DA Hike 2024: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, DA ಮತ್ತು ಸಂಬಳದಲ್ಲಿ ಮತ್ತೆ ಇಷ್ಟು ಹೆಚ್ಚಳ

2024 ರ ಬಜೆಟ್ ಮಂಡನೆಗೂ ಮುನ್ನವೇ ನೌಕರರ DA ಮತ್ತು ಸಂಬಳದಲ್ಲಿ ಮತ್ತೆ ಇಷ್ಟು ಹೆಚ್ಚಳ

Govt Employees DA Hike Update: ಹೊಸ ವರ್ಷದಲ್ಲಿ ಸರ್ಕಾರೀ ನೌಕರರಿಗೆ ಸಾಲು ಸಾಲು ಸುದ್ದಿಗಳ ಅಪ್ಡೇಟ್ ಹೊರಬೀಳುವುದು ಬಾಕಿ ಇದೆ. ಸರ್ಕಾರೀ ನೌಕರರು ಮುಖ್ಯವಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸರ್ಕಾರ ಸದ್ಯದ್ಲಲೇ DA ಹೆಚ್ಚಿಸುವುದಾಗಿ ಘೋಷಿಸಿದೆ.

ಇದಕ್ಕಾಗಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಜನವರಿ ಅಂತ್ಯದೊಳಗೆ ನೌಕರರ DA ಹೆಚ್ಚಿಸುವುದಾಗಿ ಸರ್ಕಾರ ಹೇಳಿಕೆ ನೀಡಿತ್ತು. ಅದರಂತೆ ಸರ್ಕಾರ ನೌಕರರ ವೇತನ ಹೆಚ್ಚಳ ಮಾಡಲಿದೆ. ಇದೀಗ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್ ಹೊರಬಿದ್ದಿದೆ.

Govt Employees DA Hike
Image Credit: Hindustantimes

ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ಸದ್ಯ 7 ನೇ ವೇತನದ ಅಡಿಯಲ್ಲಿ ನೌಕರರ ವೇತನ ಹೆಚ್ಚಳ ಜನವರಿ 30 ರೊಳಗೆ ಘೋಷಣೆ ಮಾಡಲಾಗುತ್ತದೆ. December AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಹೊಸ ವರ್ಷದ ಮೊದಲ ತಿಂಗಳಿನಲ್ಲಿ ನೌಕರರ DA ಹೆಚ್ಚಳವಾಗಲಿದೆ. ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ.

ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು. ಇನ್ನು ನೌಕರ DA ಹೆಚ್ಚಳದ ಜೊತೆಗೆ ಜನವರಿಯಲ್ಲಿ TA ಹಾಗೂ HRA ಕೊಡ ಹೆಚ್ಚಾಗುವ ಸಾಧ್ಯತೆ ಇದೆ. ಜನವರಿಯಲ್ಲಿ ಸರ್ಕಾರೀ ನೌಕರರಿಗೆ ಸಾಕಷ್ಟು ಅಪ್ಡೇಟ್ ಹೊರಬೀಳಲಿದೆ.

Govt Employees DA Hike Update
Image Credit: The Economic Times

DA ಮತ್ತು ಸಂಬಳದಲ್ಲಿ ಮತ್ತೆ ಇಷ್ಟು ಹೆಚ್ಚಳ
ನೌಕರರ DA ಹೆಚ್ಚಳದ ಜೊತೆಗೆ TA ಕೂಡ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಪ್ರಯಾಣ ಭತ್ಯೆಯನ್ನು ವೇತನ ಶ್ರೇಣಿಯ ಹೆಚ್ಚಳದೊಂದಿಗೆ ಸೇರಿಸಿದರೆ, TA ಹೆಚ್ಚಳವು ಇನ್ನು ಹೆಚ್ಚಾಗಲಿದೆ. ಪ್ರಯಾಣ ಭತ್ಯೆಯನ್ನು ವಿವಿಧ ಪೇ ಬ್ಯಾಂಡ್ ಗಳಿಗೆ ಲಗತ್ತಿಸಲಾಗುತ್ತದೆ. ಹೆಚ್ಚಿನ TPTA ನಗರಗಳಲ್ಲಿ ಗ್ರೇಡ್ 1 ರಿಂದ 2ರ ದರಗಳು ಕ್ರಮವಾಗಿ 1800 ರೂ. ಮತ್ತು 1900 ರೂ., ಗ್ರೇಡ್ 3 ರಿಂದ 3600 ರೂ. ತುಟ್ಟಿಭತ್ಯೆ ಆಗಿದೆ.

Join Nadunudi News WhatsApp Group

ಇನ್ನು 2024 ರಲ್ಲಿ HRA ಕೂಡ ಹೆಚ್ಚಾಗುವ ಸಾಧ್ಯತೆ ಇದೆ. HRA ನಲ್ಲಿ ಮುಂದಿನ ಪರಿಷ್ಕರಣೆ ದರವು 3 ಪ್ರತಿಶತ ಇರುತ್ತದೆ. ನಿಯಮಗಳ ಪ್ರಕಾರ, ಬಡತನ ಭತ್ಯೆ 50 ಮೀರಿದರೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ HRA ಕೂಡ ಶೇ. 27 ರಿಂದ 30 ರವರೆಗೆ ಹೆಚ್ಚಾಗಲಿದೆ. 2024 ರ ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರ DA ,HRA , TA , ಎಲ್ಲದರ ಬಗ್ಗೆ ಘೋಷಣೆ ಹೊರಡಿಸಲಿದೆ.

Join Nadunudi News WhatsApp Group