WhatsApp Facility: ಇನ್ಮುಂದೆ ವಾಟ್ಸಾಪ್ ನಲ್ಲಿ ಗ್ರಾಮ ಪಂಚಾಯತಿಯ ಈ ಸೇವೆಗಳು ಲಭ್ಯ, ಸರ್ಕಾರದಿಂದ ಹೊಸ ಯೋಜನೆ

ಗ್ರಾಮ ಪಂಚಾಯತ್ ಸೇವೆಯನ್ನ ವಾಟ್ಸಾಪ್ ನಲ್ಲಿ ನೀಡಲು ಸರ್ಕಾರದ ಯೋಜನೆ

Gram Panchayat Services Available In WhatsApp: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸುತ್ತಿದೆ. ರಾಜ್ಯದ ಜನತೆ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಚಯಿಸಿರುವ ಬಹತೇಕ ಯೋಜನೆಗಳು ಎಲ್ಲರಿಗು ತಲುಪುತ್ತಿದೆ.

ಇನ್ನು ರಾಜ್ಯ ಸರ್ಕಾರ ಜನತೆಗೆ ಗ್ರಾಮ ಪಂಚಾಯತ್ ಗಳಲ್ಲಿ ಆಗುವ ಕೆಲಸಗಳನ್ನು ಸರಳಗೊಳಿಸಲು ಮಹತ್ವವಾದ ನಿರ್ಧಾರವನ್ನು ಕೈಗೊಂಡಿದೆ. ಹೌದು, ಇನ್ನುಮುಂದೆ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಗ್ರಾಮ ಪಂಚಾಯತ್ ಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಬದಲಾಗಿ ಆನ್ಲೈನ್ ಮೂಲಕ ಮನೆಯಲ್ಲಿ ಕುಳಿತು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು.

Whatsapp New Service
Image Credit: Whatsapp

ಇನ್ನುಮುಂದೆ ವಾಟ್ಸಾಪ್ ನಲ್ಲಿಯೇ ಗ್ರಾಮ ಪಂಚಾಯತ್ ಸೇವೆಗಳನ್ನು ಪಡೆಯಬಹುದು
ಇನ್ನುಮುಂದೆ ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಸಿಗುವ ಸೌಲಭ್ಯವನ್ನು Online ನ ಮೂಲಕ ಪಡೆಯಬಹುದು. ಗ್ರಾಮ ಸೇವೆಗಳಿಗಾಗಿ Online ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಗಳ ಪರಿಶೀಲನೆ, ಗ್ರಾಮ ಪಂಚಾಯತ್ ಮಟ್ಟದ ಎಲ್ಲ ಕುಂದುಕೊರತೆಗಳನ್ನು ದಾಖಲಿಸಿ WhatsApp ಚಾಟ್ ನ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಈ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ಪಂಚಾಯತ್ ರಾಜ್ ವತಿಯಿಂದ ಮಹತ್ವದ “ಪಂಚತಂತ್ರ” ವಾಟ್ಸಾಪ್ ನಂಬರ್ 8277506000 ಸಂಖ್ಯೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಜನಸಾಮಾನ್ಯರು ಈ WhatsApp ಸಂಖ್ಯೆಯ ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದು.

Gram Panchayat Services Available In WhatsApp
Image Credit: Economic Times

ಈ ರೀತಿಯಾಗಿ ವಾಟ್ಸಾಪ್ ಮೂಲಕ ಚಾಟ್ ಆರಂಭಿಸಿ
ನಿಮ್ಮ ಮೊಬೈಲ್ ನಲ್ಲಿ ನಂಬರ್ ಸೇವ್ ಮಾಡಿಕೊಂಡು ಚಾಟ್ ಆರಂಭಿಸಬೇಕು. ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ಬಳಿಕ ಆಯ್ಕೆಗಳು ಆರಂಭವಾಗುತ್ತದೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯತಿ ಆಯ್ಕೆ ಮಾಡಿ ಚುನಾಯಿತ ಪ್ರತಿನಿಧಿ ಸಿಬ್ಬಂದಿಯ ಮಾಹಿತಿ ಪಡೆಯಬಹುದು. ಈ ಹೊಸ ಸೌಲಭ್ಯದ ಬಗ್ಗೆ ಪ್ರಿಯಾಂಕಾ ಖರ್ಗೆ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group