Congress: ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲಾಯಿತು ಮೊದಲ ದೂರು, ಮೊದಲ ಗ್ಯಾರೆಂಟಿ ದೂರು.

ಗೃಹಜ್ಯೋತಿ ಯೋಜನೆಯ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ದೂರು.

Congress Gruha Jyothi Scheme: ಕಾಂಗ್ರೆಸ್ (Congress) ಸರ್ಕಾರ ಐದು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಜನಸಾಮಾನ್ಯರು ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಇನ್ನು ಗೃಹಜ್ಯೋತಿ ಯೋಜನೆಯ ಕುರಿತು ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಪೂರೈಕೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇನ್ನು 200 ಯೂನಿಟ್ ಫ್ರೀ ವಿದ್ಯುತ್ ಬಾಡಿಗೆದಾರರಿಗೂ ಲಭಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ ಇದೀಗ ಕಾಂಗ್ರೆಸ್ ನ ಗ್ಯಾರಂಟಿ ಕುರಿತಾಗಿ ಮೊದಲ ದೂರು ದಾಖಲಾಗಿದೆ. ಷರತ್ತುಗಳ ಅನ್ವಯದ ಮೇರೆ ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ದಾಖಲಾಗಿದೆ.

Citizen's Objection on Griha Jyoti Scheme
Image Credit: timesofindia

ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ದೂರು ದಾಖಲು
ಸಿಟಿಜೆನ್ಸ್ ರೈಟ್ಸ್ ಫೌಂಡೇಶನ್ ಗೃಹಜ್ಯೋತಿ ಯೋಜನೆಯ ಕುರಿತಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ದಾಖಲಿಸಿದ್ದಾರೆ. 12 ತಿಂಗಳ ಸರಾಸರಿ ಆಧಾರದ ಮೇಲೆ ವಿದ್ಯುತ್ ಫ್ರೀ ಕೊಡಲಾಗುವುದು. ಸರಾಸರಿ 70 ಯೂನಿಟ್ ಕರೆಂಟ್ ಬಳಸಿದ್ದರೆ ಅಥವಾ 199 ಯೂನಿಟ್ ಕರೆಂಟ್ ಬಳಕೆ ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Citizen's Objection on Griha Jyoti Scheme
Image Credit: governmentjobsinkarnataka

ಗೃಹಜ್ಯೋತಿ ಯೋಜನೆಯ ಕುರಿತು ಸಿಟಿಜೆನ್ಸ್ ಆಕ್ಷೇಪ
‘ಮಾಸಿಕ ಸರಾಸರಿ ಯುನಿಟ್ ಗಳ ಮೇಲೆ ಶೇ. 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿ ನಿಗದಿ ಆಗಿದೆ’ ಎಂದು ಸಿಟಿಜೆನ್ಸ್ ರೈಟ್ಸ್ ಫೌಂಡೇಶನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ದಾಖಲಿಸಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಉಳ್ಳವರು ಸೀಮಿತವೇ? ಬಡವರು ಬಡವರಾಗಿಯೇ ಉಳಿಯಬೇಕೆ?

ಗ್ಯಾರಂಟಿ ಕೊಡುಗೆ ಮೂಲಕ ಮನೆ ಮಾಲೀಕರಿಗಷ್ಟೇ ಜೈ, ಬಾಡಿಗೆದಾರರಿಗೆ ಕೈ? ಬಡವರು ಬಡವರಾಗಿಯೇ ಉಳಿಯಬೇಕೆ? ಗರಿಷ್ಠ ಮಿತಿಯನ್ನು ಮೀರಿದರೆ ಪೂರ್ಣ ಬಿಲ್ ಅನ್ನು ಪಾವತಿಸಬೇಕು ಎಂಬ ಷರತ್ತು ಹಾಗೂ ಸರಾಸರಿ ಸೂತ್ರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

Join Nadunudi News WhatsApp Group

Join Nadunudi News WhatsApp Group