GP Loan: ಗೂಗಲ್ ಪೆ ಬಳಸುವವರಿಗೆ 5 ನಿಮಷದಲ್ಲಿ ಸಿಗಲಿದೆ 15000 ರೂ ಸಾಲ, ತಿಂಗಳಿಗೆ 111 ರೂ. EMI.

ಈಗ ಗೂಗಲ್ ಪೆ ನಲ್ಲಿ ಸಿಗಲಿದೆ 15000 ರೂ ಸಾಲ

Google Pay Personal Loan Apply: ಇತ್ತೀಚಿನ ದಿನಗಳಲ್ಲಿ UPI ವಹಿವಾಟುಗಳು ಹೆಚ್ಚಾಗಿವೆ. ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ UPI ವಹಿವಾಟನ್ನು ಬಳಸುತ್ತಾರೆ. UPI ವಹಿವಾಟುಗಳು ಬಂದ ಮೇಲೆ ದೇಶದಲ್ಲಿ ನಗದು ವಹಿವಾಟು ಕಡಿಮೆ ಆಗುತ್ತಿದೆ ಎಂದರೆ ತಪ್ಪಾಗಲಾರದು.

ಇದೀಗ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ ಜನರಿಗೆ ಉತ್ತಮ ಸೇವೆಯನ್ನು ಪರಿಚಯಿಸಿದೆ. ಹೌದು ಇನ್ನುಮುಂದೆ ನೀವು ಗೂಗಲ್ ಪೇ (Google Pay) ಮೂಲಕ ನೀವು ಸಾಲ ಸೌಲಭ್ಯಗಳನ್ನು ಪಡೆಯಬಹುದು.

Google Pay Personal Loan
Image Credit: Mahamoney

ಗೂಗಲ್ ಪೆ ಬಳಸುವವರಿಗೆ 5 ನಿಮಷದಲ್ಲಿ ಸಿಗಲಿದೆ 15000 ರೂ ಸಾಲ
Google Pay ಇದೀಗ ವೈಯಕ್ತಿಕ ಸಾಲ ಪಡೆಯುವಲ್ಲಿ ಸಹಾಯವಾಗಲಿದೆ. G Pay ನ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಇದನ್ನು ಸ್ಯಾಚೆಟ್ ಲೋನ್ ಎಂದು ಕರೆಯಲಾಗುತ್ತದೆ. ಗೂಗಲ್ ಪೇ ಸಾಲ ನೀಡಲು DMI Finance ನೊಂದಿಗೆ ಕೈಜೋಡಿಸಿದೆ. Google Pay ಅನೇಕ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರತಿದಿನ ವ್ಯಾಪಾರ ಮಾಡಲು ಮತ್ತು ದಿನನಿತ್ಯದ ಸಾಲವನ್ನು ಪಾವತಿಸಲು ಬಯಸುವವರಿಗೆ Google ನ ಈ ಸೇವೆಯು ತುಂಬಾ ಪ್ರಯೋಜನಕಾರಿಯಾಗಿದೆ. Google ಸಾಲ ನೀಡಲು ICICI, HDFC, Kotak Mahindra ಮತ್ತು ಫೆಡರಲ್ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ತಿಂಗಳಿಗೆ 111 ರೂ. EMI
ಇನ್ನು Google Pay ಕಂಪನಿಯು ಸಣ್ಣ ವ್ಯಾಪಾರಿಗಳಿಗೆ 15,000 ರೂ. ಗಳಿಂದ ಪ್ರಾರಂಭವಾಗುವ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಇದರ ಮಾಸಿಕ ಕಂತು 111 ರೂಪಾಯಿ ಆಗಿದೆ. ವ್ಯಾಪಾರಿಗಳ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಪ್ರಸ್ತುತ, ಪೇಟಿಎಂ ಮತ್ತು ಇನ್ನಿತರ ದೊಡ್ಡ ಪಾವತಿ ಕಂಪನಿಗಳು ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸೇವೆಗಳನ್ನು ನೀಡುತ್ತಿವೆ. ನೀವು ಮಾಸಿಕ 111 ರೂ. EMI ಪಾವತಿಸುತ್ತ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group

Google Pay Personal Loan Apply
Image Credit: Carfinance4you

ಸಾಲದ ಲಾಭ ಪಡೆಯುವ ಮಾರ್ಗಗಳು
•ಮೊದಲು Google Pay Business ಆಯ್ಕೆಗೆ ಭೇಟಿ ನೀಡಬೇಕು

•Loan ವಿಭಾಗಕ್ಕೆ ಹೋಗಿ ಮತ್ತು ಆಫರ್‌ಗಳ ಮೇಲೆ ಕ್ಲಿಕ್ ಮಾಡಬೇಕು

•ಸಾಲದ ಮೊತ್ತವನ್ನು ನಮೂದಿಸಬೇಕು

•ನಂತರ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ.

•ಇಲ್ಲಿ ನೀವು KYC ಸೇರಿದಂತೆ ಕೆಲವು ಸುಲಭ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸಾಲವನ್ನು ಪಡೆಯಬಹುದು.

Google Pay Personal Loan Latest News
Image Credit: Moneycontrol

Join Nadunudi News WhatsApp Group