂಭವಾಗಿದ್ದು ಈ ಸಮಯದಲ್ಲಿ ಜನರು ಹೆಚ್ಚಿನ ಪೌಷ್ಟಿಕಾಂಶವನ್ನ ಹೊಂದಿರುವ ಆಹಾರವನ್ನ ಸೇವನೆ ಮಾಡುವುದು ಅವಶ್ಯಕವಾದ ಕಾರಣ ಅವರಿಗೆ ಹೆಚ್ಚಿನ ಪೋಷಕಾಂಶ ಇರುವ ಆಹಾರವನ್ನ ಒದಗಿಸಲಾಗುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಇನ್ನು 80 ಕೋಟಿಗೂ ಅಧಿಕ ಜನರಿಗೆ ಆಹಾರ ದಾನ್ಯವನ್ನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸುಮಾರು 26 ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡುತ್ತಿದೆ ಎಂದು ಅಂದಾಜು ಮಾಡಲಾಗಿದೆ.

ಇನ್ನು ದೇಹದಲ್ಲಿ ಕರೋನ ಅಲೆ ಬಹಳ ಜಾಸ್ತಿ ಆಗಿರುವ ಕಾರಣ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ ಮತ್ತು ಈ ಸಮಯದಲ್ಲಿ ಬಡವರು ಕಷ್ಟಪಡುವುದು ಸರ್ವೇ ಸಾಮಾನ್ಯವಾದ ಕಾರಣ ಈ ಸಮಯದಲ್ಲಿ ಸರ್ಕಾರ ಬಡವರ ನೆರವವಿಗೆ ಧಾವಿಸಬೇಕಾಗಿದೆ. ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಬಡವರಿಗೆ ಉಚಿತವಾಗಿ ಆಹಾರ ದಾನ್ಯವನ್ನ ವಿತರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನವನ್ನ ಮಾಡಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದ ಪ್ರತಿಯೊಬ್ಬ ಬಡವರಿಗೆ ತಲುಪಿಸಿ.

Join Nadunudi News WhatsApp Group

Free ration news

Join Nadunudi News WhatsApp Group