Free Electricity: ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿ ಇದ್ದವರಿಗೆ ಬೇಸರದ ಸುದ್ದಿ, ಈ ತಿಂಗಳು ಕಟ್ಟಬೇಕು ಪೂರ್ತಿ ಬಿಲ್.

ಇಂತಹ ಜನರು ಈ ತಿಂಗಳು ಸಂಪೂರ್ಣ ವಿದ್ಯುತ್ ಬಿಲ್ಲ ಪಾವತಿ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

Gruha Jyothi Free Electricity: ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಜನರಿಗೆ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನ ಈಡೇರಿಸುವ ಕೆಲಸವನ್ನ ಮಾಡುತ್ತಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಭರವಸೆ ನೀಡಿದ್ದ ಬಹು ನಿರೀಕ್ಷಿತ ಯೋಜನೆಯಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದಾಗಿದೆ.

ಹೌದು ಜನರಿಗೆ 200 ಯೂನಿಟ್ ತನಕ ಉಚಿತವಾಗಿ ಕರೆಂಟ್ ನೀಡುವ ಯೋಜನೆಯನ್ನ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ಈ ತಿಂಗಳಿಂದ ಈ ಯೋಜನೆ ಅನ್ವಯ ಆಗಲಿದೆ ಎಂದು ತಿಳಿಸಿದೆ. ಇದರ ನಡುವೆ ಈಗ ಸರ್ಕಾರ ಇನ್ನೊಂದು ಘೋಷಣೆ ಮಾಡಿದ್ದು ಇಂತಹ ಜನರು ಈ ತಿಂಗಳು ಕೂಡ ಸಂಪೂರ್ಣ್ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ತಿಳಿಸಿದೆ.

The government said that such people should pay the entire electricity bill this month.
Image Credit: adda247

ಆಗಸ್ಟ್ ನಿಂದ ಕರೆಂಟ್ ಬಿಲ್ ಉಚಿತ
ಹೌದು ಕಾಂಗ್ರೆಸ್ ಸರ್ಕಾರದ ಘೋಷಣೆಯ ಪ್ರಕಾರ ಈ ತಿಂಗಳಿಂದ ಯಾವುದೇ ಕುಟುಂಬ ಕೂಡ 200 ಯೂನಿಟ್ ತನಕ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇರುವುದಿಲ್ಲ. ಈಗಾಗಲೇ ಕೋಟ್ಯಂತರ ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದು ಇನ್ನು ಕೂಡ ಸಾಕಷ್ಟು ಜನರು ಅರ್ಜಿ ಹಾಕುವುದು ಭಾಕು ಉಳಿದುಕೊಂಡಿದೆ. ಇದರ ನಡುವೆ ಈಗ ಕಾಂಗ್ರೆಸ್ ಸರ್ಕಾರ ಇಂತಹ ಜನರು ಈ ತಿಂಗಳು ಕೂಡ ಸಂಪೂರ್ಣ ಕರೆಂಟ್ ಬಿಲ್ಲ ಕಟ್ಟಬೇಕು ಎಂದು ಆದೇಶವನ್ನ ಹೊರಡಿಸಿದೆ.

ಇಂತಹ ಜನರು ಈ ತಿಂಗಳು ಕಟ್ಟಬೇಕು ಕರೆಂಟ್ ಬಿಲ್
ಹೌದು ಜೂಲೈ 27 ರ ನಂತರ ಯಾರು ಯಾರುಂ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದಾರೋ ಅವರೆಲ್ಲರೂ ಆಗಸ್ಟ್ ತಿಂಗಳಲ್ಲಿ ಕೂಡ ಕರೆಂಟ್ ಬಿಲ್ ಪಾವತಿ ಮಾಡಬೇಕು ಎಂದು ಸರ್ಕಾರ ಆದೇಶವನ್ನ ಹೊರಡಿಸಿದೆ. ಯಾರು ಜೂಲೈ 27 ರ ಒಳಗೆ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೋ ಅವರಿಗೆಲ್ಲ ಆಗಸ್ಟ್ ತಿಂಗಳಲ್ಲಿ ಕರೆಂಟ್ ಉಚಿತ ಎಂದು ಸರ್ಕಾರ ಈಗ ಇನ್ನೊಂದು ಆದೇಶ ಹೊರಡಿಸಿದೆ.

Those who applied after July 27 have to pay the electricity bill this month also.
Image Credit: karnatakahelp

ಸದ್ಯ ಸರ್ಕಾರದ ಈ ನಿರ್ಧಾರ ಕೆಲವು ಜನರ ಬೇಸರಕ್ಕೆ ಕಾರಣವಾಗಿದೆ. ಮುಂದಿನ ತಿಂಗಳಿಂದ ರಾಜ್ಯದಲ್ಲಿ ಬಹುತೇಕ ಎಲ್ಲಾ ಜನರಿಗೆ ಉಚಿತ ಕರೆಂಟ್ ಸಿಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈ ತಿಂಗಳಲ್ಲಿ ಕರೆಂಟ್ ಬಿಲ್ ಹೇಗೆ ಬರುತ್ತದೆ ಎಂದು ನೋಡಲು ಜನರು ಕಾದು ಕುಳಿತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group