Gram Panchayat Job: PUC ಪಾಸ್ ಆದವರಿಗೆ ಗ್ರಾಮ ಪಂಚಾಯತಿಯಲ್ಲಿ ಭರ್ಜರಿ ನೇಮಕಾತಿ, 63000 ರೂ ಸಂಬಳ

PUC ಪಾಸ್ ಆದವರಿಗೆ ಗ್ರಾಮ ಪಂಚಾಯತಿಯಲ್ಲಿ ಭರ್ಜರಿ ನೇಮಕಾತಿ

Karnataka Gram Panchayat Recruitment 2024: ದೇಶದಲ್ಲಿ ವಿವಿಧ ಸಂಸ್ಥೆಗಳು ಆಗಾಗ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ. ನಿರುದ್ಯೋಗಿಗಳು ಈ ಅವಕಾಶವನ್ನು ಬಳಸಿಕೊಂಡು ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವನ್ನು ಕಂಡುಕೊಳ್ಳಬಹುದು. ಇದೀಗ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ನಾವೀಗ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ…? ವೇತನ…? ವಯಸ್ಸಿನ ಮಿತಿ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Gram Panchayat Job
Image Credit: Oneindia

PUC ಪಾಸ್ ಆದವರಿಗೆ ಗ್ರಾಮ ಪಂಚಾಯತಿಯಲ್ಲಿ ಭರ್ಜರಿ ನೇಮಕಾತಿ
ಹೌದು ಇದೀಗ ವಿಜಯನಗರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಯ ಹೆಸರು ಗ್ರಂಥಾಲಯ ಮೇಲ್ವಿಚಾರಕ. ಇದೀಗ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಮೂಲಕ ಅರ್ಹ ಅಭ್ಯರ್ಥಿಗಳು ಈ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

*ಶೈಕ್ಷಣಿಕ ಅರ್ಹತೆ
ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 12 ನೇ ತರಗತಿ ತೇರ್ಗಡೆ ಹೊಂದಿರಬೇಕು. ಹಾಗೆ Certificate course in library science ಅನ್ನು ವಿಜಯನಗರ ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ಪೂರ್ಣಗೊಳಿಸಿರಬೇಕು.

Karnataka Gram Panchayat Recruitment 2024
Image Credit: Theweek

*ವಯಸ್ಸಿನ ಮಿತಿ
ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಆಗಿರಬೇಕು. ಅಲ್ಲದೆ ಮೂರು ವರ್ಷ ಕೆಟಗರಿ ಟು ಎ ,ಟು ಬಿ, ತ್ರೀ ಎ, 3 ಬಿ ಅಭ್ಯರ್ಥಿಗಳಿಗೆ ಹಾಗೂ ಐದು ವರ್ಷ SC, ST ಕೆಟಗರಿ ವನ್ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ.

Join Nadunudi News WhatsApp Group

*ವೇತನ ಹಾಗೂ ಅರ್ಜಿ ಸಲ್ಲಿಸುವ ವಿಧಾನ
ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಆಯ್ಕೆಯಾದವರಿಗೆ 19000 ದಿಂದ 63000 ದವರೆಗೆ ವೇತನವನ್ನು ನೀಡಲಾಗುತ್ತಿದೆ. ನಿಗದಿತ ಅರ್ಜಿ ನಮೂನೆಯ ಮೂಲಕ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಅರ್ಜಿ ದಾರರು Member Secretary, Selection Committee and Deputy Secretaries, ಜಿಲ್ಲಾ ಪಂಚಾಯತ್ ವಿಜಯನಗರ, Collector Office Building, TB Dam Road, Hospet 583225 ಇವರಿಗೆ ನಿಗದಿತ ದಿನಾಂಕದೊಳಗೆ ತಲುಪಿಸಬೇಕು.

Karnataka Gram Panchayat Recruitment
Image Credit: Education Times

Join Nadunudi News WhatsApp Group