Gas Cylinder: ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್, ಈ ರೀತಿ ಬುಕ್ ಮಾಡಿದ್ರೆ 80 ರೂ ಕ್ಯಾಶ್ ಬ್ಯಾಕ್.

ಗ್ಯಾಸ್ ಸಿಲಿಂಡರ್ ಈ ರೀತಿ ಬುಕ್ ಮಾಡಿದ್ರೆ 80 ರೂ ಕ್ಯಾಶ್ ಬ್ಯಾಕ್

Gas Cylinder Money Saving Tip: ಸದ್ಯ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನರು ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ಎದುರಾಗಿದೆ ಎನ್ನಬಹುದು. ಇನ್ನು ಇತ್ತೀಚಿಗೆ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು.

ಗ್ಯಾಸ್ ಸಿಲಿಂಡರ್ ಬಳಸುವವರ ಸಂಖ್ಯೆ ಹೆಚ್ಚುತ್ತಿರುವ ಹಾಗೆ ಗ್ಯಾಸ್ ಸಿಲಿಂಡರ್ ಗಳ ಬೆಲೆ ಕೂಡ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಯ ಮಧ್ಯದಲ್ಲಿ ನೀವು ಈ ರೀತಿ ಮಾಡುವುದರಿಂದ ಹಣವನ್ನು ಉಳಿಸಬಹುದು

Gas Cylinder Money Saving Tips
Image Credit: Indiaspend

ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್
ಇನ್ನು ಮಧ್ಯಮ ವರ್ಗದವರಿಗೆ ಸಹಾಯವಾಗಲು ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿಯನ್ನು ಸಹ ನೀಡುತ್ತಿದೆ. ಈ ಮೂಲಕ ಅರ್ಹರು ಸಬ್ಸಿಡಿ ಪಡೆದುಕೊಂಡು ಗ್ಯಾಸ್ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದಾರೆ. ಅದಾಗ್ಯೂ, ನೀವು ಸಬ್ಸಿಡಿಯೊಂದಿಗೆ ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ ಇನ್ನಷ್ಟು ಹಣವನ್ನು ಉಳಿಸಲು ಸಹಾಯವಾಗುತ್ತದೆ. ಅದು ಹೇಗೆ..? ಎನ್ನುವ ಬಗ್ಗೆ ಪೂರ್ತಿ ಡಿಟೈಲ್ಸ್ ಇಲ್ಲಿದೆ.

ಈ ರೀತಿ ಬುಕ್ ಮಾಡಿದ್ರೆ 80 ರೂ ಕ್ಯಾಶ್ ಬ್ಯಾಕ್
ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಒಂದಿಷ್ಟು ಟಿಪ್ಸ್ ಅನುಸರಿಸಿ ಹಣ ಉಳಿಸುವ ಅವಕಾಶವಿದೆ ಎನ್ನಬಹುದು. ನೀವು Airtel Thanks App ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನೀವು ಶೇಕಡಾ 10 ರಷ್ಟು ಕ್ಯಾಶ್‌ ಬ್ಯಾಕ್ ಪಡೆಯುತ್ತೀರಿ. ನೀವು Airtel Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು ಈ ಪ್ರಯೋಜನಗಳನ್ನು ಪಡೆಯಬಹುದು.

ಕೆಲವೆಡೆ ಡೆಲಿವರಿ ಬಾಯ್‌ ಗಳು ಗ್ಯಾಸ್ ಸಿಲಿಂಡರ್‌ ಗಳ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಇದರಿಂದ ತಪ್ಪಿಸಿಕೊಳ್ಳಲು ನೀವು ಏರ್ಟೆಲ್ ಥಾಂಕ್ ಅಪ್ಲಿಕೇಶನ್ ನ ಮೂಲಕ ಬುಕ್ ಮಾಡಿ ರೂ. 80 ಕCash Back ಪಡೆಯಬಹುದು. ಇತರ ಪಾವತಿ ಅಪ್ಲಿಕೇಶನ್‌ ಗಳೂ ಈ ಆಫರ್ ಅನ್ನು ನೀಡುತ್ತದೆ. ಅಪ್ಲಿಕೇಶನ್‌ ಗಳನ್ನು ಬಳಸಿಕೊಂಡು ಗ್ಯಾಸ್ ಸಿಲಿಂಡರ್‌ ಗಳನ್ನು ಬುಕಿಂಗ್ ಮಾಡುವುದು ಖಂಡಿತವಾಗಿಯೂ ದೀರ್ಘಾವಧಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅವಕಾಶಗಳನ್ನು ನೀಡುತ್ತದೆ.

Join Nadunudi News WhatsApp Group

Gas Cylinder Latest News
Image Credit: Informalnewz

Join Nadunudi News WhatsApp Group