ದೇಶದಲ್ಲಿ ಇಳಿಕೆಯ ಹಾದಿಯನ್ನ ಹಿಡಿದ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಉತ್ತಮ ಸಮಯ.

ಕಳೆದ ಎರಡು ವರ್ಷಗಳಿಂದ ಏರಿಕೆ ಹಾದಿಯನ್ನ ಹಿಡಿದಿದ್ದ ಚಿನ್ನದ ಬೆಲೆ ಈಗ ಇಳಿಕೆಯ ಹಾದಿಯನ್ನ ಹಿಡಿದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಕರೋನ ಸೋಂಕು ಕಾಣಿಸಿಕೊಂಡ ದಿನದಿಂದ ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಲು ಆರಂಭವಾಗಿ ಈಗ ಬಡಜನರ ಕೈಗೆ ಇಟುಕದ ಹಾಗೆ ಏರಿಕೆಯಾಗಿದೆ. ದೇಶದಲ್ಲಿ ಚಿನ್ನದ ಬೆಲೆ ಪ್ರತಿನಿತ್ಯ ಏರಿಕೆ ಆಗುವ ಕಾರಣ ಜನರು ಚಿನ್ನವನ್ನ ಖರೀದಿ ಮಾಡುವ ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಳಿಕೆಯ ಹಾದಿಯನ್ನ ಹಿಡಿದ್ದು ಇದು ಚಿನ್ನ ಪ್ರಿಯರ ಖುಷಿಗೆ ಕಾರಣವಾಗಿದೆ. ಹಾಗಾದರೆ ದೇಶದಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಮತ್ತು ಎಷ್ಟು ಇಳಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯನ್ನ ಹಿಡಿದಿದ್ದು ದೇಶದಲ್ಲಿ ಚಿನ್ನದ ವಹಿವಾಟು ಬಹಳ ಜಾಸ್ತಿಯಾಗಿದೆ. ಇಂದು ದೇಶೀಯ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4625 ರೂಪಾಯಿ ಆಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಚಿನ್ನದ ಬೆಲೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡುಬಂದಿದೆ. ಕಳೆದ ತಿಂಗಳು 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4730 ರೂಪಾಯಿ ಆಗಿದ್ದು, ಪ್ರಸ್ತುತ ತಿಂಗಳಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 95 ರೂಪಾಯಿ ಇಳಿಕೆ ಆಗಿದೆ. ನಿನ್ನೆ 4645 ರೂಪಾಯಿ ಇದ್ದ ಚಿನ್ನದ ಬೆಲೆಯಲ್ಲಿ ಇಂದು 20 ರೂಪಾಯಿ ಇಳಿಕೆ ಕಂಡುಬಂದಿದೆ.

gold price today

ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4625 ರೂಪಾಯಿ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆ 46250 ರೂಪಾಯಿ ಆಗಿದೆ. ಸದ್ಯ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯನ್ನ ಹಿಡಿದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿನ್ನವನ್ನ ಖರೀದಿ ಮಾಡಲು ಇದು ಉತ್ತಮ ಸಮಯ ಅನ್ನುವುದು ಚಿನ್ನದ ತಜ್ಞರ ಅಭಿಪ್ರಾಯ ಕೂಡ ಆಗಿದೆ.

ಅದೇ ರೀತಿಯಲ್ಲಿ ಇಂದು ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 5045 ರೂಪಾಯಿ ಆಗಿದ್ದು 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 50450 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಹಾದಿಯನ್ನ ಹಿಡಿದಿರುವುದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗಲು ಪ್ರಮುಖದ ಕಾರಣವಾಗಿದೆ. ಚಿನ್ನದ ಬೆಲೆಯ ಜೊತೆಗೆ ದೇಶದಲ್ಲಿ ಬೆಳ್ಳಿಯ ಬೆಲೆ ಕೂಡ ದೊಡ್ಡ ಪ್ರಮಾಣದಲ್ಲಿ ಇಳಿಕೆಯ ಹಾದಿಯನ್ನ ಹಿಡಿದಿದೆ.

Join Nadunudi News WhatsApp Group

Join Nadunudi News WhatsApp Group