Bus Ticket: ಉಚಿತವಾಗಿ ಪ್ರಯಾಣಿಸಲು ಪಡೆಯಬೇಕು ಟಿಕೆಟ್, ಮಹಿಳೆಯರಿಗೆ ರಾಜ್ಯದ ಸರ್ಕಾರದ ಆದೇಶ.

ಉಚಿತ ಪ್ರಯಾಣಕ್ಕೆ ಟಿಕೆಟ್ ರಚನೆ ಮಾಡಿದ ಸರ್ಕಾರ, ಎಲ್ಲಾ ಮಹಿಳೆಯರು ಕಡ್ಡಾಯವಾಗಿ ಟಿಕೆಟ್ ಪಡೆಯಬೇಕು.

Free Travel Bus Ticket: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ನೀಡಿದ ಐದು ಭರವಸೆಗಳ ಅನುಷ್ಠಾನದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದು ಕೆಲವು ದಿನಗಳು ಆದರೂ ಕೂಡ ಇನ್ನು ಭರವಸೆಗಳ ಅನುಷ್ಠಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ. ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಂದಿಷ್ಟು ಅಪ್ಡೇಟ್ ಗಳು ಹೊರಬಿದ್ದಿವೆ.

Tickets for free travel
Image Credit: vijayavani

ಐದು ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಯೋಜನೆಗಳ ಅನುಷ್ಠಾನದ ಕುರಿತು ಮಾತನಾಡಿದ್ದಾರೆ. ಮೊನ್ನೆ ಅಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಭರವಸೆಗಳ ಈಡೇರಿಕೆಯ ಕುರಿತು ಚರ್ಚೆ ನಡೆದಿದೆ. ಈ ಬಾರಿಯ ಆರ್ಥಿಕ ವರ್ಷದಲ್ಲಿಯೇ ಐದು ಯೋಜನೆಗಳನ್ನು ಈಡೇರುಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇನ್ನು ಯೋಜನೆಗಳಿಗೆ ಒಂದಿಷ್ಟು ಷರತ್ತುಗಳನ್ನು ಕೂಡ ಸೇರಿಸಲಾಗಿದೆ. ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕುರಿತು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

Tickets for free travel
Image Credit: vijayavani

ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ರಾಜ್ಯದಲ್ಲಿ ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವಂತೆ ಸರ್ಕಾರ ಘೋಷಣೆ ಹೊರಡಿಸಿದೆ. ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಐಷಾರಾಮಿ ಬಸ್ ಗಳನ್ನೂ ಹೊರತುಪಡಿಸಿ ಇತರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡಲಾಗಿದೆ.

Join Nadunudi News WhatsApp Group

ಉಚಿತ ಪ್ರಯಾಣಕ್ಕೂ ಟಿಕೆಟ್
ಶಕ್ತಿ ಯೋಜನೆ ಬಿಡುಗಡೆಯಾದ ಹಿನ್ನಲೆಲಿ ಟಿಕೆಟ್ ಕೂಡ ರಚನೆಯಾಗಿದೆ. ಟಿಕೆಟ್ ಮೇಲೆ ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಎಂದು ಬರೆದಿರುತ್ತಾರೆ. ಮತ್ತೆ ಟಿಕೆಟ್ ಮೇಲೆ ಯಾವುದೇ ಬೆಲೆ ನಮೂದಿಸಲಾಗುವುದಿಲ್ಲ. ಮಾಮೂಲಿಯಂತೆ ಕಂಡಕ್ಟರ್ ಬಳಿ ಟಿಕೆಟ್ ಪಡೆದುಕೊಳ್ಳಬೇಕು. ಆದರೆ ಹಣ ಕೊಡುವಂತಿಲ್ಲ.

Join Nadunudi News WhatsApp Group