Petrol Pump Free Services: ದೇಶದಲ್ಲಿ ಜನರು ತಮ್ಮ ವಾಹನಗಳಿಗೆ ಇಂದನವನ್ನ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್ ಗೆ ಹೋಗುತ್ತಾರೆ. ಪೆಟ್ರೋಲ್ ಬಂಕ್ ನಲ್ಲಿ ಇಂಧನ ಮಾತ್ರವಲ್ಲದೆ ಹಲವು ಉಚಿತ ಸೇವೆಯನ್ನು ನಾವೀಗ ನೋಡಬಹುದಾಗಿದೆ. ಇದನ್ನು ತಿಳಿದುಕೊಂಡರೆ ನಿಮ್ಮ ಪ್ರಯಾಣ ಬಹಳ ಸುಲಭ ಮತ್ತು ಸುರಕ್ಷಿತವಾಗಿರುತ್ತದೆ. ಇದೀಗ ನಾವು ಭಾರತದ ಪೆಟ್ರೋಲ್ ಬಂಕ್ ಗಳಲ್ಲಿ ಸಿಗುವ ಉಚಿತ ಸೇವೆಯ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಪೆಟ್ರೋಲ್ ಬಂಕ್ ನ ಉಚಿತ ಸೇವೆಗಳು
ಪೆಟ್ರೋಲ್ ಬಂಕ್ ಗಳು ಕೇವಲ ಇಂದನವನ್ನ ತುಂಬುವ ಸ್ಥಳವಲ್ಲ, ಬದಲಾಗಿ ಸಾರ್ವಜನಿಕ ಸೇವೆ ಕೇಂದ್ರ ಆಗಿದೆ. ಇದೀಗ OMC ( ಒಡಿಶಾ ಮೈನಿಂಗ್ ಕಾರ್ಪೊರೇಷನ್ ) ಮಾರ್ಘಸೂಚಿ ಪ್ರಕಾರ ಈ ಕೆಳಗಿನ ಸೇವೆಯನ್ನ ಉಚಿತವಾಗಿ ನೀಡಬೇಕು. ಅವುಗಳೆಂದರೆ, ಟೈರ್ ಗಳಿಗೆ ಗಾಳಿ ತುಂಬುದು, ಇಂಧನ ಗುಣಮಟ್ಟ ಪರಿಶೀಲನೆ, ಪ್ರಥಮ ಚಿಕಿತ್ಸಾ ಕಿಟ್, ಉಚಿತ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇವುಗಳನ್ನ ನೀವು ಉಚಿತವಾಗಿ ಬಳಕೆ ಮಾಡಬಹುದಾಗಿದೆ.
*ಟೈರ್ ಗಳಿಗೆ ಗಾಳಿ ತುಂಬುದು
ಟೈರ್ ನಲ್ಲಿ ಹೆಚ್ಚಿನ ಗಾಳಿ ಇದ್ದಾರೆ ಇಂಧನ ವ್ಯರ್ತವಾಗಿತ್ತದೆ, ಹಾಗೆ ಗಾಳಿ ಕಡಿಮೆ ಇದ್ದಾರೆ ಸುರಕ್ಷತೆಗೆ ದಕ್ಕೆ ಉಂಟಾಗುತ್ತದೆ. ಪೆಟ್ರೋಲ್ ಬಂಕ್ ನಲ್ಲಿ ಉಚಿತವಾಗಿ ಟೈರ್ ಗಳಿಗೆ ಗಾಳಿಯನ್ನ ತುಂಬಬಹುದಾಗಿದೆ. ಬೈಕ್, ಕಾರ್ ಸೇರಿದಂತೆ ಎಲ್ಲಾ ವಾಹನಗಳಿಗೆ ಉಚಿತವಾಗಿ ಟೈಯರ್ ಗಳಿಗೆ ಗಾಳಿ ತುಂಬಿಸಿಕೊಡಬೇಕು.
