Gruha Jyothi: ತಂದೆ, ತಾಯಿ ಅಥವಾ ತಾತನ ಹೆಸರಿನಲ್ಲಿ ವಿದ್ಯುತ್ ಮೀಟರ್ ಇದ್ದರೆ ಹೊಸ ನಿಯಮ, ತಕ್ಷಣ ಈ ಕೆಲಸ ಮಾಡಿ.

ತಂದೆ, ತಾಯಿ ಅಥವಾ ತಾತನ ಹೆಸರಿನಲ್ಲಿ ವಿದ್ಯುತ್ ಮೀಟರ್ ಇದ್ದರೆ ಹೊಸ ನಿಯಮ

Gruha Jyothi New Rule: ರಾಜ್ಯ ಸರ್ಕಾರ ಪರಿಚಯಿಸಿರುವ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ Gruha Jyothi ಯೋಜನೆ ಕೂಡ ಒಂದಾಗಿದೆ. ರಾಜ್ಯದ ಲಕ್ಷಾಂತರ ಫಲಾನುಭವಿಗಳು ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ.

ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಂಡು ವರ್ಷವೇ ಕಳೆಯುತ್ತಾ ಬಂದಿದೆ. ಸದ್ಯ ಇದೀಗ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದೆ. ಹೌದು, ಗೃಹ ಜ್ಯೋತಿ ಫಲಾನುಭವಿಗಳು ತಕ್ಷಣ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Gruha Jyothi New Rule
Image Credit: Oneindia

ತಂದೆ, ತಾಯಿ ಅಥವಾ ತಾತನ ಹೆಸರಿನಲ್ಲಿ ವಿದ್ಯುತ್ ಮೀಟರ್ ಇದ್ದರೆ ಹೊಸ ನಿಯಮ
ಸಾಮಾನ್ಯವಾಗಿ ಗೃಹ ಜ್ಯೋತಿ ಲಾಭವನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಈ ಹೊಸ ನಿಯಮ ಸಮಸ್ಯೆಯನ್ನು ನೀಡಲಿದೆ. ಹೌದು, ಗೃಹ ಜ್ಯೋತಿ ಯೋಜನೆಯಡಿ ಯಾರು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದರೋ, ಅಂತವರ ವಿದ್ಯುತ್ ಮೀಟರ್ ಬೋರ್ಡ್ ತಂದೆ, ತಾಯಿ ಅಥವಾ ತಾತನ ಹೆಸರಿನಲ್ಲಿ ಹೊಸ ನಿಯಮ ಅನ್ವಯವಾಗಲಿದೆ.

ರಾಜ್ಯದಲ್ಲಿ ಗೃಹ ಜ್ಯೋತಿ ಸೌಲಭ್ಯ ಪಡೆಯುವಾಗ ಮೀಟರ್ ಬೋರ್ಡ್ ಯಾರ ಹೆಸರಿನಲ್ಲಿದೆ ಎನ್ನುವುದನ್ನು ಸರ್ಕಾರ ಗಮನಿಸಿದೆ.ಕರೆಂಟ್ ಬಿಲ್‌ ನಲ್ಲಿ ಅಕೌಂಟ್ ಐಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹಲವೆಡೆ ನಡೆಯುತ್ತಿದೆ ಎಂದು ಹೇಳಬಹುದು. ಅಪ್ಪ, ತಾತನ ಹೆಸರಲ್ಲಿ ಮೀಟರ್ ಬೋರ್ಡ್ ಇದ್ದು, ಅವರು ಮರಣ ಹೊಂದಿದ್ದಾರೆ ಇನ್ನುಮುಂದೆ ಅದು ತೊಂದರೆಯಾಗುತ್ತದೆ. ಈ ರೀತಿ ಇದ್ದರೆ ನೀವು ತಕ್ಷಣ ಅದನ್ನು ಸರಿಪಡಿಸಿಕೊಳ್ಳಬೇಕಿದೆ.

Gruha Jyothi Scheme In karnataka
Image Credit: Oneindia

ವಿದ್ಯುತ್ ಮೀಟರ್ ಬೋರ್ಡ್ ನಲ್ಲಿನ ಹಳೆಯ ಹೆಸರನ್ನು ಬದಲಾಯಿಸುವುದು ಹೇಗೆ…?
•ತಂದೆ, ತಾಯಿ ಅಥವಾ ತಾತನ ಹೆಸರಿನಲ್ಲಿ ಇರುವ ವಿದ್ಯುತ್ ಮೀಟರ್ ಬೋರ್ಡ್ ಅನ್ನು ಬದಲಾಯಿಸಲು ನೀವು ಆಧಾರ್ ಕಾರ್ಡ್‌ ನೊಂದಿಗೆ ಅರ್ಜಿ ಸಲ್ಲಿಸಬೇಕು.

Join Nadunudi News WhatsApp Group

•200 ರೂಪಾಯಿ ಸ್ಟಾಂಪ್ ಪೇಪರ್ ಮೇಲೆ ಒಪ್ಪಿಗೆ ಸೂಚಿಸುವ ಲಿಖಿತ ರೂಪದಲ್ಲಿರಬೇಕು.

•ಅರ್ಜಿ ನಮೂನೆಯಲ್ಲಿ ವಿದ್ಯುತ್ ಖಾತೆ ಸಂಖ್ಯೆ ಮತ್ತು ಸಹಿಯನ್ನು ಒಳಗೊಂಡಿರಬೇಕು.

•ವಿದ್ಯುತ್ ಮೀಟರ್ ಮಾಲೀಕರು ಸತ್ತಿದ್ದರೆ ಅವರ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು ಮತ್ತು ಅವರು ಇನ್ನೂ ಜೀವಂತವಾಗಿದ್ದರೆ ಅವರ ಒಪ್ಪಿಗೆಗೆ ಸಹಿ ಹಾಕಬೇಕು.

•ಋಣ ರಹಿತ ರಶೀತಿ ಮತ್ತು ಹೆಸರು ಬದಲಾವಣೆ ಅರ್ಜಿಯೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ವಿದ್ಯುತ್ ಮೀಟರ್‌ ನ ಹೆಸರನ್ನು ಬದಲಾಯಿಸಬಹುದು.

Gruha Jyothi Scheme Latest News
Image Credit: tnpds

Join Nadunudi News WhatsApp Group