Free Ration: ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ, ಡಿಸೆಂಬರ್ ತನಕ ಉಚಿತ.

ನರೇಂದ್ರ ಮೋದಿ ಸರ್ಕಾರ ಹಲವು ವರ್ಷಗಳಿಂದ ದೇಶದ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿದೆ. ಬಡವರ ಮತ್ತು ಮಧ್ಯಮ ವರ್ಗದ ಜನರ ಅನುಕೂಲದ ಕಡೆ ಮತ್ತು ಅವರ ಆರ್ಥಿಕ ಸಮಸ್ಯೆಯನ್ನ ನಿವಾರಿಸಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಬಡಜನರ ವಿಶ್ವಾಸವನ್ನ ಗಳಿಸಿಕೊಂಡಿದೆ. ಸದ್ಯ ಕೇಂದ್ರ ಸರ್ಕಾರ ದೇಶದಲ್ಲಿ BPL Ration Card ಹೊಂದಿರುವ ಜನರಿಗೆ ಅನೇಕ ಯೋಜನೆಯನ್ನ ಜಾರಿಗೆ ತಂದಿದ್ದು ಈಗ ಇನ್ನೊಂದು ಸಿಹಿ ಸುದ್ದಿಯನ್ನ ನೀಡುವುದರ ಮೂಲಕ ಜನರ ಖುಷಿಗೆ ಕಾರಣವಾಗಿದೆ ಕೇಂದ್ರ ಸರ್ಕಾರ. ತನ್ನ ಯೋಜನೆಯನ್ನ ವಿಸ್ತರಣೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದ್ದು ಮುಂದಿನ ಮೂರೂ ತಿಂಗಳುಗಳ ಕಾಲ ಜನರಿಗೆ Free Ration ನೀಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದಲ್ಲಿ BPL ಮತ್ತು APL ration card ಹೊಂದಿರುವ ಜನರಿಗೆ ಮುಂದಿನ ಮೂರೂ ತಿಂಗಳುಗಳ ಕಾಲ ಉಚಿತವಾಗಿ ರೇಷನ್ ಧಾನ್ಯಗಳನ್ನ ವಿತರಣೆ ಮಾಡಲು ಈಗ ಕೇಂದ್ರ ಸರ್ಕಾರ ತೀರ್ಮಾನವನ್ನ ಮಾಡಿದೆ. ಇಂದು PM Narendra Modi ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಧಾನ್ಯಗಳ ವಿತರಣೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಮುಂದಿನ ಮೂರೂ ತಿಂಗಳುಗಳ ಕಾಲ APL ration card and BPL ration card ಹೊಂದಿರುವ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ವಿತರಣೆ ಮಾಡಲು ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ.

Garib kalyan scheme extend
Image Credit: www.thehindu.com

Garib Kalyan Yojana ಅಡಿಯಲ್ಲಿ ಡಿಸೆಂಬರ್ 2022 ರ ತನಕ ಉಚಿತವಾಗಿ ಪಡಿತರ ಧಾನ್ಯಗಳನ್ನ ವಿತರಣೆ ಮಾಡಲು ತೀರ್ಮಾನವನ್ನ ಮಾಡಲಾಗಿದೆ. 2020 ರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಸಮಯದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನ ವಿತರಣೆ ಮಾಡಲು ಆರಂಭ ಮಾಡಿತ್ತು ಮತ್ತು ಈ ಯೋಜನೆಯನ್ನ ಕಳೆದ ಮಾರ್ಚ್ ತಿಂಗಳಲ್ಲಿ ಆರು ತಿಂಗಳುಗಳ ಕಾಲ ವಿಸ್ತರಣೆಯನ್ನ ಮಾಡಲಾಗಿದ್ದು, ಈಗ ಮತ್ತೆ ಮೂರೂ ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗಿದೆ.

ದೇಶದಲ್ಲಿ ಆಹಾರವನ್ನ ವಿತರಣೆ ಮಾಡಲು ಜಾರಿಗೆ ತಂದಂತ ದೊಡ್ಡ ಯೋಜನೆಯಲ್ಲಿ ಈ ಗರೀಬ್ ಕಲ್ಯಾಣ್ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಅಡಿಯಲ್ಲಿ ಸುಮಾರು 80 ಕೋಟಿಗೂ ಅಧಿಕ ಜನರು ಆಹಾರ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಅಡಿಯಲ್ಲಿ ರೇಷನ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಲಾಗುತ್ತದೆ. ಸದ್ಯ ಈ ಗರೀಬ್ ಕಲ್ಯಾಣ್ ಯೋಜನೆಯನ್ನ ಮುಂದಿನ ಮೂರೂ ತಿಂಗಳುಗಳ ವಿಸ್ತರಣೆ ಮಾಡಲಾಗಿದ್ದು, ಡಿಸೆಂಬರ್ 2022 ರ ತನಕ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ.

Join Nadunudi News WhatsApp Group

Join Nadunudi News WhatsApp Group