Find My Device: ನಿಮ್ಮ ಮೊಬೈಲ್ ಆಫ್ ಇದ್ದರೂ ಈಗ ಟ್ರ್ಯಾಕ್ ಮಾಡಬಹುದು, ಗೂಗಲ್ ನಿಂದ ಹೊಸ ಫೀಚರ್ ಲಾಂಚ್.

ಗೂಗಲ್ ನ ಈ ಫೀಚರ್ ಮೂಲಕ ಮೊಬೈಲ್ ಆಫ್ ಇದ್ದರೂ ಕೂಡ ಟ್ರ್ಯಾಕ್ ಮಾಡಬಹುದು

Google Find My Device Feature: ಸದ್ಯ ಎಲ್ಲರ ಕೈಯಲ್ಲಿ ಕೂಡ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ. ಸ್ಮಾರ್ಟ್ ಫೋನ್ ಮಾನವನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಗಲಾರದು. ನಿಮಗೆ ತಿಳಿದಿರುವ ಹಾಗೆ ಸ್ಮಾರ್ಟ್ ಫೋನ್ ನಿಂದ ಅನೇಕ ಅನುಕೂಲಗಳಿವೆ.

ಸ್ಮಾರ್ಟ್ ಫೋನ್ ಬಳಕೆದಾರರ ಅದೆಷ್ಟೋ ಕೆಲಸಗಳನ್ನು ಸುಲಭಗೊಳಿಸುತ್ತದೆ. ಜನರು ತಮ್ಮ ಎಲ್ಲ ಎಲ್ಲ ರೀತಿಯ ವೈಯಕ್ತಿಕ ಮಾಹಿತಿಯನ್ನು ಸ್ಮಾರ್ಟ್ ಫೋನ್ ನಲ್ಲಿ ಇರಿಸಿಕೊಳ್ಳಲು ಬಯಸುತ್ತಾರೆ. ಹೀಗಿರುವಾಗ ಜನರ ಮಿನಿ ಸೇಫ್ಟಿ ಲಾಕರ್ ಆಗಿರುವ ಸ್ಮಾರ್ಟ್ ಫೋನ್ ಕಳೆದುಹೋದರೆ ಚಿಂತೆಗೊಳಗಾಗುವುದಂತೂ ಖಂಡಿತ.

ಸ್ಮಾರ್ಟ್ ಫೋನ್ ಕಳೆದು ಹೋಗುವುದು ಅಥವಾ ಎಲ್ಲಾದರೂ ಇತ್ತು ಮರೆತುಹೋಗುವುದು ಹೀಗೆ ಯಾವುದೇ ರೀತಿಯಲ್ಲಿ ಸ್ಮಾರ್ಟ್ ಫೋನ್ ನಮ್ಮಿಂದ ದೂರವಾದರೆ ಆತಂಕ ಉಂಟಾಗುತ್ತದೆ. ಆದರೆ ಇನ್ನುಮುಂದೆ ಬಳಕೆದಾರರು ಇದರ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಕಾರಣ Google ಇದಕ್ಕಾಗಿಯೇ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ನೂತನ ಫೀಚರ್ ನ ಮೂಲಕ ನೀವು ನಿಮ್ಮ ಮೊಬೈಲ್ ಆಫ್ ಇದ್ದರೂ ಈಗ ಟ್ರ್ಯಾಕ್ ಮಾಡಬಹುದು.

Google Find My Device Feature
Image Credit: Firstpost

ನಿಮ್ಮ ಮೊಬೈಲ್ ಆಫ್ ಇದ್ದರೂ ಈಗ ಟ್ರ್ಯಾಕ್ ಮಾಡಬಹುದು
ಸಾಮಾನ್ಯವಾಗಿ ಮೊಬೈಲ್ ಕಳ್ಳತನವಾದಾಗ ಕದ್ದವರು ಆ ಫೋನ್ ಅನ್ನು ಸ್ವಿಚ್ ಆಫ್ ಮಾಡುತ್ತಾರೆ. ಸ್ವಿಫ್ಟ್ ಮಾಡಿದಾಗ ಮೊಬೈಲ್ ನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಸದ್ಯ ಇದಕ್ಕೆಲ್ಲ ಪರಿಹಾರ ಎನ್ನುವಂತೆ Google ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ.

