ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ ಗೊತ್ತಾ, ಹೊರಬಂದ ಶಾಕಿಂಗ್ ಸತ್ಯ ಬಿಚ್ಚಿಟ್ಟ ಗೀತಾ, ಅಷ್ಟಕ್ಕೂ ಏನದು ನೋಡಿ.

ನಟಿ ಗೀತಾ ಭಟ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬ್ರಹ್ಮಗಂಟು ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿ ಅಂದರೆ ಅದೂ ಗೀತಾ ಭಟ್ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಗೀತ್ ಭಟ್ ಅವರು ಈ ಧಾರಾವಾಹಿಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬರಿ ಧಾರಾವಾಹಿ ಮಾತ್ರವಲ್ಲದೆ ಕನ್ನಡ ಕೆಲವು ಚಿತ್ರಗಳಲ್ಲಿ ಕೂಡ ನಟಿ ಗೀತಾ ಭಟ್ ಅವರು ಕಾಣಿಸಿಕೊಂಡಿರುವುದನ್ನ ನಾವು ನೀವೆಲ್ಲ ನೋಡಿದ್ದೇವೆ ಎಂದು ಹೇಳಬಹುದು. ಇನ್ನು ಸದ್ಯ ಧಾರಾವಾಹಿಯನ್ನ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಿದ್ದ ಗೀತಾ ಭಟ್ ಅವರು ಮೂರೂ ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಮೊನ್ನೆ ಶನಿವಾರ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ಮೂರೂ ವಾರಗಳ ಕಾಲ ಒಳ್ಳೆಯ ಆಟವನ್ನ ಆಡಿದ ಗೀತಾ ಭಟ್ ಅವರಿಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ವೋಟ್ ಹಾಕದ ಕಾರಣ ಅವರು ಮನೆಯಿಂದ ಆಚೆ ಬರಬೇಕಾಯಿತು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಗೀತಾ ಭಟ್ ಅವರು ಈಗ ಬಿಗ್ ಬಾಸ್ ಮನೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನ ನೀಡಿದ್ದು ಸದ್ಯ ಗೀತಾ ಭಟ್ ಅವರ ಈ ಮಾತು ಜನರ ಹುಬ್ಬೇರಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಗೀತಾ ಭಟ್ ಅವರು ಬಿಗ್ ಬಾಸ್ ಮನೆಯ ಬಗ್ಗೆ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Geetha bhat in Big Boss

ಹೌದು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದ ಗೀತಾ ಭಟ್ ಅವರು ತಮ್ಮ ಬಿಗ್ ಬಾಸ್ ಅನುಭವವನ್ನ ಹಂಚಿಕೊಂಡಿದ್ದು ಈ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಗ್ರೂಪಿಸಂ ಇದೆ ಎಂದು ಹೇಳಿದ್ದಾರೆ. ಹೌದು ಬಿಗ್ ಬಾಸ್ ಮನೆಯೊಳಗೇ ಗ್ರೂಪಿಸಂ ಇದೆ, ಆದರೆ ನಾನು ಯಾರಿಂದಲೂ ಮೂಲೆಗುಂಪಾಗುವುದಿಲ್ಲ ಎಂದು ಭಾವಿಸಿದ್ದೆ ಮತ್ತು ನಾನು ಎಲ್ಲರೊಂದಿಗೂ ಮಾತನಾಡಲು ಪ್ರಯತ್ನಿಸುತ್ತಿದ್ದೆ, ಆದರೆ ಅದರಲ್ಲಿ ವಿಫಲಳಾದೆ ಎಂದು ಗೀತಾ ಅವರು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿಯಬೇಕಾದರೆ ಒಬ್ಬೊಬ್ಬರ ಭಾಂದವ್ಯವನ್ನ ಗೆಲ್ಲುವುದು ತುಂಬಾ ಮುಖ್ಯವೆಂದು ನಾನು ಭಾವಿಸಿದ್ದೆ, ಆದರೆ ಕೆಲವು ಸಮಯದ ಬಳಿಕ ನನಗೆ ನೇರವಾಗಿ ಮತ್ತು ಮುಕ್ತವಾಗಿ ಮಾತನಾಡಬೇಕು ಅನ್ನುವುದು ತಿಳಿಯಿತು, ಆದರೆ ಅಷ್ಟರಲ್ಲಿ ಸಮಯ ಮುಗಿಯಿತು ಎಂದು ಹೇಳಿದ್ದಾರೆ ಗೀತಾ ಅವರು.

ಇನ್ನು ಮಾಧ್ಯಮದವರು ಗೀತಾ ಅವರ ಬಳಿ ಭಾವನಾತ್ಮಕ ವ್ಯಕ್ತಿತ್ವದ ಬಗ್ಗೆ ಕೇಳಿದಾಗ ಗೀತಾ ಅವರು ನನ್ನ ಭಾವನಾತ್ಮಕ ವಿಧಾನದ ಬಗ್ಗೆ ನನಗೆ ಒಂದಿಷ್ಟು ಪಶ್ಚಾತಾಪವಿಲ್ಲ. ನಾನು ಬಿಗ್​ಬಾಸ್​ ಆಟವನ್ನು ಅರ್ಥ ಮಾಡಿಕೊಂದು ಕೆಲವು ಬದಲಾವಣೆ ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ, ಆದರೆ ಯಾವುದೇ ಸಮಯದಲ್ಲಿ ನನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳದ ಕಾರಣ ನಾನು ಎಲ್ಲರೊಂದಿಗೆ ಚೆನ್ನಾಗಿರುತ್ತೇನೆಂದು ಭಾವಿಸಿದೆ, ಇದು ಕೇವಲ ಆಟವಷ್ಟೇ, ಆದರೆ ಜೀವನ ಇದಕ್ಕಿಂತ ದೊಡ್ಡದು, ನಾನು ಈಗ ಹೇಗಿದ್ದೀನೋ ಅದರಲ್ಲಿ ನನಗೆ ತೃಪ್ತಿ ಇದೆ ಎಂದರು. ಸ್ನೇಹಿತರೆ ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Geetha bhat in Big Boss

Join Nadunudi News WhatsApp Group