Loan Apps: 3500 ಆಪ್ ಬ್ಯಾನ್ ಮಾಡಿದ ಗೂಗಲ್, ಈ ಆಪ್ ಇದ್ದರೆ ನಿಮ್ಮ ಖಾತೆ ಖಾಲಿಯಾಗಲಿದೆ.

3500 ಲೋನ್ ಅಪ್ಲಿಕೇಶನ್ ಗಳು ನಕಲಿ ಲೋನ್ ಅಪ್ಲಿಕೇಶನ್ ಆಗಿದ್ದು ಅಂತಹ ಅಪ್ಲಿಕೇಶನ್ ಗಳನ್ನ ಈಗ ಗೂಗಲ್ ಬ್ಯಾನ್ ಮಾಡಿದೆ

Google Play Loan App: ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗೂಗಲ್ ಪ್ಲೇ (Google Play) ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. ಸಾಕಷ್ಟು ಉಪಯೋಗಕಾರಿ ಆಪ್ ಗಳನ್ನೂ ಗೂಗಲ್ ಪ್ಲೇ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಇನ್ನು ಗೂಗಲ್ ಪ್ಲೇ ತನ್ನ ಸೇವೆಗಳನ್ನು ವಿಸ್ತರಿಸುತ್ತ ಹೋಗುತ್ತಿದೆ. ಇದೀಗಾ ಗೂಗಲ್ ಪ್ಲೇ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಗೂಗಲ್ ಪ್ಲೇ ಕೆಲವು ಲೋನ್ ಅಪ್ಲಿಕೇಶನ್ ಅನ್ನು ನಿಷೇಧಿಸಿದೆ. ಗೂಗಲ್ ಪ್ಲೇ ತನ್ನ ಸಾಲದ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸಲು ಕಾರಣ ಏನಿರಬಹುದು ಎನ್ನುವ ಬಗ್ಗೆ ತಿಳಿಯೋಣ.

Google Play Loan App
Image Source: Youtube

ಗೂಗಲ್ ಪ್ಲೇ ಪ್ರೊಟೆಕ್ಟ್ (Google Play Protect) 
ಈ ಗೂಗಲ್ ಪ್ಲೇ ಪ್ರೊಟೆಕ್ಟ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಗೂಗಲ್ ಪೇ ಪ್ರೊಟೆಕ್ಟ್ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸುರಕ್ಷತೆಯನ್ನು ನೀಡುತ್ತದೆ. ಅನಗತ್ಯ ಸಾಫ್ಟ್ ವೆರ್ ಬೆದರಿಕೆಗಳಿಂದ ಈ ಗೂಗಲ್ ಪ್ಲೇ ಪ್ರೊಟೆಕ್ಟ್ ರಕ್ಷಣೆ ನೀಡುತ್ತದೆ.

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅನಗತ್ಯ ಆಪ್ ಗಳು ಇನ್ಸ್ಟಾಲ್ ಮಾಡಿಕೊಳ್ಳುವ ಮುನ್ನ ಗೂಗ್ಲ್ ಪ್ಲೇ ಪ್ರೊಟೆಕ್ಟ್ ನಿಮಗೆ ಸುರಕ್ಷತೆಯ ಬಗ್ಗೆ ಪ್ರಶ್ನಿಸುತ್ತದೆ. ಈ ವೇಳೆ ಬಳಕೆದಾರರಿಗೆ ಹಾನಿಕಾರರ ಆಪ್ ಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.

Google Play Loan App
Image Source: India Today

ಕೆಲವು ಲೋನ್ ಅಪ್ಲಿಕೇಶನ್ ಅನ್ನು ನಿಷ್ಕ್ರಿಯೆಗೊಳಿಸಿದ ಗೂಗಲ್ ಪ್ಲೇ
ಗೂಗಲ್ ಪ್ಲೇ ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ನೀಡಿದೆ. ಬಳಕೆದಾರರ ಸುರಕ್ಷತೆಯನ್ನು ಗೂಗಲ್ ಪ್ಲೇ ಕಾಪಾಡುತ್ತಿದೆ. ಇನ್ನು ತನ್ನ ಬಳಕೆದಾರರಿಗೆ ಸಹಾಯವಾಗಲು ಸಾಕಷ್ಟು ಲೋನ್ ಆಪ್ ಗಳನ್ನೂ ನೀಡುತ್ತಿದೆ. ಆದರೆ ಇದೀಗ 3500 ಕ್ಕೂ ಹೆಚ್ಚಿನ ಆಪ್ ಗಳನ್ನೂ ಗೂಗಲ್ ಪ್ಲೇ ನಿಷ್ಕ್ರಿಯೆಗೊಳಿಸಿದೆ.

Join Nadunudi News WhatsApp Group

2022 ರಲ್ಲಿ ಆದ ಪ್ರಮುಖ ಕಾರ್ಯಾಚರಣೆ ಪ್ರಕಾರ ಹೊಸ ಮತ್ತು ಭದ್ರತಾ ಫೀಚರ್ ಗಳು ಮತ್ತು ನೀತಿ ವರ್ಧನೆಗಳ ಪರಿಣಾಮವಾಗಿ 1 .43 ಮಿಲಿಯನ್ ನೀತಿ ಉಲ್ಲಂಘಿಸುವ ಆಪ್ ಗಳನ್ನೂ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ. ಈ ರೀತಿಯ ಹಾನಿಕಾರಕ ಆಪ್ ಗಳನ್ನೂ ಐಎ ಆಧಾರಿತ ಟೆಕ್ನಲಾಜಿ ಬಳಕೆ ಮಾಡಿಕೊಂಡು ಪತ್ತೆ ಮಾಡಲಾಗುತ್ತದೆ.

Google Play Loan App
Image Source: India Today

Join Nadunudi News WhatsApp Group