Ganga Kalyana: ಸ್ವಂತ ಜಮೀನು ಹೊಂದಿರುವ ರೈತರಿಗೆ ಸರ್ಕಾರದಿಂದ ಉಚಿತ ಬೋರ್ ವೆಲ್ ಯೋಜನೆ, ಇಂದೇ ಅರ್ಜಿ ಸಲ್ಲಿಸಿ.

ರಾಜ್ಯದ ರೈತರಿಗೆ ಜಾರಿಗೆ ಬಂತು Ganga Kalyana ಯೋಜನೆ.

Ganga Kalyana Scheme 2023: ಸದ್ಯ ರಾಜ್ಯದಲ್ಲಿ ಸರ್ಕಾರ ರೈತರ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಏಕೆಂದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಈ ಕಾರಣಕೆ ರಾಜ್ಯ ಸರ್ಕಾರ ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಮುಂದಾಗಿದೆ. ಇದೀಗ ಬೆಳೆ ಹಾನಿಯಿಂದಾಗಿ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈತರಿಗೆ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಹೊಸ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ.

Ganga Kalyana Scheme
Image Credit: Sarkariyojana

ರಾಜ್ಯದ ರೈತರಿಗಾಗಿ Ganga Kalyana ಯೋಜನೆ
ಮಳೆ ಹಾನಿಯಿಂದಾಗಿ ಕಂಗಾಲಾಗಿರುವ ರೈತರಿಗಾಗಿ ರಾಜ್ಯ ಸರ್ಕಾರ Ganga Kalyana Scheme ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತ ಬೋರ್ ವೆಲ್ (Free Borewell) ಕೊರೆಸಲು ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಯೋಜನೆಯಡಿ ಅರ್ಹರಿಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ರಾಜ್ಯ ಸರ್ಕಾರದ Ganga Kalyana Scheme ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಅಂದರೆ 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವವರು ಈ ಯೋಜನೆಯ್ದಿ ಒಟ್ಟು 1 .5 ಲಕ್ಷ ರೂಗಳಿಂದ 3 .50 ಲಕ್ಷ ರೂ. ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದು. ಇದೀಗ ನಾವು ಈ ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Ganga Kalyana Scheme For Farmers
Image Credit: The Southfirst

ಅರ್ಜಿ ಸಲ್ಲಿಕೆಯ ಅರ್ಹತೆ ಮತ್ತು ಬೇಕಾಗುವ ದಾಖಲೆಗಳ ವಿವರ
*ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

*ಇನ್ನು ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.

*ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ

*ಸಣ್ಣ ಹಿಡುವಳಿದಾರರ ಪ್ರಮಾಣಪತ್ರ

*ಆದಾಯ ಹಾಗೂ ಜಾತಿ ಪ್ರಮಾಣ ಪತ್ರ

*ಇತ್ತೀಚಿನ ಪಹಣಿ

*ಕುಟುಂಬವದರ ಪಡಿತರ ಚೀಟಿ

*ಬ್ಯಾಂಕ್ ಪಾಸ್ ಬುಕ್

*ಆಧಾರ್ ಕಾರ್ಡ್

*ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಅಥವಾ ಸೇವಾಸಿಂಧು ಪೋರ್ಟಲ್ ನ ಮೂಲಕ November 29 ರೊಳಗೆ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Join Nadunudi News WhatsApp Group