ಜನಪ್ರಿಯ Pixel hardware ಗಾಗಿ ಗೂಗಲ್ ವೈಶಿಷ್ಟ್ಯದ ನವೀಕರಣವನ್ನು ಹೊರತಂದಿದೆ. ಇದರಿಂದಾಗಿ ಕಳ್ಳ ಫೋನ್ ಕದ್ದು ಸ್ವಿಚ್ ಆಫ್ ಮಾಡಿದರೂ ನಿಮ್ಮ ಆ್ಯಂಡ್ರಾಯ್ಡ್ ಫೋನ್ ಟ್ರ್ಯಾಕ್ ಮಾಡಿ ಹಿಡಿಯಬಹುದು. ಈ ವೈಶಿಷ್ಟ್ಯವು ಪ್ರಸ್ತುತ Android 9 ಮತ್ತು ಮೇಲಿನ ಆವೃತ್ತಿಗಳಲ್ಲಿ ಲಭ್ಯವಿದೆ. ಆದ್ದರಿಂದ ನಿಮ್ಮ ಹಳೆಯ ಆವೃತ್ತಿಯನ್ನು ಈಗಲೇ ನವೀಕರಿಸಿ.

Join Nadunudi News WhatsApp Group

Find My Device Feature
Image Credit: Androidcentral

ಗೂಗಲ್ Find My Device ಹೇಗೆ ಕಾರ್ಯನಿರ್ವಹಿಸುತ್ತದೆ ಗೋತ್ತಾ..?
ಮೊದಲಿಗೆ ಈ ವೈಶಿಷ್ಟ್ಯವು Bluetooth Proximity ಎಂಬ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಸಮೀಪವಿರುವ ಸಾಧನಗಳನ್ನು ಪತ್ತೆಹಚ್ಚುವ ಮೂಲಕ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಐಫೋನ್‌ ನಲ್ಲಿರುವ ‘ಫೈಂಡ್ ಮೈ’ ನೆಟ್‌ವರ್ಕ್ ವೈಶಿಷ್ಟ್ಯದಂತೆಯೇ ಕಾರ್ಯನಿರ್ವಹಿಸುತ್ತದೆ. ವಿಶ್ವದಾದ್ಯಂತ ಆಂಡ್ರಾಯ್ಡ್ ಬಳಕೆದಾರರ ಜನಪ್ರಿಯತೆಯನ್ನು ನೀಡಿದ ಆಪಲ್‌ ಗಿಂತ ಗೂಗಲ್‌ ನ ನೆಟ್‌ ವರ್ಕ್ ಹೆಚ್ಚು ಶಕ್ತಿಶಾಲಿಯಾಗಿದೆ.

ಕಳೆದುಹೋದ ಅಥವಾ ಸ್ವಿಚ್ ಆಫ್ ಆಗಿರುವ Pixel 8 ಮತ್ತು Pixel 8 Pro ಮಾಲೀಕರು ತಮ್ಮ ಸಾಧನವನ್ನು ಪತ್ತೆ ಮಾಡಬಹುದು ಎಂದು Google ಹೇಳಿಕೊಂಡಿದೆ. ನೀವು ಹತ್ತಿರದ ಸಾಧನವನ್ನು ಹುಡುಕುತ್ತಿದ್ದರೆ Google Find My Device ನೀವು ಹತ್ತಿರದಲ್ಲಿರುವಾಗ ನೆಟ್‌ ವರ್ಕ್ ಅಪ್ಲಿಕೇಶನ್‌ ನಲ್ಲಿ ಗೋಚರಿಸುವ ಚಿಹ್ನೆಯನ್ನು ತೋರಿಸುತ್ತದೆ. ಶೀಘ್ರದಲ್ಲೇ ಬಳಕೆದಾರರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.

Google Find My Device
Image Credit: Androidauthority

Join Nadunudi News WhatsApp Group