Employees Salary: ರಾಜ್ಯ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಜುಲೈ 1 ರಿಂದ 7ನೇ ವೇತನ ಆಯೋಗ ಜಾರಿ.

ಜುಲೈ 1 ರಿಂದ 7ನೇ ವೇತನ ಆಯೋಗ ಜಾರಿ

Govt Employees Salary Hike: ಸಧ್ಯ ದೇಶದಲ್ಲಿ ಕೇಂದ್ರ ನೌಕರರ ವೇತನದ ಬಗ್ಗೆ ಆಗಾಗ ಅಪ್ಡೇಟ್ ಹೊರಬೀಳುತ್ತದೆ. ಸದ್ಯ ಕೇಂದ್ರ ಸರ್ಕಾರ ಸರ್ಕಾರೀ ನೌಕರಿಗಾಗಿ ಸಾಕಷ್ಟು ವಿಷಯಗಳ ಬಗ್ಗೆ ಘೋಷಣೆ ಹೊರಡಿಸಿದೆ. ನೌಕರರ ವೇತನ ಹೆಚ್ಚಳ ಹಾಗೂ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯ ಬಗ್ಗೆ ಸರ್ಕಾರ ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿದೆ.

ಸದ್ಯ ಸರ್ಕಾರೀ ನೌಕರರಿಗೆ ಕೇಂದ್ರದಿಂದ ಸಿಹಿಸುದ್ದಿ ಹೊರಬಿದ್ದಿದೆ. ಶೀಘ್ರದಲ್ಲೆ ಸರ್ಕಾರೀ ನೌಕರರ ಸಂಬಳ ಬಾರಿ ಏರಿಕೆಯಾಗಲಿದೆ. ನೌಕರರ ಸಂಬಳ ಎಷ್ಟು ಏರಿಕೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Govt Employees Salary Hike
Image Credit: Trak

ರಾಜ್ಯ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ ನೀಡಿದೆ. 7ನೇ ವೇತನ ಆಯೋಗದ ವರದಿ ಜಾರಿಗೆ ತರಲು ಸಜ್ಜಾಗಿದ್ದು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೆ ತರಲು ಸಜ್ಜಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ. ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜುಲೈ 1 ರಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಜುಲೈ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಜುಲೈ 1 ರಿಂದ 7 ನೇ ವೇತನ ಆಯೋಗ ಜಾರಿ
A ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ C ಮತ್ತು D ದರ್ಜೆಯ ಉದ್ಯೋಗಿಗಳಿಗೆ ಜುಲೈ 1, 2022 ರಂದು ಮೂಲ ವೇತನವಾಗಿ 17,000. ಇದ್ದರೆ ತುಟ್ಟಿಭಟಿ ರೂ. 31 (ರೂ. 5,270) ಮತ್ತು ಶೇಕಡಾ 27.50 (ರೂ. 4,675) ಫಿಟ್‌ ಮೆಂಟ್‌ ಗೆ ಒಟ್ಟು 26,945 ಸಿಗುತ್ತದೆ. ಈಗ 2024 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನವು 27,000 ಆಗಿದ್ದರೆ, ಅಂದಾಜು ತುಟ್ಟಿ ಭತ್ಯೆ 8.5% (ರೂ. 2295), ಮನೆ ಬಾಡಿಗೆ ಭತ್ಯೆ 20% (ರೂ. 5,400), ವೈದ್ಯಕೀಯ 500 ಮತ್ತು ನಗರ ಪರಿಹಾರ ಭತ್ಯೆ (CCA) ) ರೂ. 750 ಸೇರಿ ಒಟ್ಟು 35,945 ರೂ. ಸಿಗಲಿದೆ (01-01-2024 ರಂತೆ) ಒಟ್ಟು ರೂ. 6ನೇ ವೇತನ ಆಯೋಗದಲ್ಲಿ ಸಿಗಲಿದೆ. 6ನೇ ವೇತನ ಆಯೋಗದಲ್ಲಿ ಒಟ್ಟು 29,005 ರೂ. ಸಿಗುತ್ತಿತ್ತು ಮತ್ತು ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ ಎನ್ನಲಾಗಿದೆ.

Govt Employees Salary Hike News
Image Credit: Hellobanker

Join Nadunudi News WhatsApp Group

Join Nadunudi News WhatsApp Group