Gruha Jyothi Update: ಸರ್ಕಾರದಿಂದ ಉಚಿತ ಕರೆಂಟ್ ಪಡೆಯುತ್ತಿರುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಡಬಲ್ ಲಾಭ.

ಗೃಹ ಜ್ಯೋತಿ ಫಲಾನುಭವಿಗಳಿಗೆ ಇನ್ಮುಂದೆ ಡಬಲ್ ಲಾಭ.

Gruha Jyothi Extra 10 Unit: ರಾಜ್ಯದ ಜನತೆಗೆ ವಿದ್ಯುತ್ ಬಿಲ್ ನ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ವಿಧಾನಸಭಾ ಚುನಾವಣಾ ವೇಳೆಯಲಿ ಐದು ಉಚಿತ ಗ್ಯಾರಂಟಿ ಘೋಷಣೆಯ ಸಮಯದಲ್ಲಿ Gruha Jyothi ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳುಗೆ ಉಚಿತ 200 ಯೂನಿಟ್ ವಿದ್ಯುತ್ ಅನ್ನು ನೀಡಲಾಗುತ್ತಿದೆ.

ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಸದ್ಯ ಗೃಹಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಉಚಿತ ವಿದ್ಯುತ್ ಫಲಾನುಭವಿಗಳಿಗೆ ಇನ್ನಷ್ಟು ಸೌಲಭ್ಯ ಜಾರಿಯಾಗಲಿದೆ.

Gruha Jyothi Latest Update
Image Credit: Hindustan Times

ಸರ್ಕಾರದಿಂದ ಉಚಿತ ಕರೆಂಟ್ ಪಡೆಯುತ್ತಿರುವವರಿಗೆ ಗುಡ್ ನ್ಯೂಸ್
ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ನಿಗದಿತ ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಅಂತವರು ಹೆಚ್ಚುವರಿ ಕರೆಂಟ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ.

ಗೃಹ ಜ್ಯೋತಿ ಯೋಜನೆಯಡಿ ಈ ಹಿಂದೆ ಬಳಸಲಾಗಿದ್ದ ಸರಾಸರಿ ಘಟಕಕ್ಕಿಂತ ಶೇ. ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ನೀಡಲಾಗಿತ್ತು. ಈಗ ಶೇಕಡಾವಾರು ಬದಲು ಸರಾಸರಿಗಿಂತ 10 ಯೂನಿಟ್ ಹೆಚ್ಚು ನೀಡಲು ಸರಕಾರ ನಿರ್ಧರಿಸಿದೆ. ಈ ಮೂಲಕ ಉಚಿತ ಕರೆಂಟ್ ಪಡೆಯುತ್ತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

Gruha Jyothi Extra 10 Unit
Image Credit: News9live

ಗೃಹ ಜ್ಯೋತಿ ಫಲಾನುಭವಿಗಳಿಗೆ ಇನ್ಮುಂದೆ ಡಬಲ್ ಲಾಭ
ಗೃಹ ಜ್ಯೋತಿ ಯೋಜನೆಯಡಿ, ತಿಂಗಳಿಗೆ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್ ಬಳಸುವ 70 ಲಕ್ಷ ಗ್ರಾಹಕರಿಗೆ ತಿಂಗಳಿಗೆ 10% ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

ಯಾರು ತಿಂಗಳಿನಲ್ಲಿ 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತಾರೋ ಅಂತವರು ಇನ್ನುಮುಂದೆ ಹೆಚ್ಚುವರಿಯಾಗಿ 10 ಯುನಿಟ್ ಅನ್ನು ಅಂದರೆ ಒಟ್ಟಾಗಿ 58 ಯುನಿಟ್ ಗಳನ್ನೂ ವಿದ್ಯುತ್ ಅನ್ನು ಉಚಿತ ಆಗಿ ಪಡೆಯಬಹುದು. ಈ ಸೌಲಭ್ಯ ಜಾರಿಗಾಗಿ ಸರ್ಕಾರ ವಾರ್ಷಿಕವಾಗಿ 398 ಕೋಟಿ ಖರ್ಚು ಮಾಡಲಿದೆ. ಇನ್ನುಮುಂದೆ ಗೃಹ ಜ್ಯೋತಿ ಫಲಾನುಭವಿಗಳು ಹೆಚ್ಚುವರಿ ವಿದ್ಯುತ್ ನ ಲಾಭವನ್ನು ಪಡೆಯಬಹುದು.

Join Nadunudi News WhatsApp Group