Google Calendar: ಸ್ಮಾರ್ಟ್ ಫೋನ್ ಬಳಸುವವರಿಗೆ ಬಿಗ್ ಅಪ್ಡೇಟ್, ಇನ್ನುಮುಂದೆ ಮೊಬೈಲ್ ನಲ್ಲಿ ಸಿಗಲ್ಲ ಈ ಸೇವೆ.

ಇಂತವರ ಸ್ಮಾರ್ಟ್ ಫೋನ್ ನಲ್ಲಿ ಸ್ಥಗಿತಗೊಳ್ಳಲಿದೆ Google Calendar.

Google Calendar Close: ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಕೂಡ ಸರ್ಚ್ ದೈತ್ಯ Google ಸಾಕಷ್ಟು ಅಪ್ಡೇಟೆಡ್ ಫೀಚರ್ ಅನ್ನು ನೀಡುತ್ತಿದೆ. ಮೊಬೈಲ್ ಬಳಕೆದಾರರು google ನ ಹೆಚ್ಚಿನ ಅಪ್ಲಿಕೇಶನ್ ಗಳನ್ನೂ ದಿನ ನಿತ್ಯ ಬಳಸುತ್ತಾರೆ. ಇನ್ನು Google ಇತ್ತೀಚೆಗೆ ನೀಡುತ್ತಿರುವ ಆಪ್ ಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಇತ್ತೀಚೆಗಷ್ಟೇ ಎರಡು ವರ್ಷದಿಂದ ಸೈನ್ ಇನ್ ಮಾಡ Gmail ಖಾತೆಯನ್ನು ಡಿಲೀಟ್ ಮಾಡುವುದಾಗಿ Google ಬಳಕೆದಾರರಿಗೆ ಎಚ್ಚರಿಕೆ ನೀಡಿತ್ತು. ಸದ್ಯ Google ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಗೂಗಲ್ ಇದೀಗ ಈ ಅಪ್ಲಿಕೇಶನ್ ಬಳಕೆದಾರರಿಗೆ ಹೊಸ ನಿಯಮ ಜಾರಿಗೊಳಿಸಿದೆ.

Google Calendar Close
Image Credit: Pinterest

Google Calendar ಬಳಸುವವರಿಗೆ ಮಹತ್ವದ ಮಾಹಿತಿ
Google ಇದೀಗ Google Calendar ಬಳಸುವ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. Google Calendar ಆಂಡ್ರಾಯ್ಡ್, ಐಫೋನ್, ಪಿಸಿ, ಟ್ಯಾಬ್ಲೆಟ್ ಎಲ್ಲ ರೀತಿಯ ಸಾಧನದಲ್ಲೂ ಲಭ್ಯವಾಗುತ್ತದೆ. Google Calendar ಅನ್ನು ನಿತ್ಯ ಎಲ್ಲರು ಬಳಸುತ್ತಾರೆ ಎನ್ನಬಹುದು. ದಿನ ಯಾವುದು, ದಿನದ ವಿಶೇಷತೆ ಏನು ಎಂದು ತಿಳಿಯಲು Google Calendar ಬಳಸುವುದು ಸಹಜ. ಸದ್ಯ ದಿನನಿತ್ಯ Google Calendar ಬಳಸುವವರಿಗೆ ಗೂಗಲ್ ಎಚ್ಚರಿಕೆ ನೀಡಿದೆ.

ಇಂತವರ ಸ್ಮಾರ್ಟ್ ಫೋನ್ ನಲ್ಲಿ ಸ್ಥಗಿತಗೊಳ್ಳಲಿದೆ Google Calendar
Google Calendar ನಲ್ಲಿ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇವೆಂಟ್ ಗಳನ್ನೂ ರಚಿಸುವುದು, ಸಭೆಯನ್ನು ನಿಗದಿಪಡಿಸುವುದು ಮತ್ತು ಜ್ಞಾಪನೆಗಳನ್ನು ನಿಮಗೆ ಅನುಮತಿಸುವ ಕಾರ್ಯದಲ್ಲಿ ಸಮಸ್ಯೆ ಎದುರಾಗಿದೆ. ಹಳೆಯ ಆವೃತ್ತಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದವರ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಲೆಂಡರ್ ಅಪ್ಲಿಕೇಶನ್ ಸ್ಥಗಿತಗೊಳ್ಳಲಿದೆ.

Google Calendar
Image Credit: 9to5google

ಆಂಡ್ರಾಯ್ಡ್ 8 .0 ಅಥವಾ ಹೆಚ್ಚಿನ ಆವೃತ್ತಿಯ Google Calendar App ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಆಂಡ್ರಾಯ್ಡ್ 7 .1 ಅಥವಾ ಅದಕ್ಕಿಂತ ಕೆಳಗಿನ ಆವೃತ್ತಿಯ ಸ್ಮಾರ್ಟ್ ಫೋನ್ ನಲ್ಲಿ Google Calendar ತನ್ನ ಸೇವೆಯನ್ನು ನಿಲ್ಲಿಸಲಿದೆ. ಈ ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನುಮುಂದೆ Google Calendar ಸೇವೆ ಲಭ್ಯವಾಗುವುದಿಲ್ಲ. ಆಂಡ್ರಾಯ್ಡ್ 7.1 ಸ್ಮಾರ್ಟ್ಫೋನ್ ನಲ್ಲಿ ಭದ್ರತೆಯ ಫೀಚರ್ ಕಡಿಮೆ ಇರುವದರಿಂದ ಗೂಗಲ್ ಈ ನಿರ್ಧಾರ ಕೈಗೊಂಡಿದೆ.

Join Nadunudi News WhatsApp Group

Join Nadunudi News WhatsApp Group