Gold Price Hike: 65000 ರೂ ಗಡಿ ದಾಟಿದ ಚಿನ್ನದ ಬೆಲೆ, ಇನ್ಮುಂದೆ ಬಡಜನರಿಗೆ ಚಿನ್ನ ಬರಿ ಕನಸು ಮಾತ್ರ.

ಜನರನ್ನು ಕಂಗಾಲು ಮಾಡಿದ ಮಾರ್ಚ್ ತಿಂಗಳ ಚಿನ್ನದ ಬೆಲೆ, ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ

Gold Price Hike In India: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಾರಿ ವ್ಯತ್ಯಾಸ ಕಾಣುತ್ತಿದೆ. ಕಳೆದ ವರ್ಷದಲ್ಲಿ ಚಿನ್ನದ ಬೆಲೆ ಪ್ರತಿ ನಿತ್ಯ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತ ಬಂದಿತ್ತು. ತಿಂಗಳಿನಲ್ಲಿ ಮೂರ್ ನಾಲ್ಕು ದಿನ ಮಾತ್ರ ಚಿನ್ನದ ಬೆಲೆ ಇಳಿಕೆಯಾಗಿತ್ತು. ಕಳೆದ ವರ್ಷದ ಚಿನಂದ ಬೆಲೆ ಏರಿಕೆ ಜನಸಾಮಾನ್ಯರಿಗೆ ಬಾರಿ ಆತಂಕವನ್ನು ಹುಟ್ಟಿಸಿದೆ ಎನ್ನಬಹುದು. ಆದರೆ 2023 ಡಿಸೇಂಬರ್ ಅಂತ್ಯದಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎನ್ನಬಹುದು.

ಇನ್ನು ಜನವರಿ 2024 ರಿಂದ ಚಿನ್ನದ ಬೆಲೆಯಲ್ಲಿ ಬಹುತೇಕ ಇಳಿಕೆ ಕಂಡು ಬಂತಿತ್ತು. ಆದರೆ ಇಳಿಕೆಯ ಜೊತೆಗೆ ಏರಿಕೆ ಕೂಡ ಆಗಾಗ ಆಗುತ್ತಿತ್ತು. ಇನ್ನು ಜನವರಿ ಮತ್ತು ಫೆಬ್ರವರಿ ಚಿನ್ನದ ಬೆಲೆ ಸ್ವಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನಬಹುದು. ಚಿನ್ನದ ಬೆಲೆಯ ಇಳಿಕೆಯ ಖುಷಿಯಲ್ಲಿದ್ದ ಜನರಿಗೆ ಸದ್ಯ ಮಾರ್ಚ್ ತಿಂಗಳು ಬಾರಿ ಶಾಕ್ ನೀಡಿದೆ. ಕಾರಣ ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ ಎನ್ನಬಹುದು.

Gold Price Hike In India
Image Credit: Paytm

65000 ರೂ. ಗಡಿ ದಾಟಿದ ಚಿನ್ನದ ಬೆಲೆ
ಮಾರ್ಚ್ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ 310 ರೂ. ಏರಿಕೆಯಾಗಿತ್ತು. ತಿಂಗಳ ಮೊದಲ ದಿನದ ಚಿನ್ನದ ಬೆಲೆ ಏರಿಕೆಯು ಜನರ ಚಿಂತೆಯನ್ನು ಹೆಚ್ಚಿಸಿತ್ತು. ಮೊದಲ ದಿನವೇ ಏರಿಕೆ ಕಂಡ ಚಿನ್ನದ ಬೆಲೆ ಮುಂದಿನ ತಿಂಗಳಲ್ಲಿ ಇನ್ನಷ್ಟು ಏರಿಕೆಯಾಗುತ್ತದೆ ಎನ್ನುವ ಯೋಚನೆ ಎಲ್ಲರಲ್ಲೂ ಮೂಡಿತ್ತು. ಅದರಂತೆ ಚಿನ್ನದ ಬೆಲೆ ಮಾರ್ಚ್ ತಿಂಗಳಿನಲ್ಲಿ ಏರುಗತಿಯಲ್ಲಿ ಸಾಗುತ್ತಿದೆ.

ಮಾರ್ಚ್ ತಿಂಗಳು 6 ದಿನವೂ ಕೂಡ ಚೀನಾದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನು ಫೆ, 29 ರಂದು 57,590 ರೂ. ಇದ್ದ ಚಿನ್ನದ ಬೆಲೆ ಮಾರ್ಚ್ ಏರಿಕೆಯ ಬಳಿಕ ಇದೀಗ 59,700 ರೂ. ತಲುಪಿದೆ. ಅಂದರೆ ಆರೇ ದಿನಗಳಲ್ಲಿ ಬರೋಬ್ಬರಿ 2,110 ರೂ. ತಲುಪಿದೆ. ವರ್ಷದ ಆರಂಭದಲ್ಲಿ 57 ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ ಇದೀಗ 65,000 ಗಡಿ ದಾಟಿದೆ. ಹತ್ತು ಗ್ರಾಮ ಚಿನ್ನಕ್ಕೆ ಬರೋಬ್ಬರಿ 65 ಸಾವಿರಕ್ಕೂ ಹೆಚ್ಚಿನ ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.

Gold Price Hike In 2024
Image Credit: Moneycontrol

ಇನ್ಮುಂದೆ ಬಡಜನರಿಗೆ ಚಿನ್ನ ಬರಿ ಕನಸು ಮಾತ್ರ
ಈ ವರ್ಷದಲ್ಲಿ ಕೂಡ ಬಡವರ ಕೈಗೆ ಚಿನ್ನ ಸಿಗದಂತಾಗಿದೆ. ಮಾರ್ಚ್ ತಿಂಗಳ ಚಿನ್ನದ ಬೆಲೆಯ ಏರಿಕೆಯು ಜನರನ್ನು ಕಂಗಾಲು ಮಾಡಿದೆ ಎನ್ನಬಹುದು. ಇಂದು ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಖರೀದಿ ಕಷ್ಟವಾಗುತ್ತಿದೆ ಎನ್ನಬಹುದು. ಒಂದೆಡೆ ಮದುವೆಯ ಸೀಸನ್ ಆರಂಭವಾದ ಕಾರಣ ಚಿನ್ನದಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎನ್ನಬಹುದು. ಚಿನ್ನದ ಮೇಲಿನ ಬೇಡಿಕೆ ಹೆಚ್ಚುವ ಕಾರಣ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group