D- Link: ಇನ್ಮುಂದೆ ಈ ಜನರು ಕೂಡ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಬಹುದು, ಸರ್ಕಾರದ ಹೊಸ ರೂಲ್ಸ್

ಗೃಹಜ್ಯೋತಿ ಯೋಜನೆಯಲ್ಲಿ ಮತ್ತೆ ಬದಲಾವಣೆ

Gruha Jyothi D- Link Facility: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳು ಜಾರಿಯಾಗಿದ್ದರು ಕೂಡ ಆಗದ ಯೋಜನೆಗಳಿಗೆ ಹೊಸ ನಿಯಮಗಳು ಜಾರಿಯಾಗುವ ಮೂಲಕ ಯೋಜನೆಯಲ್ಲಿ ಬದಲಾವಣೆ ಆಗುತ್ತಾ ಇರುತ್ತದೆ. ಸದ್ಯ ರಾಜ್ಯದ ಜನತೆ ವಿದ್ಯುತ್ ಬಳಕೆಯ ಬಗ್ಗೆ ಚಿಂತೆ ಮಾಡುವಂತಿಲ್ಲ. ಕಾರಣ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ಫಲಾನುಭವಿಗಳು ಉಚಿತ ವಿದ್ಯುತ್ ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

Gruha Jyothi scheme New Update
Image Credit: Currentaffairs

ಮನೆ ಖಾಲಿ ಮಾಡಿದರು ಕೂಡ ಗೃಹ ಜ್ಯೋತಿ ಯೋಜನೆಯನ್ನು ಬಳಸಬಹುದು…!
ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಇನ್ನೊಂದು ಘೋಷಣೆ ಹೊರಡಿಸಿದೆ. ಈ ಬಗ್ಗೆ ಇಂಧನ ಇಲಾಖಾ ಕಾರ್ಯದರ್ಶಿ ಅಪರ್ಣ ಅವರು ಮಾಹಿತಿ ನೀಡಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಸೇವಾ ತಂತ್ರಾಂಶದಲ್ಲಿ D- Link ಸೌಲಭ್ಯ ಕಲ್ಪಿಸಲಾಗಿದೆ. ಈ ಮೂಲಕ ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ನೀಡಿದೆ. ಸೇವಸಿಂಧು ಪೋರ್ಟಲ್ ನಲ್ಲಿ ಇನ್ನುಮುಂದೆ ಡಿ ಲಿಂಕ್ ಆಯ್ಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

D- Link ಪ್ರಕ್ರಿಯೆಯ ಬಗ್ಗೆ ವಿವರ ಇಲ್ಲಿದೆ
ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿದ್ದು ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಹಾಗೂ ಆ ಮನೆಯನ್ನು ಬದಲಾಯಿಸಿದರೆ ಹಳೆಯ ಯೋಜನೆಯ ನೋಂದಣಿಯನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ನಂಬರ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ D-Link ಪ್ರಕ್ರಿಯೆ ಎನ್ನಲಾಗುತ್ತದೆ. ನೀವು ಆನ್ಲೈನ್ ನಲ್ಲಿ ಕೂಡ ಡಿ-ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

Gruha Jyothi D- Link Facility
Image Credit: News9 Live

ಇನ್ನುಮುಂದೆ 10 ಯುನಿಟ್ ಹೆಚ್ಚು ವಿದ್ಯುತ್ ಅನ್ನು ಪಡೆಯಬಹುದು
ಸದ್ಯ ಗೃಹ ಜ್ಯೋತಿ ಯೋಜನೆಯ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.
ಈವರೆಗೆ ಗೃಹ ಜ್ಯೋತಿ ಯೋಜನೆಯ ನೋಂದಣಿಯನ್ನು ಸೇವಾ ಸಿಂಧು ಪೋರ್ಟಾಲ್ ನ ಮೂಲಕ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಈ ಪೋರ್ಟಲ್ ನ ಬದಲಾಗಿ ಹೊಸ ಪೋರ್ಟಲ್ ನಲ್ಲಿ ಗೃಹ ಲಕ್ಷ್ಮಿ ನೋಂದಣಿಗೆ ಸರಕಾರ ಅನುಮತಿ ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ.

ಇದರ ಜೊತೆಗೆ ಗೃಹ ಜ್ಯೋತಿ ಯೋಜನೆಯಡಿ, ತಿಂಗಳಿಗೆ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್ ಬಳಸುವ 70 ಲಕ್ಷ ಗ್ರಾಹಕರಿಗೆ ತಿಂಗಳಿಗೆ 10% ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

Join Nadunudi News WhatsApp Group

Join Nadunudi News WhatsApp Group