Gruha Jyothi: ಇನ್ಮುಂದೆ ಇಂತವರಿಗಿಲ್ಲ ಗೃಹಜ್ಯೋತಿ ಉಚಿತ ಕರೆಂಟ್, ಇನ್ಮುಂದೆ ಕಟ್ಟಬೇಕು ಫುಲ್ ಬಿಲ್

ಇನ್ನುಮುಂದೆ ಇಂತವರು ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದ್ದರೂ ಕಟ್ಟಬೇಕು ಫುಲ್ ಬಿಲ್

Gruha Jyothi Latest Update: ರಾಜ್ಯದಲ್ಲಿ Gruha Jyothi ಯೋಜನೆ ಯಶಸ್ವಿಯಾಗಿ ಜನರಿಗೆ ತಲುಪುತ್ತಿದೆ. ರಾಜ್ಯದ ಅರ್ಹ ಜನರು ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಉಚಿತ ವಿದ್ಯುತ್ ಬಳಕೆದಾರರು ಇಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರ ನಿಗದಿಪಡಿಸಿದಷ್ಟು ವಿದ್ಯುತ್ ಅನ್ನು ಉಚಿತವಾಗಿ ಬಳಸುತ್ತಿದ್ದರು. ನಿಗದಿತ ಮಿತಿಗಿಂತ ಹೆಚ್ಚಿನ ಬಳಕೆಗೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು.

ಆದರೆ ಸದ್ಯ ಬೇಸಿಗೆಗಾಲ ಆರಂಭವಾದ ಕಾರಣ ವಿದ್ಯುತ್ ಗೆ ಬೇಡಿಕೆ ಹೆಚ್ಚುತ್ತಿದೆ. ಬೇಸಿಗೆಯ ಶೆಕೆಗೆ ಜನರು ರೋಸಿಹೋಗಿದ್ದು, ಎಸಿ, ಕೂಲರ್, ಫ್ಯಾನ್ ಗಳ ಬಳಕೆ ಹೆಚ್ಚು ಮಾಡಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದ್ದರೂ ಫುಲ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ.

Gruha Jyothi Latest Update
Image Credit: Oneindia

ಇನ್ಮುಂದೆ ಇಂತವರಿಗಿಲ್ಲ ಗೃಹಜ್ಯೋತಿ ಉಚಿತ ಕರೆಂಟ್
ಈ ಬೇಸಿಗೆ ಕಾಲದಲ್ಲಿ ವಿದ್ಯುತ್ ಹೆಚ್ಚು ಬೇಕಾಗುತ್ತದೆ. ಎಲ್ಲರು ಕೂಡ ತಮ್ಮ ಮಿತಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತಾರೆ. ಈ ಮೂಲಕ ಉಚಿತ ವಿದ್ಯುತ್ ನ ಲಾಭ ಇದ್ದರು ಕೂಡ ಹೆಚ್ಚಿನ ಬಿಲ್ ಪಾವತಿ ಅನಿವಾರ್ಯವಾಗಿದೆ. ಇನ್ನು ಉಚಿತ ವಿದ್ಯುತ್ ಬಳಕೆದಾರರಿಗೆ 2022 -23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗಿತ್ತು. ಇನ್ನು ಆಯಾ ಬಳಕೆದಾರರಿಗೆ ನಿಗದಿಪಡಿಸಿದಷ್ಟು ಯುನಿಟ್ ಅನ್ನು ಬಳಕೆದಾರರು ಉಚಿತವಾಗಿ ಪಡೆಯುತ್ತಿದ್ದರು.

ನಿಗದಿತ ಸರಾಸರಿ 150 ಉಚಿತ ಯೂನಿಟ್‌ ಗಳಿಗಿಂತ 50 ಯೂನಿಟ್‌ ಗಳನ್ನು ಹೆಚ್ಚು ಬಳಕೆ ಮಾಡಿದರೆ ಪ್ರತಿ ಯೂನಿಟ್‌ ಗೆ 7 ರೂ. ಪಾವತಿಸಬೇಕು. ಈಗ ಬಿಸಿಲಿನಿಂದಾಗಿ ಶೇ.20ರಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಿಂದಾಗಿ ಗೃಹ ಜ್ಯೋತಿ ಬಳಕೆದಾರರೂ ಸಹ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಘಟಕಗಳಿಗೆ ನಿಗದಿತ ದರದಂತೆ ಬಿಲ್ ಪಾವತಿಸಬೇಕಾಗಿದೆ.

Gruha Jyothi Scheme In karnataka
Image Credit: Kannada News

ಇನ್ಮುಂದೆ ಕಟ್ಟಬೇಕು ಫುಲ್ ಬಿಲ್
ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಶೇ.20ಕ್ಕೂ ಹೆಚ್ಚು ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ನೀಡಿದೆ. ಒಂದು ಕುಟುಂಬವು ಸರಾಸರಿ 200 ಯೂನಿಟ್‌ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ಎಲ್ಲಾ ಘಟಕಗಳಿಗೆ ಬಿಲ್ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರಿಗೆ ಮಾತ್ರ ಉಚಿತ ವಿದ್ಯುತ್ ನ ಲಾಭ ದೊರೆಯುತ್ತದೆ. ನೀವು ಈ ಬೇಸಿಗೆ ಗಾಲದಲ್ಲಿ ವಿದ್ಯುತ್ ಬಳಸುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿ. ಅತಿಯಾದ ವಿದ್ಯುತ್ ಬಳಕೆಯಿಂದಾಗಿ ಉಚಿತ ವಿದ್ಯುತ್ ನ ಲಾಭದಿಂದ ವಂಚಿತರಾಗಬಹುದು. ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ನಿಮ್ಮ ಜೇಬಿನಿಂದಲೇ ಹಣವನ್ನು ನೀಡಬೇಕಾಗುತ್ತದೆ ಎನ್ನುವುದರ ಅರಿವು ನಿಮಗಿರಲಿ.

Free Electricity Scheme
Image Credit: Times Property

Join Nadunudi News WhatsApp Group