7th Pay: 7 ನೇ ವೇತನಕ್ಕಾಗಿ ಕಾಯುತ್ತಿರುವ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ, ಸರ್ಕಾರದ ಇನ್ನೊಂದು ಆದೇಶ.

7 ನೇ ವೇತನಕ್ಕಾಗಿ ಕಾಯುತ್ತಿರುವ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ

7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಕೂಡ 7 ನೇ ವೇತನ ಆಯೋಗ ವರದಿ ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರೀ ನೌಕರರು ಈಗಲೂ ಯೋಚಯಿಸುತ್ತಲೇ ಇದ್ದಾರೆ. ಯಾವಾಗ 7 ನೇ ವೇತನ ಆಯೋಗ ವರದಿ ಜಾರಿಯಾಗುತ್ತದೆ ಎನ್ನುವ ಕುತೂಹಲದಲ್ಲಿ ನೌಕರರು ದಿನದೂಡುತ್ತಿದ್ದಾರೆ ಎನ್ನಬಹುದು.

ಇನ್ನು ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ 7 ನೇ ವೇತನದ ಬಗ್ಗೆ ಘೋಷಣೆ ಹೊರಡಿಸಲಾಗುತ್ತದೆ ಎಂದು ಈ ಹಿಂದೆ ಸರ್ಕಾರ ಹೇಳಿಕೆ ನೀಡುತ್ತು. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ಕೂಡ ರಚನೆಯಾಗಿದೆ. ಸದ್ಯ ರಾಜ್ಯ ಸರ್ಕಾರ ಚುನಾವಣೆಯ ಬೆನ್ನಲೇ 7 ನೇ ವೇತನ ವರದಿ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದೆ.

Govt Employees 7th Pay Commission
Image Credit: ABP Live

7 ನೇ ವೇತನಕ್ಕಾಗಿ ಕಾಯುತ್ತಿರುವ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ
ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರ ಪ್ರಕಟಿಸದಿದ್ದರೂ, ಈ ವಿಷಯ ಪ್ರಾಸಂಗಿಕವಾಗಿ ಸುಲಿದು ಹೋಗಿದ್ದು, ಸರ್ಕಾರಿ ನೌಕರರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಗುರುವಾರದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯ ಸೇರ್ಪಡೆಯಾಗಿಲ್ಲ. ಆದರೆ ಸಭೆಯ ಮುಕ್ತಾಯದ ನಂತರ 7 ನೇ ವೇತನ ಜಾರಿಯ ಬಗ್ಗೆ ಚರ್ಚೆ ಬಂದಿದೆ. ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಪ್ರಸ್ತುತ ಪರಿಸ್ಥಿತಿಯಲ್ಲಿ ಏಳನೇ ವೇತನ ಆಯೋಗದ ಪ್ರಸ್ತಾವನೆಯನ್ನು ಜಾರಿಗೆ ತರಬಾರದು ಎಂದು ಸಂಪುಟದ ಬಹುತೇಕ ಸಚಿವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಸರ್ಕಾರದ ಇನ್ನೊಂದು ಆದೇಶ
ಗ್ಯಾರಂಟಿ ಹೊರೆಯಿಂದ ತತ್ತರಿಸುತ್ತಿರುವ ಸರಕಾರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಖರ್ಚು ಭರಿಸುವ ಸಾಮರ್ಥ್ಯವೂ ಇಲ್ಲ. ಬಜೆಟ್ ನಲ್ಲಿ ನೀಡಿದ ಗುರಿಯಷ್ಟು ಆದಾಯ ಸಂಗ್ರಹಿಸುವಲ್ಲಿ ಸಮಸ್ಯೆ ಇದೆ. ಹೀಗಾಗಿ 7ನೇ ವೇತನ ಆಯೋಗ ಜಾರಿ ವಿಚಾರದಲ್ಲಿ ಸರಕಾರ ಜಾಗೃತ ಮೌನ ವಹಿಸಿದೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಸರ್ಕಾರಿ ನೌಕರರು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಭೆಯಲ್ಲಿ 7 ನೇ ವೇತನದ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಬಾರಿ ಕೂಡ ಸರ್ಕಾರೀ ನೌಕ್ರಾರ 7 ನೇ ವೇತನದ ಜಾರಿಯ ಕನಸು ಕನಸಾಗೇ ಉಳಿದಿದೆ ಎನ್ನಬಹುದು.

7th Pay Latest Update
Image Credit: Informalnewz

Join Nadunudi News WhatsApp Group

Join Nadunudi News WhatsApp Group