Gruha Lakshmi: ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 11 ನೇ ಕಂತಿನ ಹಣ ಬಿಡುಗಡೆ, ಈ ರೀತಿಯಲ್ಲಿ ಖಾತೆ ಚೆಕ್ ಮಾಡಿ.

ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 11 ನೇ ಕಂತಿನ ಹಣ ಬಿಡುಗಡೆ

Gruha Lakshmi 11th Installment New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 10 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈವರೆಗೆ 20000 ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ 11 ಕಂತಿನ ಹಣದ ಬಿಡುಗಡೆಗಾಗಿ ಸಿದ್ಧತೆ ಮಾಡಿಕೊಂಡಿದೆ.

ಜೂನ್ ನಲ್ಲಿ 11 ಕಂತಿನ ಹಣದ ಬರುವಿಕೆಯಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು ಕಾಯುತ್ತಿದ್ದಾರೆ. 11 ನೇ ಕಂತಿನ ಹಣದ ಬರುವಿಕೆಗಾಗಿ ಕಾಯುತ್ತಿದ್ದ ಜನರಿಗೆ ಇದೀಗ ಬಿಗ್ ಅಪ್ಡೇಟ್ ಹೊರಬಿದ್ದಿದೆ. 1 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

Gruha Lakshmi Status Check
Image Credit: News9 Live

ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 11 ನೇ ಕಂತಿನ ಹಣ ಬಿಡುಗಡೆ
ಗೃಹ ಲಕ್ಷ್ಮಿ ಫಲಾನುಭವಿಗಳು ಇದೀಗ 11 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 11 ನೇ ಕಂತಿನ ಹಣದ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ 11 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೃಹ ಲಕ್ಷ್ಮೀ ಪಲಾನುಭವಿಗಳಿಗೆ 11 ನೇ ಕಂತಿನ ಹಣ ಜೂನ್ 20 ರಂದು ಜಮಾ ಆಗಲಿದೆ. ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಜೂನ್ 20 ರ ನಂತರ ಫಲಾನುಭವಿಗಳು 11 ನೇ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು. 11 ನೇ ಕಂತಿನ ಹಣ ಜಮಾ ಆಗುವೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

Join Nadunudi News WhatsApp Group

Gruha Lakshmi 11th Installment New Update
Image Credit: Kannada News

ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ
•Google Play Store ನಿಂದ ಅಧಿಕೃತ DBT Karnataka Mobile App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

•ನಂತರ ಅರ್ಜಿದಾರರು ತಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

•ನಿಮ್ಮ ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 6 ಅಂಕಿಯ OTP ಅನ್ನು ನಮೂದಿಸಬೇಕು.

•OTP ಅನ್ನು ನಮೂದಿಸಿದ ನಂತರ, ನಾಲ್ಕು (4) ಅಂಕಿಯ ಪಾಸ್‌ ವರ್ಡ್ ಅನ್ನು ರಚಿಸಿ.

•ನಂತರ ಇಲ್ಲಿ ಅರ್ಜಿದಾರರು ಅಂದರೆ ನಿಮ್ಮ ವೈಯಕ್ತಿಕ ವಿವರಗಳು ತೋರುತ್ತದೆ. ಕೊನೆಯ ಕಲಾಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಮತ್ತು “ಸರಿ” ಬಟನ್ ಅನ್ನು ಕ್ಲಿಕ್ ಮಾಡಿ.

•ನಂತರ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಈಗಾಗಲೇ ರಚಿಸಲಾದ ಪಾಸ್ವರ್ಡ್ ಅನ್ನು ಹಾಕಿ.

•ನಂತರ “ಪಾವತಿ ಸ್ಥಿತಿ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಗೃಹ ಲಕ್ಷ್ಮಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿದರೆ, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಯಾವ ದಿನಾಂಕವನ್ನು ಹಣ ಠೇವಣಿ ಮಾಡಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿಯುತ್ತದೆ.

Gruha Lakshmi 11th Installment
Image Credit: Karnataka Times

Join Nadunudi News WhatsApp Group