Transfer Period: ಸರ್ಕಾರಿ ವರ್ಗಾವಣೆ ಮಾಡಿಕೊಳ್ಳುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಹೊಸ ಆದೇಶ

ಸರ್ಕಾರಿ ನೌಕರರ ವರ್ಗಾವಣೆ ಅವಧಿ ವಿಸ್ತರಣೆ

Govt Employees Transfer Period Extended: ಸರ್ಕಾರೀ ನೌಕರರು ಸರ್ಕಾರಕ್ಕೆ 7 ನೇ ವೇತನ ಆಯೋಗ ಪರಿಷ್ಕರಣೆ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬೇಡಿಕೆಯ ಜೊತೆಗೆ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮನವಿ ಮಾಡಿದೆ. ಸದ್ಯ ರಾಜ್ಯ ಸರ್ಕಾರ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ದೇಶವನ್ನು ಹೊರಡಿಸಿದೆ.

Govt Employees Transfer Period Extended
Image Credit: ipleaders

ಸರ್ಕಾರಿ ನೌಕರರ ವರ್ಗಾವಣೆ ಅವಧಿ ವಿಸ್ತರಣೆ
ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಸರ್ಕಾರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದೆ. ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಈ ಹಿಂದೆ ಆದೇಶ ನೀಡಲಾಗಿತ್ತು. ಈಗ ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಸಕ್ತ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಅವಧಿಯನ್ನು ಜುಲೈ 31 ರ ವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

2024ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಯನ್ನು ಜುಲೈ 9ರವರೆಗೆ ಷರತ್ತಿಗೆ ಒಳಪಟ್ಟು ಅಧಿಕಾರ ನೀಡುವಂತೆ ಆಯಾ ಇಲಾಖೆ ಸಚಿವರಿಗೆ ರಾಜ್ಯ ಸರ್ಕಾರ ಜೂನ್ 25ರಂದು ಆದೇಶ ನೀಡಿತ್ತು. ನೌಕರರ ವರ್ಗಾವಣೆ ದಿನಾಂಕ ವಿಸ್ತರಣೆಗೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಜುಲೈ 15ಕ್ಕೆ ಆದೇಶ ವಿಸ್ತರಿಸಲಾಗಿದ್ದು, ಇದೀಗ ಎರಡನೇ ಬಾರಿಗೆ ಪ್ರಸಕ್ತ ಸಾಲಿನ ಸರ್ಕಾರದ ಸಾಮಾನ್ಯ ವರ್ಗಾವಣೆ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಾಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

Govt Employees Transfer Period
Image Credit: HR News

ಸರ್ಕಾರದ ಆದೇಶ ಏನು…?
2024-25 ರಿಂದ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಮೇಲೆ ಓದಿದ ಸರ್ಕಾರಿ ಆದೇಶ (1) ರಲ್ಲಿ ನೀಡಲಾಗಿದೆ. ಸದರಿ ಆದೇಶದ ಕಲಂ 4(1) ರಲ್ಲಿ ದಿನಾಂಕ: 09.07.2024 ರವರೆಗೆ ಸದರಿ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳ ಅಡಿಯಲ್ಲಿ 2024-25 ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಯನ್ನು ಕೈಗೊಳ್ಳಲು ಆಯಾ ಇಲಾಖೆಯ ಮಂತ್ರಿಗಳನ್ನು ನಿಯೋಜಿಸಲಾಗಿದೆ ಮತ್ತು ಆದೇಶಿಸಲಾಗಿದೆ. ನಂತರ ಮೇಲೆ ಓದಿದ ಸರ್ಕಾರಿ ಆದೇಶ (2) ರಲ್ಲಿ, ಹೇಳಿದ ವರ್ಗಾವಣೆ ಅವಧಿಯನ್ನು ದಿನಾಂಕ: 15.07.2024 ರ ವರೆಗೆ ವಿಸ್ತರಿಸಲಾಯಿತು. ಇದಲ್ಲದೆ, ಸಾರ್ವತ್ರಿಕ ವರ್ಗಾವಣೆಯ ಅವಧಿಯನ್ನು ಈ ಕೆಳಗಿನಂತೆ ವಿಸ್ತರಿಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸುತ್ತದೆ.

Govt Employees Latest News
Image Credit: TV9bangla

Join Nadunudi News WhatsApp Group

Join Nadunudi News WhatsApp Group