* ಇಂಧನ ಗುಣಮಟ್ಟ ಪರಿಶೀಲನೆ
ಇನ್ನುಮುಂದೆ ನೀವು ಇಂಧನ ತುಂಬಿಸುವಾಗ ಅದರ ಗುಣಮಟ್ಟದ ಬಗ್ಗೆ ಚಿಂತೆ ಮಾಡುದು ಬೇಡ, ಹೌದು ಫಿಲ್ಟರ್ ಪೇಪರ್ ಟೆಸ್ಟ್ ಮೂಲಕ ಪೆಟ್ರೋಲ್ ಅಥವಾ ಡಿಸೇಲ್ ನ ಗುಣಮಟ್ಟವನ್ನ ಪರಿಶೀಲಿಸಬಹುದಾಗಿದೆ. ಫಿಲ್ಟರ್ ಪೇಪರ್ ನಲ್ಲಿ ಬಿಂದು ಹಚ್ಚಿ 2 ನಿಮಿಷಗಳಲ್ಲಿ ಅದು ಪಿಂಕ್ ಬಣಕ್ಕೆ ತಿರುಗಿದರೆ ಇಂಧನ ಗುಣಮಟ್ಟ ಉತ್ತಮವಾಗಿರುತ್ತದೆ.
* ಪ್ರಥಮ ಚಿಕಿತ್ಸಾ ಕಿಟ್
ರಸ್ತೆ ಅಪಘಾತವಾದರೆ ತಕ್ಷಣ ಪೆಟ್ರೋಲ್ ಬಂಕ್ ಗೆ ಬಂದು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಇದರಲ್ಲಿ ಬ್ಯಾಂಡೆಡ್, ಔಷಧಿ, ಹಾಗೆ ಮೂಲಭೂತ ಸಾಧನಗಳು ಇರುತ್ತದೆ. ಅಪಘಾತವಾದ ಪ್ರಯಾಣಿಕರಿಗೆ ತಕ್ಷಣವೇ ಪ್ರಥಮ ಚಿಕೆತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಜವಾಬ್ದಾರಿ ಕೂಡ ಪೆಟ್ರೋಲ್ ಪಂಪ್ ನ ಕೆಲಸವಾಗಿದೆ.
* ಉಚಿತ ಕುಡಿಯುವ ನೀರು
ಪೆಟ್ರೋಲ್ ಬಂಕ್ ನಲ್ಲಿ ಸ್ವಚ್ಛ ಕುಡಿಯುವ ನೀರು ಲಭ್ಯವಿರುತ್ತದೆ, ನೀವು ನೇರವಾಗಿ ಕುಡಿಯಬಹುದು ಅಥವಾ ಬಾಟಲಿಯಲ್ಲಿ ತುಂಬಿಸಿಕೊಳ್ಳಬಹುದು. ಕುಡಿಯುವ ನೀರು ಉಚಿತವಾಗಿ ಕೊಡುವುದು ಪೆಟ್ರೋಲ್ ಪಂಪ್ ಮಾಲೀಕರ ಜವಾಬ್ದಾರಿಯಾಗಿದೆ.
* ಶೌಚಾಲಯ ವ್ಯವಸ್ಥೆ
ಪೆಟ್ರೋಲ್ ಬಂಕ್ ನಲ್ಲಿ ಉಚಿತ ಶೌಚಾಲಯ ವ್ಯವಸ್ಥೆ ಇರುತ್ತದೆ. ನೀವು ಯಾವುದೇ ಇಂಧನ ತುಂಬಿಸಿಕೊಳದಿದ್ದರು ಅಲ್ಲಿನ ಶೌಚಾಲಯ ಅನ್ನು ಬಳಸಿಕೊಳ್ಳಬಹುದು. ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆಬೇರೆ ಟಾಯ್ಲೆಟ್ ವ್ಯವಸ್ಥೆ ಕಡ್ಡಾಯವಾಗಿ ಎಲ್ಲಾ ಪೆಟ್ರೋಲ್ ಪಂಪ್ ನಲ್ಲಿ ಇರಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

